- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯ500 ವರ್ಷಗಳ ಹಿಂದೆ ಬರೆದಿಟ್ಟಿರುವ ಕಾಲಜ್ಞಾನ. ಇಂದು…!

500 ವರ್ಷಗಳ ಹಿಂದೆ ಬರೆದಿಟ್ಟಿರುವ ಕಾಲಜ್ಞಾನ. ಇಂದು…!

ವಿಜಯಪುರ : ಜಿಲ್ಲೆಯ ಬಬಲಾದಿ ಮಠದ ಶ್ರೀಗಳು 2021ರಲ್ಲಿ ನುಡಿದಿದ್ದ ಕಾಲಜ್ಞಾನ ಇದೀಗ ಮತ್ತೆ ನಿಜವಾದಂತಾಗಿದೆ.

9 ತಿಂಗಳ ಮುಂಚೆಯೇ ತಿರುಪತಿಯಲ್ಲಿ ಉಂಟಾದ ಜಲಪ್ರಳಯ, ಆಂಧ್ರ – ತೆಲಗು ರಾಜ್ಯಕ್ಕೆ ಕೇಡು, ಆಂಧ್ರಪ್ರದೇಶಕ್ಕೆ, ತೆಲಗು ಮಾತನಾಡುವ ರಾಜ್ಯಕ್ಕೆ ಜಲ‌ಕಂಟಕ ಎಂದು ಸಿದ್ದು ಮುತ್ಯಾ ಭವಿಷ್ಯ ನುಡಿದಿದ್ದರು.

Click Here – ಬಬಲಾದಿ ಅಜ್ಜನ ಭವಿಷ್ಯ… ವೈರಲ್ ವಿಡಿಯೋ…

ಅವರ ಭವಿಷ್ಯವಾಣಿಯಂತೆ ವಾಯುಭಾರ ಕುಸಿತದಿಂದ ತಿರುಪತಿಯಲ್ಲಿ ಜಲಪ್ರಳಯ, ಸೃಷ್ಠಿಯಾಯಿತು. ಕಳೆದ ಎರಡು ತಿಂಗಳಿಂದ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಭೂಮಿ ಕಂಪಿಸುತ್ತಿದೆ. ರಾಜ್ಯದಲ್ಲಿ ಭೂಮಿ ಕುಪ್ಪಳಿಸಲಿದೆ ಎಂದು ಶ್ರೀಗಳು ನುಡಿದಿದ್ದರು.ಈ ಮೂಲಕ ಬಬಲಾದಿ ಮಠದ ಸದಾಶಿವ ಅಜ್ಜನ ಭವಿಷ್ಯ ನಿಜವಾಯ್ತು.!

2021ರ ಶಿವರಾತ್ರಿಯ ದಿನ ಸಿದ್ದು ಮುತ್ಯಾ ನುಡಿದ ಭವಿಷ್ಯದ ವಿಡಿಯೋ ತುಣುಕು ಎಲ್ಲೆಡೆ ವೈರಲ್ ಆಗುತ್ತಿದೆ. 500 ವರ್ಷಗಳ ಹಿಂದೆ ಚಿಕ್ಕಯ್ಯಪ್ಪನವರು ಬರೆದಿಟ್ಟಿರುವ ಕಾಲಜ್ಞಾನ ಇದಾಗಿದೆ. ಪ್ರತಿ ವರ್ಷ ಶಿವರಾತ್ರಿಯಂದು ಈ ಕಾಲಜ್ಞಾನವನ್ನ ಓದಲಾಗುತ್ತೆ. ರಾಜ್ಯದಲ್ಲೇ ಅತ್ಯಂತ ವಿಶಿಷ್ಟವಾಗಿದೆ ಬಬಲಾದಿ ಮಠ. ಇಲ್ಲಿಗೆ ಬರುವ ಭಕ್ತಿರಿಗೆ ಮದ್ಯವನ್ನು ಪ್ರಸಾದ ರೂಪದಲ್ಲಿ ನೀಡಲಾಗುತ್ತೆ. ಭಕ್ತರು ಸಹ ಮದ್ಯವನ್ನೇ ನೈವೇದ್ಯವಾಗಿ ತರುತ್ತಾರೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!