- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಕಾರು ಪಲ್ಟಿಯಾಗಿ ಮಹಿಳೆ ಸಾವು. ಮಾನವೀಯತೆ ಮೆರೆದ ಪೊಲೀಸರು

ಕಾರು ಪಲ್ಟಿಯಾಗಿ ಮಹಿಳೆ ಸಾವು. ಮಾನವೀಯತೆ ಮೆರೆದ ಪೊಲೀಸರು

ಬಸವನಬಾಗೇವಾಡಿ: ಗೋವಾ ರಾಜ್ಯದ ಪೆನ್ನಂ ಗ್ರಾಮದ ಒಂದು ಕುಟುಂಬದವರು ಹೈದ್ರಾಬಾದಿನ ತಮ್ಮ ಸಂಬಂಧಿಕರಿಗೆ ಭೇಟಿಯಾಗಲು ಹೋಗಿದ್ದರು, ಮರಳಿ ತಮ್ಮ ಸ್ವ-ಗ್ರಾಮಕ್ಕೆ ಹೋಗುವಾಗ ಸಂದರ್ಭದಲ್ಲಿ ತಾಲೂಕಿನ ಹುಲಬೆಂಚಿ ಕ್ರಾಸಿನಲ್ಲಿ (Basavana Bagewadi Crime) ಚಾಲಕನ ನಿಯಂತ್ರಣ (Accident) ತಪ್ಪಿ ಕಾರು ಪಲ್ಟಿಯಾಗಿ ಕಾರಿನಲ್ಲಿದ್ದ ಫಯನಮ್ (೪೨) ಸ್ಥಳದಲ್ಲಿಯೇ ಸಾವನಪ್ಪಿದ್ದಾಳೆ.

ಆ ಕಾರಿನಲ್ಲಿ ಪ್ರಯಾಣಿಸುತ್ತಿದವರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ ಗಾಯಗೊಂಡವರನ್ನು ೧೦೮ ವಾಹನದಲ್ಲಿ ಬಸವನಬಾಗೇವಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ವಿಜಯಪುರ ಸರಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಬಸವನಬಾಗೇವಾಡಿ ಪಿಎಸ್‌ಐ ಹೊನ್ನಪ್ಪ ಯರವಿಝೇರಿ (Basavana Bagewadi Crime) ಭೆಟಿ ನೀಡಿ ಪರಿಶೀಲಿಸಿದರು ಈ ಕುರಿತು ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾನವೀತೆಯಿಂದ ಮೆರೆದ ಪೊಲೀಸರು: ಇದೇ ಸಂದರ್ಭದಲ್ಲಿ ೧೦ವರ್ಷದ ಮಗು ಹರ್ಷಿತಳಿಗೆ ಅಪಘಾತದಲ್ಲಿ ತೆಲೆಗೆ ಪೆಟ್ಟು ಬಿದ್ದು ಒದ್ದಾಡುತ್ತಿರುವ ಸಂದರ್ಭದಲ್ಲಿ ಅಪಘಾತ ಸ್ಥಳಕ್ಕೆ ೧೦೮ ತುರ್ತು ಸೇವೆ ವಾಹನ ಬರುವುದಕ್ಕೆ ತಡವಾಗಿದ್ದರಿಂದ ಬಸವನಬಾಗೇವಾಡಿ ಪೊಲೀಸರು ತಮ್ಮ ವಾಹನದಲ್ಲಿ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಮಾನವೀತೆಯಿಂದ ಮೆರೆದಿದ್ದಾರೆ.

ವರದಿ: ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!