- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಬಕ್ರೀದ್: ಗೋ ಹತ್ಯೆಗೆ ಕಡಿವಾಣಕ್ಕೆ ವಿಎಚ್‌ಪಿ ಮನವಿ

ಬಕ್ರೀದ್: ಗೋ ಹತ್ಯೆಗೆ ಕಡಿವಾಣಕ್ಕೆ ವಿಎಚ್‌ಪಿ ಮನವಿ

ಬಸವನಬಾಗೇವಾಡಿ: ಬಕ್ರೀದ್ (Bakrid in Basavanabagewadi) ಹಬ್ಬದ ನಿಮಿತ್ತ ಜಾನುವಾರುಗಳ (Killing Gou) ಹತ್ಯೆ ಕಾನೂನು ಬಂದ ಮೇಲು ಹಬ್ಬದ ಸಂದರ್ಭದಲ್ಲಿ ಅತೀ ಹೆಚ್ಚು ಹತ್ಯೆಯಾಗುತ್ತಿರುವುದನ್ನು ಖಂಡಿಸಿ (VHP)ವಿಶ್ವಹಿಂದು ಪರಿಷದ್ ಬಜರಂಗದಳದ ಕಾರ್ಯಕರ್ತರು ಪಶುವೈದ್ಯಾಧಿಕಾರಿಗೆ, ಪುರಸಭೆ, ಪೊಲೀಸ್ ಇಲಾಖೆಗೆ, ತಹಶೀಲ್ದಾರರಿಗೆ ಪ್ರತ್ಯೇಕ ಮನವಿ ಸಲ್ಲಿಸಿದರು.

ವಿಶ್ವ ಹಿಂದೂ ಪರಿಷದ್, ಭಜರಂಗ ದಳ ಸಂಘಟನೆಗಳ ನೇತೃತ್ವದಲ್ಲಿ ಜಾನುವಾರು ಹತ್ಯೆಯನ್ನು ಖಂಡಿಸಿ ನಿರಂತರ ಹೋರಾಟ ಹಾಗೂ ಗೋ ಹತ್ಯೆ ನಿಷೇಧ ಕಾಯ್ದಿ ಬಂದ ಮೇಲು ಇವತ್ತಿನವರೆಗೂ ಮಾಡುತ್ತಾ ಬಂದಿದ್ದು ಅನ್ಯಧರ್ಮಿಯರು ಕಾನೂನಿಗೆ ಹಾಗೂ ಪೊಲೀಸರಿಗೆ ಹೆದರದೆ ನಿರಂತರವಾಗಿ ಪಟ್ಟಣದಲ್ಲಿ ಪಶುಗಳನ್ನು ಹತ್ಯೆ ಮಾಡುತ್ತಿರುವುದು ನಿಂತಿಲ್ಲ, ಹಲವಾರು ಬಾರಿ ಪೊಲೀಸ ಠಾಣೆಗೆ ಬಜರಂಗದಳದ ಕಾರ್ಯಕರ್ತರು ತಿಳಿಸಿದರು ಕೂಡಾ ಯಾವುದೇ ಕ್ರಮ ಕೈಗೊಂಡಿಲ್ಲ ಪುರಸಭೆ, ತಹಶೀಲ್ದಾರ ಕಚೇರಿಗೆ ಹಲವಾರು ಬಾರಿ ವಿಷಯ ಮುಟ್ಟಿಸಿದರು ಕೂಡಾ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಇನ್ನೂ ಬಸವನಬಾಗೇವಾಡಿ ತಾಲೂಕಿನಲ್ಲಿ (Bakrid in Basavanabagewadi) ಹತ್ಯೆ ನಿರಂತರವಾಗಿ ನಡೆಯುತ್ತಿದ್ದು ಮನಗೂಳಿ, ಗೊಳಸಂಗಿ, ಸಾಲವಾಡಗಿ, ಹೂವಿನ ಹಿಪ್ಪರಗಿ, ತಾಲೂಕುಗಳಲ್ಲಿ ನಿರಂತರವಾಗಿ ಪಶು ಹತ್ಯೆ, ನಡೆಯುತ್ತಿದ್ದು ಅದರಲ್ಲಿ ಕೂಡಾ ಬಕ್ರಿದ್ ಹಬ್ಬದ ನಿಮಿತ್ಯ ಮುಂಚಿತವಾಗಿ ಬೇರೆ ಬೇರೆ ಸ್ಥಳಗಳಲ್ಲಿ ಪಶುಗಳನ್ನು ಸಂಗ್ರಹಿಸಿ ಯಾರಿಗೂ ತಿಳಿಯದ ರೀತಿಯಲ್ಲಿ ಹಿಂದೂ ರೈತರ ಹೊಲ, ತೋಟಗಳಲ್ಲಿ ಹಣದ ಆಮಿಷ ಒಡ್ಡಿ, ನಿಮಗೆ ಹಬ್ಬದವರೆಗೂ ಅದಕ್ಕೆ ನೀರು ಮತ್ತು ಆಹಾರವನ್ನು ಒದಗಿಸಿ ಹಬ್ಬದ 1-2 ದಿನದ ಮುಂಚಿತವಾಗಿ ನಮಗೆ ನಾವು ಹೇಳಿದ ಸ್ಥಳಗಳಿಗೆ ಮುಟ್ಟಿಸಬೇಕೇಂದು ರೈತರಿಗೆ ಅನ್ಯಧರ್ಮಿಯರು ಹೇಳುತ್ತಿದ್ದಾರೆ ಎಂದರು.

ಆದ ಕಾರಣ ಜು.7ರಿಂದ 10 ನೇ ತಾರಿಖಿಗೆ ಹಬ್ಬ ಮುಗಿದು ಜು.15ರ ವರೆಗೆ ಅಕ್ರಮವಾಗಿ ಪಶುಗಳನ್ನು ಸಾಗಿಸಬಾರದು, ಜಾನುವಾರುಗಳನ್ನು ಪರವಾನಗಿ, ಇದ್ದ ವಾಹನದಲ್ಲಿ ಸಾಗಿಸಬೇಕು, ಗೋ ಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದ್ದು ನಿಯಮಗಳ ಅಡಿಯಲ್ಲಿಯೇ ತಾವು ಕ್ರಮ ಜರುಗಿಸಬೇಕು ಒಂದುವೇಳೆ ಯಾವುದೇ ರೀತಿಯಲ್ಲಿ ಹತ್ಯೆಯಾದಲ್ಲಿ ಇದನ್ನು ಖಂಡಿಸಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಬಜರಂಗದಳ ಜಿಲ್ಲಾ ಸಹಸಂಯೋಜಕ ತಮ್ಮಣ್ಣ ಬಡಿಗೇರ, ವಿಎಚ್‌ಪಿ ತಾಲೂಕಾ ಕಾರ್ಯದರ್ಶಿ ಮಹೇಶ ಸಾಲವಾಡಗಿ, ಸಂಚಾಲಕ ರಾಹುಲ ಜಗತಾಪ, ತಾಲೂಕಾ ಗೋರಕ್ಷಾ ಪ್ರಮುಖ ಪದ್ಮರಾಜ ಒಡೆಯರ, ವಿಠ್ಠಲಸಿಂಗ ರಜಪೂತ, ಸೋಮು ಹಚ್ಯಾಳ, ಶಂಕರ ದೇಸಾಯಿ, ಸುಧೀರ ಪವಾರ, ಲಕ್ಷö್ಮಣ ಜಾಧವ, ಆನಂದ ರಾಠೋಡ, ಸುರೇಶ ಉಕ್ಕಲಿ, ವಿಜಯ ಗುಡಿಮನಿ, ಸಂತೋಷ ನಾಯ್ಕೋಡಿ ಇದ್ದರು.

ವರದಿ: ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!