- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಕಸ ವಿಲೇವಾರಿ ಸಮಸ್ಯೆ. ಈರಣ್ಣ ಪಟ್ಟಣಶೆಟ್ಟಿ ಸಮ್ಮುಖದಲ್ಲಿ ಇತ್ಯರ್ಥ

ಕಸ ವಿಲೇವಾರಿ ಸಮಸ್ಯೆ. ಈರಣ್ಣ ಪಟ್ಟಣಶೆಟ್ಟಿ ಸಮ್ಮುಖದಲ್ಲಿ ಇತ್ಯರ್ಥ

ಬಸವನಬಾಗೇವಾಡಿ: ಪಟ್ಟಣದ ಇವಣಗಿ ರಸ್ತೆಯಲ್ಲಿರುವ ಮರಾಠಾ ಜನಾಂಗದ ತೋಟದ ಮನೆಗಳ ಹತ್ತಿರವಿರುವ ಪುರಸಭೆಯ (Basavana Bagewadi Purasabhe) ಕಸ ವಿಲೇವಾರಿ ಘಟಕದ (Garbage disposal unit) ಸಮಸ್ಯೆಯನ್ನು ಕಾಂಗ್ರೆಸ್ ಪಕ್ಷದ ಜಿಲ್ಲಾ ಪ್ರಧಾನಕಾರ್ಯದರ್ಶಿ ಮುಖಂಡ ಈರಣ್ಣ ಪಟ್ಟಣಶೆಟ್ಟಿ (Iranna Pattanashetti) ಅವರ ಮಧ್ಯಸ್ಥಿಕೆಯಲ್ಲಿ ಇತ್ಯರ್ಥವಾಯಿತು.

ಪುರಸಭೆಯ ಕಸ ವಿಲೆವಾರಿ ಘಟಕ ತೋಟದ ಮನೆಗಳಿಗೆ ತುಂಬಾ ಹತ್ತಿರದಲ್ಲಿದ್ದು ವಿಪರೀತ ಸೊಳ್ಳೆ ಕಾಟದಿಂದ ಬೆಸತ್ತು ಕಸ ವಿಲೇವಾರಿ ಘಟಕ ಸ್ಥಳಾಂತರಕ್ಕೆ ಆಗ್ರಹಿಸಿ ಕಳೆದ ಮೂರು ತಿಂಗಳಿಂದ ಘಟಕಕ್ಕೆ ಬೀಗ ಜಡಿದು ಧರಣಿ ಆರಂಭಿಸಿದ್ದರ ಪರಿಣಾಮ ಪಟ್ಟಣದಲ್ಲಿನ ಕಸ ವಿಲೇವಾರಿಗೆ ಸಮಸ್ಯೆಗೆ ಸಾರ್ವಜನಿಕರು ಪುರಸಭೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುವಂತಾಗಿತ್ತು. ಸಮಸ್ಯೆ ಇತ್ಯರ್ಥಕ್ಕಾಗಿ ಹಲವಾರು ಸಭೆಗಳು ನಡೆದರು ವಿಫಲವಾಗಿದ್ದವು.

ಆದರೆ ಮುಖಂಡ ಈರಣ್ಣ ಪಟ್ಟಣಶೆಟ್ಟಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಘಟಕ ಸ್ಥಳಾಂತರಕ್ಕೆ ಸ್ಥಳದ ಅಲಭ್ಯತೆಯ ಕುರಿತಾಗಿ ಸರಕಾರದ ಮಟ್ಟದಲ್ಲಿರುವ ತೊಂದರೆ ಹಾಗೂ ದೀಢಿರವಾಗಿ ಘಟಕ ಸ್ಥಳಾಂತರಕ್ಕಿರುವ ಅಡೆತಡೆಗಳ ಕುರಿತಾಗಿ ತೋಟದ ಮನೆಗಳ ಜನರಿಗೆ ಈರಣ್ಣ ಪಟ್ಟಣಶೆಟ್ಟಿಯವರು ಮನವರಿಕೆ ಮಾಡಿ ಕಸ ವಿಲೇವಾರಿ ಘಟಕದ ಸ್ಥಳಾಂತರಕ್ಕೆ ಒಂದು ವರ್ಷದ ಸಮಯಾವಕಾಶ ಪಡೆದು ಸಮಸ್ಯೆ ಇತ್ಯರ್ಥ ಪಡಿಸಿದರು. ಇದರಿಂದ ಪಟ್ಟಣದ ಜನರು ಕೂಡಾ ನಿಟ್ಟುಸಿರು ಬಿಡುವಂತ್ತಾಯಿತು.

ಈ ಸಂದರ್ಭದಲ್ಲಿ ಪುರಸಭೆ (Basavana Bagewadi Purasabhe) ಸದಸ್ಯರಾದ ರವಿ ಪಡಶೆಟ್ಟಿ, ನಜೀರ ಗಣಿ, ಅಶೋಕ ಸಂಪಣ್ಣವರ (ಗುಳೇದ), ಪ್ರವೀಣಕುಮಾರ ಪೂಜಾರಿ, ಅಬ್ದುಲ್ ಚೌದ್ರಿ, ಮಾಜಿ ಅಧ್ಯಕ್ಷ ಸಂಜೀವ ಕಲ್ಯಾಣಿ, ಮುಖಂಡರಾದ ನಿಸಾರ ಚೌದ್ರಿ, ಶರಣಪ್ಪ ಬೆಲ್ಲದ, ಶ್ಯಾಮರಾವ್ ಗಾಯಕವಾಡ, ಗುಂಡು ಗಾಯಕವಾಡ, ಸಂಗಯ್ಯ ಕಾಳಹಸ್ತೇಶ್ವರಮಠ ಸೇರಿದಂತೆ ತೋಟದ ಮನೆಗಳ ಜನರು ಇದ್ದರು.

ವರದಿ: ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!