- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಬಸವನಬಾಗೇವಾಡಿ: ಸರಸ್ವತಿ ದೇವಿ ಮೂರ್ತಿ ಅನಾವರಣ

ಬಸವನಬಾಗೇವಾಡಿ: ಸರಸ್ವತಿ ದೇವಿ ಮೂರ್ತಿ ಅನಾವರಣ

ಬಸವನಬಾಗೇವಾಡಿ: (Basavana Bagewadi BEO Office) ಶಿಕ್ಷಕರೇ ಪಾಲಕರಾಗಿ ಕಾರ್ಯ ನಿರ್ವಹಿಸಿದಲ್ಲಿ ಮಗು ಶೈಕ್ಷಣಿಕವಾಗಿ ಮುಂದುವರೆಯಲು ಸಾಧ್ಯವಾಗುತ್ತದೆ ಎಂದು (Saraswati Statue) ಕ್ಷೇತ್ರ ಶಿಕ್ಷಣಾಧಿಕಾರಿ ಸಂಗಮೇಶ ಪೂಜಾರಿ (Ssangamesh Pujari) ಅಭಿಪ್ರಾಯಪಟ್ಟರು.

ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯದ ಕ್ಷೇತ್ರ ಸಂಪನ್ಮೂಲ ಕೇಂದ್ರ ಆವರಣದಲ್ಲಿ ಸರಸ್ವತಿ ದೇವಿ ಮೂರ್ತಿ ಅನಾವರಣ ಹಾಗೂ ಇ.ಸಿ.ಓ, ಬಿ.ಆರ್.ಪಿ ಮತ್ತು ಸಿ.ಆರ್.ಪಿಗಳ ಸ್ವಾಗತ ಹಾಗೂ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜೀವನದ ಉದ್ದ ಅಗಲಕ್ಕೂ ಹಲವಾರು ಅಡೆತಡೆಗಳು ಬರುವುದು ಸಹಜ ಒತ್ತಡದ ಮಧ್ಯೆ ಎಲ್ಲವನ್ನು ನಿಭಾಯಿಸುವ ಶಕ್ತಿಯನ್ನು ಬೆಳೆಸಿಕೊಳ್ಳಬೇಕು, ಮನುಷ್ಯನಿಗೆ ಅಧಿಕಾರ ಶಾಶ್ವತವಲ್ಲ ಇರುವಷ್ಟು ದಿನ ಕೆಲಸವನ್ನು ವಹಿಸಿಕೊಂಡ ನಮ್ಮ ಹುದ್ದೆಗೆ ನ್ಯಾಯ ಒದಗಿಸುವುದು ಮುಖ್ಯವಾಗಿದೆ, ಶ್ರದ್ಧೆ ಹಾಗೂ ಸಮನ್ವತೆಯಿಂದ ಕಾರ್ಯನಿರ್ವಹಿಸಿದಲ್ಲಿ ನಮ್ಮ ಅಸ್ಥಿತ್ವ ಹಾಗೂ ಗುರುತ್ವಗಳನ್ನು ತಿಳಿಸುತ್ತವೆ ಎಂದು ಹೇಳಿದರು.

ತಾಲೂಕಾ ಆರೋಗ್ಯಾಧಿಕಾರಿ ಡಾ. ಶಶಿಧರ ಓತಗೇರಿ ಮಾತನಾಡಿ ಆರೋಗ್ಯ ಮತ್ತು ಶಿಕ್ಷಣ ಒಂದೇ ಮುಖದ ಎರಡು ನಾಣ್ಯಗಳಿದ್ದಂತೆ ಕೋವಿಡ್ 2ನೇ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಸಹಕಾರದಿಂದ ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ಗುರಿಯನ್ನು ಮೀರಿ ಸಾಧನೆಯನ್ನು ಮಾಡಲು ಸಾದ್ಯವಾಯಿತು ಎಂದು ಹೇಳಿದರು.

ತಹಶೀಲ್ದಾರ ವ್ಹಿ.ಜಿ. ಕಡಕೋಳ ಸರಸ್ವತಿದೇವಿ ಮೂರ್ತಿಯನ್ನು ಅನಾವರಣ ಮಾಡಿ ದೇವಿ ಮೂರ್ತಿ ಪ್ರತಿಷ್ಠಾಪಿಸಿ ಮೊದಲ ಹೆಜ್ಜೆಯನ್ನು ಪೂರೈಸಿದ್ದು ಮುಂದಿನ ದಿನಮಾನಗಳಲ್ಲಿ ಆವರಣ ಸ್ವಚ್ಚತೆಗೆ ಮೊದಲು ಆದ್ಯತೆ ನೀಡುವಂತಾಗಬೇಕು ಎಂದು ಹೇಳಿದರು.

ಡಿಡಿಪಿಐ ಕಚೇರಿಯ (Basavana Bagewadi BEO Office) ಶಿಕ್ಷಣಾಧಿಕಾರಿ ಎಂ.ಎ. ಗುಳೇದಗುಡ್ಡ, ಜಿಲ್ಲಾ ಉಪಸಮನ್ವಯಾಧಿಕಾರಿ ಎಚ್.ಜಿ.ಮಿರ್ಜಿ, ವಿ.ಎಸ್.ಕವಲಗಿ ಮಾತನಾಡಿದರು.

ಶರಣಪ್ಪ ಮಾದರ, ಎಂ.ಬಿ.ತೋಟದ, ಸಿದ್ದು ಉಕ್ಕಲಿ, ಎಸ್.ಜಿ.ಪಾಟೀಲ, ಉಮೇಶ ಕೌಲಗಿ, ಶಿವಾನಂದ ಮಡಿಕೇಶ್ವರ, ಶಿವಾನಂದ ಮಂಗಾನವರ, ವೈ.ಕೆ.ಪತ್ತಾರ, ಆರ್.ಎ.ನಧಾಪ, ಎಂ.ಎನ್.ಯಾಳವಾರ, ಆರ್.ಎಸ್.ಪಾಟೀಲ ಸೇರಿದಂತೆ ಇತರರು ಇದ್ದರು. ಕ್ಷೇತ್ರ ಸಮನ್ವಯಾಧಿಕಾರಿ ಪಿ.ಯು.ರಾಠೋಡ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು. ಎಮ್. ವ್ಹಿ. ಗಬ್ಬೂರ, ಎಸ್.ಬಿ.ಬಾಗೇವಾಡಿ. ಪ್ರಮೋದ ಬೆಂಚ್ ನಿರೂಪಿಸಿದರು. ಬಸವರಾಜ ಅವಟಿ ವಂದಿಸಿದರು.

ವರದಿ: ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!