- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಶ್ರೀಶೈಲಂದಲ್ಲಿ ಮತ್ತೆ ಹಲ್ಲೆ ನಡೆಸಿದ ಪುಂಡರು. ಕನ್ನಡಿಗರಿಗೆ ಇದೆಂತಾ ಆತಂಕ..!

ಶ್ರೀಶೈಲಂದಲ್ಲಿ ಮತ್ತೆ ಹಲ್ಲೆ ನಡೆಸಿದ ಪುಂಡರು. ಕನ್ನಡಿಗರಿಗೆ ಇದೆಂತಾ ಆತಂಕ..!

ವಿಜಯಪುರ: ಕಳೆದ ಜಾತ್ರೆಯಲ್ಲಿ ಸುಕ್ಷೇತ್ರ ಶ್ರೀಶೈಲಂದಲ್ಲಿ (Srishailam Attack) ಕನ್ನಡಿಗರ (Kannadigars) ಮೇಲೆ ಅಲ್ಲಿನ ಪುಂಡರು ಹಲ್ಲೆ ನಡೆಸಿದ್ದರು, ಈ ಘಟನೆ ಮಾಸುವ ಮುನ್ನವೇ ಇದೀಗ ಅಲ್ಲಿನ ಕೆಲ ಪುಂಡರು ಕೆಎಸ್ಆರ್ಟಿಸಿ ಬಸ್ ಚಾಲಕ ಹಾಗೂ ನಿರ್ವಾಹಕನ (KSRTC) ಮೇಲೆ ದಾಳಿ ಮಾಡುವ ಮೂಲಕ ಮತ್ತೆ ಕನ್ನಡಿಗರನ್ನು ಕೆಣಕಿದ್ದಾರೆ.

ವಿಜಯಪುರ ಡಿಪೋಗೆ ಸೇರಿದ ಕೆಎಸ್ಆರ್ಟಿಸಿ ಬಸ್ ಚಾಲಕ ಬಸವರಾಜ್ ಬಿರಾದಾರ್ ಮೇಲೆ ಹಲ್ಲೆಯಾಗಿದೆ. ಬಸ್ ಕಿಟಕಿ ಗಾಜು ಒಡೆದು ಚಾಲಕ ಹಾಗೂ ನಿರ್ವಾಹಕನ ಮೇಲೆ ಕೆಲ ಪುಂಡರು ಅಟ್ಯಾಕ್ ಮಾಡಿದ್ದಾರೆ. ಜೂನ್ 2 ರ ಮಧ್ಯರಾತ್ರಿ ನಡೆದ ಹಲ್ಲೆ ನಡೆದಿದೆ.

ಘಟನೆ: ಶ್ರೀಶೈಲದಲ್ಲಿ ಬಸ್ ನಿಲ್ದಾಣದ‌ ಬಳಿ ಬಸ್ ನಿಲ್ಲಿಸಿ, ಊಟ ಮಾಡಿ ಕಟ್ಟೆಯ ಮೇಲೆ ಮಲಗಿದ್ದಾಗ ಏಕಾಏಕಿ ಬಂದ ಪುಂಡರ ಗುಂಪಿನಿಂದ ಹಲ್ಲೆ ನಡೆಸಲಾಗಿದೆ. ಕನ್ನಡಿಗರ ಬಗ್ಗೆ ಆಶ್ಲೀಲ ಪದ ಬಳಸಿ, ಹಲ್ಲೆ ನಡೆಸಿರೋ ಆರೋಪ ಕೇಳಿ ಬಂದಿದೆ. 10-12  ಜನ ಪುಂಡರ ಗುಂಪಿನಿಂದ ಹಲ್ಲೆ ಮಾಡಿದ್ದಾರೆ. ಚಾಲಕನ ಮುಖ ಹಾಗೂ ಕಾಲಿನ ಭಾಗದಲ್ಲಿ ತೀವ್ರ ರಕ್ತ ಸ್ರಾವ ಉಂಟಾಗಿದೆ.

ಚಾಲಕ ಬಸವರಾಜ್ ಚೀರಾಟ ಕೇಳಿ ಇತರೆ ಚಾಲಕರು ಹಾಗೂ ನಿರ್ವಾಹಕರು ಓಡಿ ಬಂದಿದ್ದಾರೆ. ಇತರರು ಬರುತ್ತಿದ್ದಂತೆ ದುಷ್ಕರ್ಮಿಗಳು ಅಲ್ಲಿಂದ ಓಡಿ ಹೋಗಿದ್ದಾರೆ. ಈ ಘಟನೆಯ ( Srishailam Attack) ಕುರಿತಾಗಿ ಶ್ರೀಶೈಲಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.

ಹಿಂದೆಯೂ ನಡೆದಿತ್ತು ಹಲ್ಲೆ: ಕಳೆದ ಯುಗಾದಿ ಸಂದರ್ಭದಲ್ಲಿ ಕನ್ನಡಿಗರ ಮೇಲೆ ಹಲ್ಲೆಯಾಗಿತ್ತು. ಮಾರ್ಚ 31 ರಂದು ಶ್ರೀಶೈಲಂದಲ್ಲಿ ಕನ್ನಡಿಗರ ಮೇಲೆ ಹಲ್ಲೆಯಾಗಿ ಕರ್ನಾಟಕದ ವಾಹನಗಳ ಗಾಜು ಒಡೆದು ಹಾಕಲಾಗಿತ್ತು. ಇದೀಗ ಮತ್ತೇ ಕ್ಯಾತೆ ತೆಗೆದು ಕೃತ್ಯ ನಡೆಸಿದದ್ದಾರೆ.

ಈ ಹಿಂದೆ, ಮಾರ್ಚ್ 31 ರಂದು ನೀರಿನ ವಿಚಾರವಾಗಿ ಬಾಗಲಕೋಟೆ ಮೂಲದ ಶ್ರೀಶೈಲ್ ವಾರಿಮಠ ಎಂಬ ಯುವಕನ ಮೇಲೆ ಹಲ್ಲೆ ನಡೆದಿತ್ತು. ಆ ಘಟನೆ‌ ಮಾಸುವ ಮುಂಚೆಯೇ ಮತ್ತೊಂದು ಮಾರನಾಂತಿಕ ಹಲ್ಲೆ ನಡೆದಿದ್ದು, ಶ್ರೀಶೈಲದಲ್ಲಿ ಕನ್ನಡಿಗರಿಗೆ ಸುರಕ್ಷತೆ ಬಗ್ಗೆ ಆತಂಕ ಪಡುವಂತಾಗಿದೆ. ಇದು ಉದ್ದೇಶ ಪೂರ್ವಕವಾಗಿ ನಡೆದಿರೋ ಹಲ್ಲೆ ಎಂಬುದಾಗಿ ಸಂಶಯ ವ್ಯಕ್ತವಾಗುತ್ತಿದೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!