- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯ4ಎಕರೆ ಕಬ್ಬು ಬೆಂಕಿಗೆ ಅಹುತಿ. ಹೆಸ್ಕಾಂ ಅಧಿಕಾರಿಗಳ ವಿರುದ್ಧ ರೈತನ ಆಕ್ರೋಶ

4ಎಕರೆ ಕಬ್ಬು ಬೆಂಕಿಗೆ ಅಹುತಿ. ಹೆಸ್ಕಾಂ ಅಧಿಕಾರಿಗಳ ವಿರುದ್ಧ ರೈತನ ಆಕ್ರೋಶ

ಬಸವನಬಾಗೇವಾಡಿ: ವಿದ್ಯುತ್ ಪರಿವರ್ತಕದ (ಟಿಸಿ) ವಿದ್ಯುತ್ ಕನೆಕ್ಟರ್ (ಪ್ಯೂಸ್) ಸುಟ್ಟಿದ್ದರ ಪರಿಣಾಮ ಕಬ್ಬಿನ ಗದ್ದಗೆ ಭಾನುವಾರ ಬೆಳಗ್ಗೆ ಆಕಸ್ಮಿಕ ಬೆಂಕಿ ತಗುಲಿ ಸು.4ಎಕರೆ ಕಬ್ಬಿನ ಪಡ ಸುಟ್ಟು ಕರಕಲಾಗಿ ಅಂದಾಜು 4ಲಕ್ಷಕ್ಕೂ ಹೆಚ್ಚು ರೂ,ಗಳ ಹಾನಿಯಾಗಿದೆ.

ತಾಲೂಕಿನ ಅಗಸಬಾಳ ಗ್ರಾಮದ ಪ್ರವೀಣ ಬಸವರಾಜ ಪಾಟೀಲ ಎಂಬ ರೈತರ ಒಟ್ಟು 8 ಎಕರೆ ಕಬ್ಬಿನ ಬೆಳೆ ಇದ್ದು ಅದು ಸದ್ಯ ಕಟಾವಿನ ಹಂತದಲ್ಲಿತ್ತು, ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ನಮಗಾಗಿದೆ ಎಂದು ರೈತ ಪ್ರವೀಣ ಪಾಟೀಲ ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ. ನಮ್ಮ ಜಮೀನು ಮದ್ಯದಲ್ಲಿ ಇದ್ದ ಟಿಸಿ ಕಬ್ಬು ನಾಟಿ ಮಾಡಿದ ತಕ್ಷಣವೇ ಬಸವನಬಾಗೇವಾಡಿ ಹೆಸ್ಕಾಂ ಎಇಇ ವಿಜಯಕುಮಾರ ಬಿರಾದಾರ ಇವರಿಗೆ ಲಿಖಿತ ರೂಪದಲ್ಲಿ ಮನವಿ ಮಾಡಿಕೊಂಡು 8 ತಿಂಗಳ ಕಳೆದರು ನಮ್ಮ ಮನವಿಗೆ ಸ್ಪಂದನೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಅವಘಡದಿಂದ ರೈತರಿಗೆ ಸುಮಾರು 4 ಲಕ್ಷಕ್ಕೂ ಹೆಚ್ಚು ಹಾನಿ ಉಂಟಾಗಿದೆ ಅಂದಾಜಿಸಲಾಗಿದೆ. ಸ್ಥಳಕ್ಕೆ ದೌಡಾಯಿಸಿ ಬಂದು ಕಬ್ಬಿನ ಗದ್ದೆಗೆ ಹತ್ತಿದ ಬೆಂಕಿಯನ್ನು ನಂದಿಸುವಲ್ಲಿ ಬಸವನಬಾಗೇವಾಡಿ ಅಗ್ನಿ ಶಾಮಕ ಠಾಣಾ ಸಿಬ್ಬಂದಿ ಯಶಸ್ವೀಯಾಗಿದ್ದಾರೆ. ಈ ಸಂದರ್ಭದಲ್ಲಿ ಸಹಾಯಕ ಠಾಣಾಧಿಕಾರಿ ಬಿ.ಎಂ ಮಾದರ, ಕಾಶಿನಾಥ ಲಮಾಣಿ, ಅಗ್ನಿ ಶಾಮಕ ವಾಹನ ಚಾಲಕ ಸಿದ್ದಣ್ಣ ಪೊಲೇಶಿ, ಮಂಜುನಾಥ ಎಚ್, ಮಾಂಹಾತೇಶ ಮಮದಾಪುರ ಸೇರಿ ಕಬ್ಬಿನ ಗದ್ದೆಗೆ ಹತ್ತಿದ ಬೆಂಕಿಯನ್ನು ನಂದಿಸಿದರು.

‘ಸುಮಾರು ಎಂಟು ತಿಂಗಳ ಹಿಂದೆ ನಮ್ಮ ಜಮೀನಿನ ಮಧ್ಯೆ ಇದ್ದ ಟಿಸಿಯನ್ನು ಒಂದು ಕಡೆ ಬದುವಿಗೆ ಕೊಡಿಸಿಕೊಡುವಂತೆ ಬಸವನಬಾಗೇವಾಡಿ ಹೆಸ್ಕಾಂ ಅಧಿಕಾರಿ ವಿಜಯಕುಮಾರ ಬಿರಾದಾರ ಹಾಗೂ ಹೂವಿನಹಿಪ್ಪರಗಿ ಶಾಖಾಧಿಕಾರಿಗಳ ಗಮನಕ್ಕೆ ತಂದು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ನಮ್ಮ ಕಬ್ಬು ಟಿಸಿ ಸಮಸ್ಯೆಯಿಂದ ಸುಟ್ಟು ಕರಕಲಾಗಿದೆ. ಇಂದು ನಾಳೆ ಕಟಾವು ಮಾಡಬಹುದಾದ ಕಬ್ಬು ಕೈಗೆ ಬಂದ ತುತ್ತು ಬಾಯಿಗೆ ಬರಲ್ಲಿಲ್ಲ ಎನ್ನುವಂತ್ತಾಗಿದೆ ಇದ್ದರಿಂದ ನಮಗೆ ಲಕ್ಷ ಲಕ್ಷ ರೂ,ಗಳಷ್ಟು ಹಾನಿಯಾಗಿದೆ ಇದಕ್ಕೆ ಹೊಣೆ ಯಾರು ಎಂಬುವುದು ಯಕ್ಷಪ್ರಶ್ನೇಯಾಗಿದೆ.’

 – ಪ್ರವೀಣ ಪಾಟೀಲ ನೊಂದ ರೈತ

ವರದಿ : ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!