- Advertisement -Newspaper WordPress Theme
ಪ್ರಮುಖ ಸುದ್ದಿಗಳುರಾಷ್ಟ್ರೀಯ6 ಸಾವಿರ ನಿಲ್ದಾಣಗಳಲ್ಲಿ ವೈ-ಫೈ ಸೌಲಭ್ಯ ಅನುಷ್ಠಾನಗೊಳಿಸಿದ ರೈಲ್ವೆ ಇಲಾಖೆ

6 ಸಾವಿರ ನಿಲ್ದಾಣಗಳಲ್ಲಿ ವೈ-ಫೈ ಸೌಲಭ್ಯ ಅನುಷ್ಠಾನಗೊಳಿಸಿದ ರೈಲ್ವೆ ಇಲಾಖೆ

ನವದೆಹಲಿ : ಭಾರತೀಯ ರೈಲ್ವೆಯ ಪ್ರಯಾಣಿಕರು ಮತ್ತು ಸಾರ್ವಜನಿಕರನ್ನು ಸಂರಕ್ಷಿಸಲು ದೂರದ ನಿಲ್ದಾಣಗಳಲ್ಲಿ ವೈ-ಫೈ ಸೌಲಭ್ಯವನ್ನು ವಿಸ್ತರಿಸುತ್ತಿದೆ. 15-05-2021 ರಂದು ಜಾರ‍್ಖಂಡ್ ನ ಹಝಾರಿಬಾದ್ ನ ಪೂರ್ವ ಕೇಂದ್ರೀಯ ರೈಲ್ವೆಯ ಧನ್ ಬಾದ್ ವಿಭಾಗದ ಹಝಾರಿಬಾದ್ ಪಟ್ಟಣದಲ್ಲಿ ವೈ-ಫೈ ಸೌಲಭ್ಯ ಕಲ್ಪಿಸುವುದರೊಂದಿಗೆ ಭಾರತೀಯ ರೈಲ್ವೆ 6000 ರೈಲು ನಿಲ್ದಾಣಗಳಲ್ಲಿ ವೈ-ಫೈ ಸೌಲಭ್ಯ ವನ್ನು ಅನುಷ್ಠಾನಗೊಳಿಸಿರುವುದಾಗಿ ತಿಳಿಸಿದೆ.

2016 ರ ಜನವರಿಯಲ್ಲಿ ಮುಂಬೈ ರೈಲ್ವೆ ನಿಲ್ದಾಣದಲ್ಲಿ ಮೊದಲನೇ ವೈ-ಫೈ ಸೌಲಭ್ಯ ಕಲ್ಪಿಸುವುದರೊಂದಿಗೆ ಭಾರತೀಯ ರೈಲ್ವೆ ತನ್ನ ಯಾನ ಆರಂಭಿಸಿತ್ತು. ಇದಾದ ನಂತರ ಪೂರ್ವ ಬಂಗಾಳದ ಮಿಡ್ನಾಫುರದಲ್ಲಿ 5000 ನೇ ರೈಲ್ವೆ ನಿಲ್ದಾಣ ಮತ್ತು 15-05-2021 ರಂದು ಹಝಾರಿಬಾಗ್ ನಲ್ಲಿ 6000 ನೇ ರೈಲ್ವೆ ನಿಲ್ದಾಣದಲ್ಲಿ ಸೌಲಭ್ಯ ಕಲ್ಪಿಸಲಾಗಿದೆ. ಇದೇ ದಿನದಂದು ಒಡಿಶಾದ ಅಂಗುಲ್ ಜಿಲ್ಲೆಯ ಜಾರಪದ ನಿಲ್ದಾಣದಲ್ಲಿ ವೈ-ಫೈ ಸೌಲಭ್ಯ ಕಲ್ಪಿಸಲಾಗಿದೆ.

ರೈಲ್ವೆ ನಿಲ್ದಾಣಗಳಲ್ಲಿ ವೈ-ಫೈ ಸೌಲಭ್ಯ ದೊರಕಿಸುವ ಮೂಲಕ ಭಾರತ ಸರ್ಕಾರದ ಡಿಜಿಟಲ್ ಇಂಡಿಯಾದ ದ್ಯೇಯ ಮತ್ತು ನಿರೀಕ್ಷೆಗಳನ್ನು ಪೂರೈಸುತ್ತಿದೆ. ಗ್ರಾಮೀಣ ಮತ್ತು ನಗರದ ನಾಗರಿಕರ ನಡುವೆ ಇರುವ ಡಿಜಿಟಲ್ ಅಂತರವನ್ನು ತಗ್ಗಿಸುವ, ಗ್ರಾಮೀಣ ಭಾಗದಲ್ಲಿ ಡಿಜಿಟಲ್ ಹೆಜ್ಜೆ ಗುರುತುಗಳನ್ನು ಹೆಚ್ಚಿಸುವ ಮತ್ತು ಬಳಕೆದಾರರ ಅನುಭವವನ್ನು ವೃದ್ಧಿಸುವ ಉದ್ದೇಶವನ್ನು ಇದು ಒಳಗೊಂಡಿದೆ.

ರೈಲ್ವೆ ನಿಲ್ದಾಣಗಳಲ್ಲಿ ವೈ-ಫೈ ಸೌಲಭ್ಯದಿಂದ ರೈಲ್ವೆಗೆ ಯಾವುದೇ ವೆಚ್ಚವಾಗುವುದಿಲ್ಲ, ಸ್ವಯಂ ಸುಸ್ಥಿರತೆ ಆಧಾರದ ಮೇಲೆ ಈ ಸೌರ‍್ಯ ಒದಗಿಸಲಾಗುತ್ತಿದೆ. ರೈಲ್ವೆ ಸಚಿವಾಲಯದ ಸಾರ್ವಜನಿಕ ಸ್ವಾಮ್ಯದ ಉದ್ದಿಮೆ ರೈಲ್ ಟೆಲ್ ನ ನೆರವಿನೊಂದಿಗೆ ಈ ಸೌಲಭ್ಯ ಕಲ್ಪಿಸಲಾಗುತ್ತಿದೆ. ಗೂಗಲ್, ಡಿಒಟಿ [ಯೂಸ್ ಅಫ್ ನಡಿ], ಪಿ.ಜಿ.ಸಿ.ಐ.ಎಲ್ ಮತ್ತು ಟಾಟಾ ಟ್ರಸ್ಟ್ ನ ಸಹಭಾಗಿತ್ವದಡಿ ಈ ಸೇವೆ ದೊರೆಯುತ್ತಿದೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!