- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯ‘ವೀರಶೈವ’ ಪ್ರಾಚೀನ ಧರ್ಮ

‘ವೀರಶೈವ’ ಪ್ರಾಚೀನ ಧರ್ಮ

ಬಸವನಬಾಗೇವಾಡಿ: ವೀರಶೈವ ಧರ್ಮ ಪ್ರಾಚೀನ ಧರ್ಮವಾಗಿದೆ. ಪಂಚಪೀಠಗಳು ಸೇರಿದಂತೆ ಶಾಖಾ ಮಠಗಳು ಧರ್ಮ ಜಾಗೃತಿಯಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ ಎಂದು ರಂಭಾಪುರಿ ಪೀಠದ ಜಗದ್ಗುರು ಪ್ರಸನ್ನ ರೇಣುಕಾ ವೀರಸೋಮೇಶ್ವರ ರಾಜದೇಶೀ ಕೇಂದ್ರ ಶಿವಾಚಾರ್ಯ ಭಗವಾತ್ಪಾದರು ಹೇಳಿದರು.

ಪಟ್ಟಣದ ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸ್ಥಳೀಯ ಪದ್ಮರಾಜ ಒಡೆಯರ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಅವರ ಪಟ್ಟಾಧಿಕಾರದ ರಜತ ಮಹೋತ್ಸವದ ನಿಮಿತ್ತ ಹಮ್ಮಿಕೊಂಡಿರುವ ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿ ಮಾತನಾಡಿದ ಅವರು, ಇಂದು ಜನರು ಹಣ, ಅಂತಸ್ತಿಗೆ ಬೆನ್ನು ಹತ್ತಿದ್ದಾರೆ. ನವನಾಗರೀಕತೆಗೆ ಮನಸೋತು ಎಲ್ಲವನ್ನು ಮರೆಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ನಾಗರಿಕ ಸಮಾಜದಲ್ಲಿ ಸಂಸ್ಕೃತಿ ಮೀರಿ ನಡೆಯುತ್ತಿರುವುದು ವಿಷಾದಕರ ಸಂಗತಿಯಾಗಿದೆ. ಜನ್ಮಕೊಟ್ಟ ತಂದೆ-ತಾಯಿಗೆ ಮುಪ್ಪಾವ್ಯಸ್ಥೆಯಲ್ಲಿ ಅನ್ನ ನೀರು ಆರೈಕೆ ಮಾಡದ ಮಕ್ಕಳು ಅವರು ನಮ್ಮ ಏಳ್ಗಿಗೆ ಪಟ್ಟಕಷ್ಟವನ್ನು ಒಮ್ಮೆ ಅರಿಯಬೇಕು, ನಾವು ಮುಪ್ಪಾವ್ಯವಸ್ಥೆಗೆ ಬಂದಾಗ ನಮ್ಮ ಮಕ್ಕಳು ನಮ್ಮನ್ನು ಹೇಗೆ ನೋಡಿಕೊಳ್ಳುತ್ತಾರೆ ಎಂಬುವುದನ್ನು ನೆನಪಿಸಿಕೊಂಡು ತಂದೆ ತಾಯಿಯ ಸೇವೆ ಮಾಡುವುದನ್ನು ಮಕ್ಕಳು ತಿಳಿದುಕೊಳ್ಳಬೇಕಾದ ಅಗತ್ಯತೆ ಇದೆ ಎಂದು ಹೇಳಿದರು.

ಬಸವಣ್ಣನವರ ಗುರುಭಕ್ತಿ ವರ್ಣನೆ ಮಾಡಲು ಶಬ್ದಗಳಿಂದ ಸಾಧ್ಯವಿಲ್ಲ. ಗುರುಶಿಷ್ಯರ ಸಂಬಂಧಕ್ಕೆ ಅವರು ಹೊಸ ಭಾಷ್ಯ ಬರೆದಿದ್ದಾರೆ. ಅವರು ಘನವಾದ ವ್ಯಕ್ತಿತ್ವ ಹೊಂದಿದ್ದರು. ಬಸವಣ್ಣನವರನ್ನು ಬೆಳೆಸುವ ಭರಾಟೆಯಲ್ಲಿ ಕೆಲವರು ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತಿದ್ದಾರೆ. ವೀರಶೈವ ಧರ್ಮಕ್ಕೆ ಬಸವಣ್ಣನವರ ಹಾಗೂ ಪಂಚಪೀಠಗಳ ಕೊಡುಗೆ ಅಪಾರವಾಗಿದೆ. ಮನುಕುಲದ ಉದ್ಧಾರಕ್ಕಾಗಿ ಧರ್ಮ ಪ್ರಚಾರ ಮಾಡಿದ್ದಾರೆ. ಬಸವಣ್ಣ, ಪಂಚಪೀಠಗಳು ಧರ್ಮದ ಎರಡು ಮುಖಗಳಿದಂತೆ. ಪಂಚಪೀಠಗಳು ಬಸವಣ್ಣನವರನ್ನು ಗೌರವದಿಂದ ಕಾಣುತ್ತಿವೆ. ಬಸವನಾಡಿನಲ್ಲಿ ಶಿವಪ್ರಕಾಶ ಶಿವಾಚಾರ್ಯರು ಮಠದ ಮೂಲಕ ಗುರು ಪರಂಪರೆ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ ಎಂದು ಹೇಳಿದರು.

ವರದಿ: ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!