- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಹಿಂದೂಗಳ ರಕ್ತಪಾತಕ್ಕೆ ನೆಹರು ಕಾರಣ. ಶಾಸಕ ಯತ್ನಾಳ್ ವಾಗ್ದಾಳಿ

ಹಿಂದೂಗಳ ರಕ್ತಪಾತಕ್ಕೆ ನೆಹರು ಕಾರಣ. ಶಾಸಕ ಯತ್ನಾಳ್ ವಾಗ್ದಾಳಿ

ವಿಜಯಪುರ: ಹಿಂದೂಗಳ (Hindu) ರಕ್ತಪಾತಕ್ಕೆ ಪಂಡಿತ ಜವಾಹರಲಾಲ್ ನೆಹರು (Javaharlal Neharu) ಕಾರಣ ಎಂದು ನೆಹರು ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ವಾಗ್ದಾಳಿ ನಡೆಸಿದರು.

ವಿಜಯಪುರ ನಗರದಲ್ಲಿ ಶಾಸಕ ಯತ್ನಾಳ್, ಸರ್ಕಾರಿ ಜಾಹೀರಾತಿನಲ್ಲಿ ನೆಹರು ಪೊಟೋ ಬಿಟ್ಟ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪೊಟೋ ಬಿಟ್ಟಿದ್ದು ತಪ್ಪೇನಲ್ಲ, ನೆಹರು ಕೊಡುಗೆ ದೇಶಕ್ಕೇನಿದೆ. ಮೋದಲ ಪ್ರಧಾನಿ ನೆಹರು ಇರಬಹುದು, ಆದರೆ ನಮ್ಮ ಲೆಕ್ಕದಲ್ಲಿ ಮೊದಲ ಪ್ರಧಾನಿ ನೇತಾಜಿ ಸುಭಾಷಚಂದ್ರ ಭೋಸ್. ದೇಶದ ಈ‌ ಪರಿಸ್ಥಿತಿಗೆ ನೆಹರು ಕಾರಣ ಎಂದು ಹೇಳಿದರು.

ಮಾತು ಮುಂದುವರಿಸಿಇದ ಯತ್ನಾಳ್, ನೆಹರು ಕಾಶ್ಮೀರಕ್ಕೆ 370 ವಿಶೇಷ ಆರ್ಟಿಕಲ್ ಕೊಟ್ಟರು. ಭಾರತ ಪಾಕಿಸ್ತಾನ ದೇಶ ಒಡೆದದ್ದೇ ಅವರ ಸಲುವಾಗಿ, ನೆಹರು ನ ಪ್ರಧಾನಿ ಮಾಡಲು ದೇಶ ಒಡೆದಿದ್ದು. ದೇಶ ಇಬ್ಬಾಗವಾಗಲು ಪಂಡಿತ ಜವಾಹರಲಾಲ್ ನೆಹರು ಪ್ರಮುಖ ಕಾರಣ ಎಂದರು.

ವಲ್ಲಭಾಯಿ ಪಟೇಲ್ ಅಥವಾ ಸುಭಾಷ ಚಂದ್ರ ಭೋಸ ಪ್ರಧಾನಿಯಾಗಿದ್ದರೆ ದೇಶ ಇಬ್ಬಾಗ ಆಗುತ್ತಿರಲಿಲ್ಲ. ಗಾಂಧಿ ಅವರು ನೆಹರು ಪ್ರಧಾನಿಯಾಗಲಿ ಎಂದು ಹಠ ಹಿಡಿದರು, ಅದಕ್ಕಾಗಿ ದೇಶ ಇಬ್ಬಾಗ ಮಾಡಿ ಕೊಟ್ಟರು. ಪಾಕಿಸ್ತಾನಕ್ಕೆ ಅನುಕೂಲವಾಗಲು ಕಾಶ್ಮೀರಕ್ಕೆ 370 ಕೊಟ್ಟರು. ಒಂದು ವೇಳೆ ವಲ್ಲಭಭಾಯಿ ಪಟೇಲ್ ಇರದಿದ್ದರೆ ಹೈದ್ರಬಾದ್ ನಮ್ಮ ಭಾಗದಲ್ಲಿ ಇರತಿರಲಿಲ್ಲ ಎಂದು ತಿಳಿಸಿದರು.

ಬಾಬಾ ಸಾಹೇಬ್ ಅಂಬೇಡ್ಕರ್ ಪಾಕಿಸ್ತಾನ ಇಬ್ಬಾಗಕ್ಕೆ ವಿರೋಧಿಸಿದ್ದರು. ಭಾರತ ಒಡೆಯಬೇಡಿ ಎಂದು ಅಂಬೇಡ್ಕರ್ ಹೇಳಿದ್ದರು. ಒಂದು ವೇಳೆ ಅನಿವಾರ್ಯ ಬಂದರೆ ರಾಷ್ಟ್ರಾಂತರ ಮಾಡಿ ಎಂದಿದ್ದರು. ಪಾಕಿಸ್ತಾನದಲ್ಲಿ ಹಿಂದುಗಳನ್ನು ಭಾರತಕ್ಕೆ ತನ್ನಿ, ಇಲ್ಲಿರುವ ಮುಸ್ಲಿಂ ಅವರನ್ನು ಪಾಕಿಸ್ತಾನ ಕಳುಹಿಸಿ ಎಂದಿದ್ದರು‌ ಅಂಬೇಡ್ಕರ್.  ಇಸ್ಲಾಂ ಧರ್ಮದಲ್ಲಿ ಮತ್ತೊಂದು ಧರ್ಮದವರನ್ನು ಸಹೋದರರಂತೆ ನೋಡುವ ಸಂಸ್ಕೃತಿ ಇಲ್ಲ. ಪಾಕಿಸ್ತಾನದ ದಲಿತರಿಗೆ ಅಂಬೇಡ್ಕರ್ ಕರೆ ಕೊಟ್ಟರು. ನೀವೆಲ್ಲ ಭಾರತಕ್ಕೆ ಬನ್ನಿ ಅಲ್ಲಿ ನೀವು ಸುರಕ್ಷಿತರಿಲ್ಲ ಎಂದಿದ್ದರು. ಕೇವಲ ಪಂಡಿತ ಜವಾಹರಲಾಲ್ ನೆಹರು ಕಾರಣದಿಂದ ಭಾರತ ಇಭ್ಬಾಗವಾಯಿತಿ. ಇವರ ಕಾರಣದಿಂದಲೇ ಕೋಟ್ಯಾಂತರ ಹಿಂದುಗಳ ರಕ್ತಪಾತವಾಯಿತು ಎಂದರು.

ಈ ಎಲ್ಲ ವಿಚಾರವಾಗಿ ನೆಹರು ಅವರನ್ನು ಜಾಹಿರಾತಿನಿಂದ ಬಿಟ್ಟಿದ್ದು ಯಾವುದೇ ಬೇಸರವಿಲ್ಲ. ನಮ್ಮ ಆದರ್ಶ ಏನಿದ್ದರು ವಲ್ಲಭಾಯಿ ಪಟೇಲ್, ಲಾಲ್ ಬಹದ್ದೂರ್ ಶಾಸ್ತ್ರಿ, ಸುಭಾಷ ಚಂದ್ರ ಭೋಸ, ವಾಜಪೇಯಿ, ಮೋದಿ ಎಂದು ನಗರ ಶಾಸಕ ಯತ್ನಾಳ್ (Basanagouda Patil Yatnal) ಹೇಳಿದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!