- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯ2021ರ ಯುಪಿಎಸ್ಸಿಯಲ್ಲಿ ಗುಮ್ಮಟ ನಗರಿಯ ಯುವತಿಯ ಸಾಧನೆ

2021ರ ಯುಪಿಎಸ್ಸಿಯಲ್ಲಿ ಗುಮ್ಮಟ ನಗರಿಯ ಯುವತಿಯ ಸಾಧನೆ

ವಿಜಯಪುರ: ನಗರದ ಸಿದ್ದಾರೂಢ ಬಡಾವಣೆಯ ಸವಿತಾ ಸಿದ್ದಪ್ಪ ಗೋಟ್ಯಾಳ (Savita Gotyal) ಯುಪಿಎಸ್ಸಿ ಪರೀಕ್ಷೆಯಲ್ಲಿ 479 ನೇ (upsc karnataka topper 2021 list) ರ್ಯಾಂಕ್ ಪಡೆಯುವ ಮೂಲಕ ಗುಮ್ಮಟ ನಗರಿಯ (Vijayapura) ಕೀರ್ತಿ ಹೆಚ್ಚಿಸಿದ್ದಾಳೆ.

ಸಾಧಕಿ ಸವಿತಾ 2019 ರ‌ ಯುಪಿಎಸ್ಸಿ ಫಲಿತಾಂಶ ಸುಧಾರಿಸಿಕೊಂಡು, 2019 ರ ಯುಪಿಎಸ್ಸಿ ಪರೀಕ್ಷೆಯಲ್ಲಿ 626 ನೇ ರ್ಯಾಂಕ್ ಪಡೆದಿದ್ದಳು. ಸದ್ಯ ಸವಿತಾ ಬೆಂಗಳೂರಿನಲ್ಲಿ ಸಿಸಿಓ ಕಚೇರಿಯಲ್ಲಿ ತರಬೇತಿ  ತರಬೇತಿ ಪಡೆಯುತ್ತಿದ್ದಾರೆ.

2019 ರ ಯುಪಿಎಸ್ಸಿ ಯಲ್ಲಿ 626 ನೇ ರ್ಯಾಂಕ್ ಪಡೆದು, ಕೇಂದ್ರ ಸರ್ಕಾರದ ಇಂಡಿಯನ್ ಪಿ ಆ್ಯಂಡ ಟಿ ಅಕೌಂಟ್ಸ್ ಆ್ಯಂಡ್ ಫೈನಾನ್ಸ್ ಸರ್ವೀಸ್ ಸೇವೆಗೆ ತರಬೇತಿ ಪಡೆಯುತ್ತಿದ್ದಾರೆ.

ಇಷ್ಟರ ಮದ್ಯೆ 2021 ರ ಯುಪಿಎಸ್ಸಿ (upsc karnataka topper 2021 list) ಪರೀಕ್ಷೆ ಬರೆದಿದ್ದ ಸವಿತಾ ಗೋಟ್ಯಾಳ, 2021 ರ ಯುಪಿಎಸ್ಸಿ ಪರೀಕ್ಷೆಯಲ್ಲಿ 479 ನೇ ರ್ಯಾಂಕ್ ಪಡೆದು ಸಾಧನೆ ಮಾಡಿದ್ದಾಳೆ.

ಸವಿತಾ ಹಿರಿಯ ಸಹೋದರಿ ಅಶ್ವಿನಿ ಗೋಟ್ಯಾಳ  ಐಪಿಎಸ್ ಅಧಿಕಾರಿ 2016 ರ ಯುಪಿಎಸ್ಸಿ ಪರೀಕ್ಷೆಯಲ್ಲಿ  625 ನೇ ರ್ಯಾಂಕ್ ಪಡೆದಿದ್ದಾರೆ. ಸದ್ಯ ಅಶ್ವಿನಿ ಪಂಜಾಬಿನ‌ ಚಂಡಿಗಡದಲ್ಲಿ ಎಸ್ ಎಸ್ ಪಿ ಗ್ರೇಡ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಕಿರಿಯ ಸಹೋದರ ಕಾರ್ತಿಕ ಯುಪಿಎಸ್ಸಿ ಪರೀಕ್ಷೆಗಾಗಿ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಸವಿತಾ ಗೋಟ್ಯಾಳ ಬೆಂಗಳೂರಿನ ಪಿಇಎಸ್ ಕಾಲೇಜಿನಲ್ಲಿ ಬಿಇ ಕಂಪ್ಯೂಟರ್ ಸೈನ್ಸ್ ಪದವಿಧರೆ, ದೆಹಲಿಯ ವಾಜಿರಾಮ್ ಆ್ಯಂಡ ರವಿ ತರಬೇತಿ ಕೇಂದ್ರದಲ್ಲಿ ಯುಪಿಎಸ್ಸಿ ಪರೀಕ್ಷೆಗೆ ತರಬೇತಿ ಪಡೆದಿದ್ದಾರೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!