- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯನಿವೃತ್ತ ಯೋಧನಿಗೆ ಬಸವನಾಡಿನಲ್ಲಿ ಅದ್ಧೂರಿ ಸ್ವಾಗತ

ನಿವೃತ್ತ ಯೋಧನಿಗೆ ಬಸವನಾಡಿನಲ್ಲಿ ಅದ್ಧೂರಿ ಸ್ವಾಗತ

ಬಸವನ ಬಾಗೇವಾಡಿ: ರೈತ ಹಾಗೂ ಯೋಧ (Retired warrior) ದೇಶದ ಎರಡು ಕಣ್ಣುಗಳು, ದೇಶದ ಜನತೆಗೆ ಅನ್ನ ನೀಡುವ ರೈತ ಒಂದು ಕಣ್ಣಾದರೆ, ಜೀವದ ಹಂಗು ತೊರೆದು ದೇಶದ ರಕ್ಷಣೆಗಾಗಿ ಜೀವನ ಮುಡುಪಾಗಿಟ್ಟ ಯೋಧ (grand procession) ಇನ್ನೊಂದು ಕಣ್ಣು ಎಂದು (Basavana Bagewadi) ಕರ್ನಾಟಕ ಸಹಕಾರ ಮಹಾ ಮಂಡಳದ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಹೇಳಿದರು.

ಪಟ್ಟಣದ (Basavana Bagewadi) ಮಸಬಿನಾಳ ರಸ್ತೆಯ ಎಲ್.ಟಿ.ನಂ.3ರಲ್ಲಿ ನಡೆದ ಭಾರತೀಯ ಸೇನೆಯಲ್ಲಿ 17ವರ್ಷ ಹಾಗೂ ಹಟ್ಟಿ ಚಿನ್ನದ ಗಣಿ ಭದ್ರತಾ ವಿಭಾಗದಲ್ಲಿ 19 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ತಾಯ್ನಾಡಿಗೆ ಮರಳಿದ ವೀರಯೋದ ಸುಭಾಶ್ಚಂದ್ರ ಲಕ್ಷ್ಮಣ ರಾಠೋಡ ಅವರಿಗೆ ಆದ್ದೂರಿಯಾಗಿ ಸ್ವಾಗತ ಕೋರಿ ನಂತರ ನಡೆದ ಸನ್ಮಾನ ಸಮಾರಂಭದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.

ದೇಶ ಕಾಯುವ ಯೋಧರು ದೇವರಿಗೂ ಮೀಗಿಲಾದವರು, ಇವರು ಇಂದಿನ ಯುವಕರಿಗೆ ಮಾರ್ಗದರ್ಶಕರಾಗಿ ಅವರಲ್ಲಿ ದೇಶ ಪ್ರೇಮ ಹೆಚ್ಚಿಸುವ ಕಾರ್ಯ ಮಾಡುವದರ ಜೊತೆಗೆ ಸಮಾಜಗಳ ಅಭಿವೃದ್ಧಿಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಮಾದರಿಯಾಗಬೇಕೆಂದು ಹೇಳಿದರು.

ಕೇಸರಟ್ಟಿ ಮಠದ ಸೋಮಲಿಂಗ ಮಹಾಸ್ವಾಮೀಜಿ ಸಾನಿಧ್ಯವಹಿಸಿ ಮಾತನಾಡಿ ಸುಭಾಶ್ಚಂದ್ರ ರಾಠೋಡರವರು ಭಾರತೀಯ ಸೇನೆಗೆ ಸೇರಿ ದೇಶ ಕಾಯುವ ಗುರುತರ ಸೇವೆ ಮಾಡಿ ನಿವೃತ್ತರಾಗಿ ನಂತರ ಹಟ್ಟಿ ಚಿನ್ನದ ಗಣಿಯಲ್ಲಿ ಭದ್ರತಾ ವಿಭಾಗದಲ್ಲಿ ತಮ್ಮ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿ ನಿವೃತ್ತಿಯ ನಂತರ ತಾಯ್ನಾಡಿಗೆ ಆಗಮಿಸಿರುವದು ಹೆಮ್ಮೆಯ ಸಂಗತಿಯಾಗಿದ್ದು. ಮುಂದಿನ ದಿನಮಾನಗಳಲ್ಲಿ ಸಮಾಜ ಸೇವೆಗೆ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತಾಗಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಡಾ. ಬಸವರಾಜ ಚವ್ಹಾಣ, ನ್ಯಾಯವಾದಿ ರವಿ ರಾಠೋಡ, ಮಾತನಾಡಿದರು. ಪುರಸಭೆ ಮಾಜಿ ಅಧ್ಯಕ್ಷ ಬಸಣ್ಣ ದೇಸಾಯಿ, ಮುಖಂಡರಾದ ರಮೇಶ ರಾಠೋಡ, ಗೋಪಾಲ ಸಾರವಾಡ, ಹರಿಲಾಲ ನಾಯಕ ಸೇರಿದಂತೆ ಇತರರು ಇದ್ದರು. ಗುರುರಾಜ ಕನ್ನೂರ ನಿರೂಪಿಸಿ ವಂದಿಸಿದರು.

ಭವ್ಯ ಮೆರವಣಿಗೆ: ಪಟ್ಟಣಕ್ಕಾಗಮಿಸಿದ ನಿವೃತ್ತ ಯೋಧ ಸುಭಾಶ್ಚಂದ್ರ ರಾಠೋಡ ಹಾಗೂ ಅವರ ಧರ್ಮಪತ್ನಿ ಅವರನ್ನು ಹೂವಿನ ಹಾರಗಳಿಂದ ಶೃಂಗರಿಸಿದ ತೆರೆದ ವಾಹನದಲ್ಲಿ ಪಟ್ಟಣದ ಬಸವೇಶ್ವರ ವೃತ್ತ, ನಿಯೋಜಿತ ಚನ್ನಮ್ಮ ಸರ್ಕಲ್, ಮಸಬಿನಾಳ ಸೇರಿ ವಿವಿಧ ಕಡೆಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಯುವಕ ಯುವತಿಯರು ಡಿಜೆ ಸೌಂಡಿಗೆ ಹೆಜ್ಜೆ ಹಾಕಿ ಮೆರವಣಿಗೆ ನಡೆಸಿದರು. ಮೆರವಣಿಗೆ ದಾರಿಯುದ್ದಕ್ಕೂ ಭಾರತ ಮಾತಾ ಕಿ ಜೈ ಎನ್ನುವ ಘೋಷಣೆಗಳು ಮುಗಿಲು ಮುಟ್ಟಿದವು. ಮೆರವಣಿಗೆಯಲ್ಲಿ ನಿವೃತ್ತ ಯೋಧರ ಸಂಘದ ಸದಸ್ಯರು ಹಾಗೂ ಮುಖಂಡರುಗಳು ಭಾಗವಹಿಸಿದ್ದರು.

ವರದಿ: ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!