- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಪ್ರಕಾಶ ಹುಕ್ಕೇರಿ ಗೆಲುವು. ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ

ಪ್ರಕಾಶ ಹುಕ್ಕೇರಿ ಗೆಲುವು. ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ

ಜಿದ್ದಾಜಿದ್ದಿನ ಕಣವಾಗಿದ್ದ (MLC Election Winner) ವಿಧಾನ ಪರಿಷತ್ ವಾಯುವ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ (Basavana Bagewadi) ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ (Prakash Hukkeri) ಜಯಭೇರಿ ಭಾರಿಸಿದದ್ದಾರೆ.

ಬಸವನಬಾಗೇವಾಡಿ: ಜೂ. 13ರಂದು ನಡೆದ ವಿಧಾನ ಪರಿಷತ್ ವಾಯುವ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಪ್ರಕಾಶ ಹುಕ್ಕೇರಿ ಅವರು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪಟ್ಟಣದ (Basavana Bagewadi) ಬಸವೇಶ್ವರ ವೃತ್ತದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಆಚರಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈರಣ್ಣ ಪಟ್ಟಣಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ನಗರ ಅಧ್ಯಕ್ಷ ಸುರೇಶಗೌಡ ಪಾಟೀಲ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ರವಿ ರಾಠೋಡ, ಸಂಗಮೇಶ ಓಲೇಕಾರ, ಅಶೋಕ ಹಾರಿವಾಳ ಮಾತನಾಡಿ ಗೆಲುವಿಗೆ ಸಹಕರಿಸಿದ ಕಾರ್ಯಕರ್ತರಿಗೆ, ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಲೋಕನಾಥ ಅಗರವಾಲ, ಶೇಖರ ಗೊಳಸಂಗಿ, ಬಸಣ್ಣ ದೇಸಾಯಿ, ಬಸವರಾಜ ಗೊಳಸಂಗಿ, ಶೇಖನಗೌಡ ಪಾಟೀಲ, ಭರತ ಅಗರವಾಲ, ಸಂಕನಗೌಡ ಪಾಟೀಲ, ಸಂಜು ಕಲ್ಯಾಣಿ, ದೇವೇಂದ್ರ ಚವ್ಹಾಣ, ಸಂಗಮೇಶ ವಾಡೇದ, ಮಹೇಶ ಮುಳವಾಡ ಜಗದೇವಿ ಗುಂಡಳ್ಳಿ, ನಿಸಾರ ಚೌದ್ರಿ ಸೇರಿದಂತೆ ಇತರರು ಇದ್ದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!