- Advertisement -Newspaper WordPress Theme
ಪ್ರಮುಖ ಸುದ್ದಿಗಳುರಾಜ್ಯಎಸ್.ಎಸ್.ಎಲ್.ಸಿಯಲ್ಲಿ ವಿಜಯಪುರದ ಅಮಿತ್ ಟಾಫರ್. ಬಡತನದಲ್ಲಿ ಅರಳಿದ ಪ್ರತಿಭೆ

ಎಸ್.ಎಸ್.ಎಲ್.ಸಿಯಲ್ಲಿ ವಿಜಯಪುರದ ಅಮಿತ್ ಟಾಫರ್. ಬಡತನದಲ್ಲಿ ಅರಳಿದ ಪ್ರತಿಭೆ

ವಿಜಯಪುರ: ಕಡು ಬಡತನದ ನಡುವೆ ಸರ್ಕಾರಿ ಶಾಲೆಯಲ್ಲಿ ಓದಿದ ವಿಜಯಪುರ ಜಿಲ್ಲೆಯ ಜುಮನಾಳ ಗ್ರಾಮದ ಅಮೀತ್‌ ಮಾದರ ಎಂಬ ವಿದ್ಯಾರ್ಥಿ ಎಸ್‌ ಎಸ್‌ ಎಲ್‌ ಸಿ ಪರೀಕ್ಷೆಯಲ್ಲಿ ೬೨೫ಕ್ಕೆ ೬೨೫ ಅಂಕ ಪಡೆದು ರಾಜ್ಯಕ್ಕೆ ಟಾಫರ್ ಆಗಿ ಸಾಧನೆ ಮಾಡುವ ಮೂಲಕ ಗುಮ್ಮಟ ನಗರಿಯ ಕೀರ್ತಿ ಇನ್ನಷ್ಟು ಹೆಚ್ಚಿಸಿದ್ದಾನೆ.

ಅಮೀತ್‌ ಅಕ್ಷರಶಃ ಬಡತನದಲ್ಲಿ ಅರಳಿದ ಪ್ರತಿಭೆ. ಮನೆಯಲ್ಲಿ ಕಡು ಬಡತನ ಸಾಧನೆ ಮಾಡಿದ್ದಾನೆ. ಹುಟ್ಟಿನಿಂದಲೂ ಕಡು ಬಡತನದಲ್ಲೇ ಬೆಳೆದ ಅಮೀತ್‌ ತಾನು ಏನಾದರು ಸಾಧನೆ ಮಾಡಬೇಕು ಅಂದುಕೊಂಡಿದ್ದ. ಅಂದುಕೊಂಡಂತೆ ಈಗ ಸಾಧನೆ ಮಾಡಿದ್ದಾನೆ. ಬಡತನದಲ್ಲಿ ತಾಯಿ ಮಹಾದೇವಿಯೇ ದುಡಿದು ಮೂರು ಮಕ್ಕಳನ್ನ ಸಾಕಿದ್ದಾಳೆ.  ಬಡತನದಲ್ಲೂ ತಾಯಿಯೊಂದಿಗೆ ಕೆಲಸ ಮಾಡುತ್ತಲೇ ಅಮೀತ್‌ ಈ ಸಾಧನೆ ಮಾಡಿದ್ದಾನೆ.

ಬಡತನದಲ್ಲೆ ಹುಟ್ಟಿದ ಅಮೀತ್‌ ದುರಾದೃಷ್ಟವೋ ಏನೋ, ಆತ ಹುಟ್ಟಿದ ಒಂದೇ ವರ್ಷದಲ್ಲೆ ತಂದೆ ಆನಂದ ಸಾವನ್ನಪ್ಪಿದ್ದಾರೆ. ತಂದೆ ಇಲ್ಲದಿದ್ದರು, ಅಮ್ಮನಲ್ಲೆ ತಂದೆಯನ್ನ ಕಾಣುತ್ತಾ ಬೆಳೆದ ಅಮೀತ್‌ ಇಂದು ಮಾಡಿದ ಸಾಧನೆ ಎಲ್ಲರನ್ನ ಹುಬ್ಬೇರಿಸುವಂತೆ ಮಾಡಿದೆ.

ಕನಸು: ಸಧ್ಯ ಎಸ್‌ ಎಸ್‌ ಎಲ್‌ ಸಿಯಲ್ಲಿ ಸಾಧನೆ ಮಾಡಿರೋ ಅಮೀತ್‌ ಗೆ ಮುಂದೆ ವೈದ್ಯನಾಗಬೇಕು ಎನ್ನುವ ಕನಸಿದೆ. ಈ ಕುರಿತಾಗಿ ಪ್ರತಿಕ್ರಿಯಿಸಿದ ಅಮೀತ್‌ ತಾನು ಮೆಡಿಕಲ್‌ ಮಾಡುವ ಕನಸು ಹಂಚಿಕೊಂಡಿದ್ದಾನೆ. ವೈದ್ಯನಾಗಿ ಸೇವೆ ಮಾಡುವೆ ಆಸೆ ಇದ್ದು. ಈಗ ಪಿಯು ಸೈನ್ಸ್‌ ಮಾಡುವೆ ಎಂದು ಹೇಳಿದ್ದಾನೆ.

ಸಿಹಿ ತಿನ್ನಿಸಿ ಸಂಭ್ರಮ: ತಾನು ೬೨೬ಕ್ಕೆ ೬೨೫ ಅಂಕ ಪಡೆದಿರುವ ಅಮೀತ್‌ ಸುದ್ದಿ ತಿಳಿಯುತ್ತಿದ್ದಂತೆ ತಾಯಿ ಮಹಾದೇವಿ ಕಾಲಿಗೆ ಎರಗಿ ಆಶೀರ್ವಾದ ಪಡೆದಿದ್ದಾನೆ. ಬಳಿಕ ತಾಯಿ ಅಮೀತ್‌ ಗೆ ಸಿಹಿ ತಿನ್ನಿಸಿ ಸಂಭ್ರಮಿಸಿದ್ದಾಳೆ. ಇನ್ನು ಅಮೀತ್‌ ನಿವಾಸಕ್ಕೆ ಭೇಟಿ ನೀಡಿದ ಸಚಿವ ಗೋವಿಂದ ಕಾರಜೋಳ ಪುತ್ರ ಉಮೇಶ ಕಾರಜೋಳ ಸಿಹಿ ತಿನ್ನಿಸಿ ಅಮೀತ್‌ ಗೆ ಅಭಿನಂದಿಸಿದ್ದಾರೆ. ಗ್ರಾಮಸ್ಥರು ಅಮೀತ್‌ ಭೇಟಿ ಮಾಡಿ ಅಭಿನಂದಿಸಿದ್ದಾರೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!