- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಸುನೀಲಗೌಡ ಪಾಟೀಲಗೆ ಗೆಲುವು. ಬಸವನಾಡಿನಲ್ಲಿ ವಿಜಯೋತ್ಸವ

ಸುನೀಲಗೌಡ ಪಾಟೀಲಗೆ ಗೆಲುವು. ಬಸವನಾಡಿನಲ್ಲಿ ವಿಜಯೋತ್ಸವ

ಬಸವನಬಾಗೇವಾಡಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಮೊದಲನೇಯ ಪ್ರಾಶಸ್ತ್ಯದಲ್ಲಿಯೇ ಜಯಗಳಿಸಿದ ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡ ಪಾಟೀಲರು ಗೆಲುವಿನ ನಗೆ ಬೀರಿದ್ದರಿಂದ ಕಾಂಗ್ರೆಸ್ ಕಾರ್ಯಕರ್ತರುಗಳಿಂದ ಪಟ್ಟಣದ ಬಸವೇಶ್ವರ ವೃತ್ತದಲ್ಲಿ, ಬಸವಣ್ಣನವರ ಪುತ್ತಳಿಗೆ ಮಾಲಾರ್ಪಣೆ ಮಾಡಿ, ಪಟಾಕಿ ಸಿಡಿಸಿ, ವಿವಿಧ ಘೋಷಣೆಗಳೊಂದಿಗೆ ವಿಜಯೋತ್ಸವ ಆಚರಿಸಲಾಯಿತು.

https://gadinaadakranti.com/congress-candidate-sunila-gowda-patil-win/

ಈ ಸಂದರ್ಭದಲ್ಲಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ ಹಾರಿವಾಳ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಕಲ್ಲು ಸೊನ್ನದ ಮಾತನಾಡಿ, ಸುನೀಲಗೌಡ ಪಾಟೀಲರು ಮಾಡಿರುವ ಜನಪರ ಕಾರ್ಯಗಳು, ಕೋವಿಡ್ ಸಂದರ್ಭದಲ್ಲಿ ನೀಡಿರುವ ಅನುದಾನ ಹಾಗೂ ವೈಯಕ್ತಿಕವಾಗಿ ಎಲ್ಲ ಸದಸ್ಯರ ಸಮಸ್ಯೆಗಳನ್ನು ಸರ್ಕಾರದ ಗಮನ ಸೆಳೆದಿರುವುದು ಇಂದು ಅವರ ಗೆಲುವಿಗೆ ಕಾರಣವಾಗಿದೆ ಎಂದು ಹೇಳಿದರು.

https://gadinaadakranti.com/shramabindu-sarathi-the-sidhu-namagowda/

ಈ ಸಂದರ್ಭದಲ್ಲಿ ಆಲಮಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಂಜುನಾಥ ಹಿರೇಮಠ, ಅರವಿಂದ ತಾಳಿಕೋಟಿ, ಬಾಬು ಬಾಗವಾನ, ಸಚಿನ ಗಂಜಾಳ, ದಯಾನಂದ ಅಂಬಲಿ, ಸಂಗು ಜಾಲಗೇರಿ ಸೇರಿದಂತೆ ಇನ್ನೀತರ ಮುಖಂಡರುಗಳು ಹಾಗೂ ಕಾರ್ಯಕರ್ತರುಗಳು ಭಾಗವಹಿಸಿದ್ದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!