- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಬಸವನಾಡಿನಲ್ಲಿ ಸಂಭ್ರಮದ ಕಾರ ಹುಣ್ಣಿಮೆ

ಬಸವನಾಡಿನಲ್ಲಿ ಸಂಭ್ರಮದ ಕಾರ ಹುಣ್ಣಿಮೆ

ಬಸವನಬಾಗೇವಾಡಿ: ಪಟ್ಟಣ (Basavana Bagewadi) ಸೇರಿದಂತೆ ತಾಲೂಕಿನ ವಿವಿಧೆಡೆ ಸಂಪ್ರದಾಯದಂತೆ (Tradition) ಎತ್ತುಗಳ ಕರಿಹರಿದು ಸಂಭ್ರಮದ ಕಾರ ಹುಣ್ಣಿಮೆ (kaara hunnime) ಆಚರಿಸಲಾಯಿತು.

ಕಾರಹುಣ್ಣಿಮೆ ನಿಮಿತ್ತ ಎತ್ತುಗಳು ಸೇರಿದಂತೆ ದನಕರುಗಳ ಮೈ ತೊಳೆದು ವಿವಿಧ ಬಣ್ಣಗಳಿಂದ ಗುಲಾ ಹಚ್ಚಿ ಅಂಲಕರಿಸಿ, ಕೊಬ್ಬುಗಳಿಗೆ ಎಣ್ಣೆ, ಮೊಟ್ಟೆಗಳಿಂದ ಒರಸೆ ಬಣ್ಣ ಹಚ್ಚಿ, ರಿಬ್ಬನ್, ಗೊಂಡೆ ಕಟ್ಟಿ, ಎತ್ತು ಹಾಗೂ ಹೋರಿಗಳ ಕೊರಳಿಗೆ ಗೆಜ್ಜೆ ಸರ, ಹೊಸ ಮೂಗುದಾರ, ಹಣ್ಣೆಪಟ್ಟೆ, ಕಾಲಿಗೆ ಕಪ್ಪು ದಾರ ಕಟ್ಟಿ ಶೃಂಗರಿಸಿ ನಂತರ ಕುಟುಂಬದ ಸದಸ್ಯರೊಂದಿಗೆ ಪೂಜೆ ಸಲ್ಲಿಸಿದರು.

ಸಂಜೆ ಪಟ್ಟಣದ (Basavana Bagewadi) ಕೊಲ್ಹಾರ ರಸ್ತೆಯಲ್ಲಿರುವ ಗಣಪತಿ ವೃತ್ತ ಸಂಪ್ರದಾಯದಂತೆ ಎತ್ತುಗಳನ್ನು ಕರೆತಂದು ಕರಿ ಹರಿದರೆ, ವಿಜಯಪುರ ರಸ್ತೆಯಲ್ಲಿನ ಗುರ್ಜಿ ಕಟ್ಟಿ, ಕೆರೆಯ ಮುಂಭಾಗ ಸಂಗೋಳ್ಳಿರಾಯಣ್ಣ ವೃತ್ತದಲ್ಲಿ ರೈತರು ಎತ್ತುಗಳು ಇಲ್ಲದೇ ಇದ್ದರಿಂದ ಕರುಗಳನ್ನು ರಸ್ತೆಯಲ್ಲಿ ಕರೆದು ತಂದು ಕರಿ ಹರಿದರು, ಅಂಬಿಗೇರ ಚೌಡಯ್ಯನ ವೃತ್ತದ ಹತ್ತಿರ ಎತ್ತುಗಳು ಇಲ್ಲದೇ ಇರುವುದ್ದರಿಂದ ಕರಿ ರದ್ದಾಯಿತ್ತು.

More Read: ಶಾಂತಿಯುತವಾಗಿ ಮುಕ್ತಾಯಗೊಂಡ ಮತದಾನ. ಇಲ್ಲಿದೆ ವಿವರ

ಇದೇ ವೇಳೆಯಲ್ಲಿ ಮೇಲೆತ್ತರಕ್ಕೆ ತೂಗು ಹಾಕಿದ ಬೇವಿನ ತಪ್ಪಲು, ಕೊಬ್ಬರಿ ಬಟಲದಿಂದ ತೂಗು ಹಾಕಿದ ಹಗ್ಗವನ್ನು ಯುವಕರು ಮೇಲೆ ಹಾರಿ ಹಿಡಿದುಕೊಳ್ಳುವುದನ್ನು ಜನ ಮನಸೂರಗೊಂಡಿತ್ತು, ನಂತರ ಐದು ಜನ ಪಂಚರು ಸೇರಿ ಕಲ್ಲು ಗುಂಡನ್ನು ಮೇಲೆತ್ತಿ ಮಳೆ-ಬೆಳೆಯನ್ನು ಕೇಳಿದರು. ನಂತರ ಯುವಕರು ಕಲ್ಲುಗುಂಡನ್ನು ಎತ್ತಿ ಶಕ್ತಿ ಪ್ರದರ್ಶನ ಮಾಡಿದರು.

ಈ ಸಂದರ್ಭದಲ್ಲಿ ಬಸವರಾಜ ಹಾರಿವಾಳ, ಮಹಾದೇವಪ್ಪ ಚನ್ನಿ, ಪುರಸಭೆ ಸದಸ್ಯ ಅಶೋಕ ಗುಳೇದ, ಅನೀಲ ಮುಳವಾಡ, ಗೋಲ್ಲಪ್ಪ ಜಾಡರ, ಶರಣಪ್ಪ ಹಂಜಗಿ, ಸುರೇಶ ಮುಳವಾಡ, ಮಲ್ಲಕಾಜಿ ಮುಳವಾಡ, ಶಿವಪ್ಪ ತುಂಬಗಿ, ಶಾಂತಪ್ಪ ರಾಜನಾಳ, ಬಸಪ್ಪ ಜಾಡರ, ಬಸು ಹಂಜಗಿ, ಮಲ್ಲಪ್ಪ ಜಾಡರ, ಮಹಾತೇಂಶ ಹಂಜಗಿ, ಮಂಜು ಹಡಪದ ಸೇರಿದಂತೆ ಇತರರು ಇದ್ದರು.

ವರದಿ: ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!