- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯ3.5 ಕೋಟಿ ವೆಚ್ಚದಲ್ಲಿ ಚನ್ನಬಸವಣ್ಣನವರ ಸ್ಮಾರಕ ನಿರ್ಮಾಣ

3.5 ಕೋಟಿ ವೆಚ್ಚದಲ್ಲಿ ಚನ್ನಬಸವಣ್ಣನವರ ಸ್ಮಾರಕ ನಿರ್ಮಾಣ

ಬಸವನಬಾಗೇವಾಡಿ: ತಾಲೂಕಿನ ಇಂಗಳೇಶ್ವರ ಗ್ರಾಮದಲ್ಲಿ 3.5 ಕೋಟಿ ವೆಚ್ಚದಲ್ಲಿ ಉಳವಿ ಚನ್ನಬಸವಣ್ಣನವರ ಸ್ಮಾರಕ ನಿರ್ಮಾಣ ಭೂಮಿಪೂಜೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿರಕ್ತಠದ ವಚನ ಶಿಲಾಮಂಟಪದ ಡಾ. ಸಿದ್ದಲಿಂಗ ಶ್ರೀಗಳು ಹೇಳಿದರು.

ತಾಲೂಕಿನ ಇಂಗಳೇಶ್ವರ ಗ್ರಾಮದ ವಚನ ಶಿಲಾಮಂಟಪದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇದೇ ನವ್ಹಂಬರ್ 9 ರಂದು ಬೆಳಿಗ್ಗೆ 10.30ಕ್ಕೆ 90 ವರ್ಷಗಳ ಹಿರಿಯ ಸ್ಥಳೀಯ ವಿರಕ್ತಮಠದ ಪೀಠಾಧಿಪತಿ ಚನ್ನಬಸವ ಶ್ರೀಗಳ ಇಚ್ಚೆಯಂತೆ ಉಳವಿ ಚನ್ನಬಸವಣ್ಣನವರ ಸ್ಮಾರಕದ ಭೂಮಿಪೂಜೆ ನೆರವೇರಲಿದೆ. ಶ್ರೀಮಠದ ಚನ್ನಬಸವ ಶ್ರೀಗಳ ಪಾದಪೂಜೆ ಮತ್ತು ಗೋಧಿಯಿಂದ ತಯಾರಿಸಿದ ಪ್ರಸಾದ ಸೇವಿಸುವ ಕಾರ್ಯಕ್ರಮ ಹಾಗೂ ಸಾಹಿತಿ ಈರಣ್ಣ ಬೆಕಿನಾಳ ರಚಿಸಿದ ನುಡಿ ಕನ್ನಡ ಪುಸ್ತಕ ಬಿಡುಗಡೆ ಸಮಾರಂಭ ಹಾಗೂ 20ಕ್ಕೂ ಅಧಿಕ ಶ್ರೀಗಳ ಪಾದಪೂಜೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಗದುಗಿನ ತೋಟದಾರ್ಯ ಶ್ರೀಗಳು, ಧಾರವಾಡ, ನೇಲೊಗಿ, ಬೀಳಗಿ, ಸೊನ್ನ, ತಾಳಿಕೋಟಿ, ಪಡೇಕನೂರ, ಮಸಬಿನಾಳ, ದೇ.ಹಿಪ್ಪರಗಿ, ಬಸವನಬಾಗೇವಾಡಿ ಸೇರಿದಂತೆ ಅನೇಕ ಶ್ರೀಗಳು, ಶಾಸಕ ಶಿವಾನಂದ ಪಾಟೀಲ, ಎ.ಎಸ್. ಪಾಟೀಲ(ನಡಹಳ್ಳಿ), ಮಾಜಿ ಶಾಸಕ ಅಪ್ಪಾಜಿ ನಾಡಗೌಡ ಸೇರಿದಂತೆ ಅನೇಕರು ಭಾಗವಹಿಸಿಲಿದ್ದಾರೆ. ಈ ಕಾರ್ಯಕ್ರಮಲ್ಲಿ ಸುಮಾರು 10 ಸಾವಿರ ಭಕ್ತರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

 1948 ರಲ್ಲಿ ಈ ವಿರಕ್ತಮಠದ ಪೀಠಾಧಿಪತಿ ಚನ್ನಬಸವ ಶ್ರೀಗಳು ಅಧಿಕಾರ ವಹಿಸಿಕೊಂಡ ನಂತರ 1962 ರಲ್ಲಿ ಉತ್ತರ ಭಾರತ 1968 ರಲ್ಲಿ ದಕ್ಷಿಣ ಭಾರತದಲ್ಲಿ ಪಾದಯಾತ್ರೆ ಮಾಡುವ ಮೂಲಕ 1972 ರಲ್ಲಿ ಇಂಗಳೇಶ್ವರ ಗ್ರಾಮದಲ್ಲಿ ಬಸವಣ್ಣನವರು ಹಾಗೂ ಬಸವಾದಿ ಶರಣರ ವಚನಶಿಲಾ ಮಂಟಪ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿ ಬಸವಣ್ಣನವರ 959 ಹಾಗೂ ಉಳಿದ ಶರಣರ 600 ವಚನಗಳನ್ನು ಕೆತ್ತಿಸಲಾಗಿದೆ. 1ಲಕ್ಷ 86ಸಾವಿರ ಅಕ್ಷರವನ್ನು ಕಲ್ಲಿನಲ್ಲಿ ಕೆತ್ತನೆ ಮಾಡಲಾಗಿದೆ. 1972 ರ ವರೆಗೆ ದೇಶದಲ್ಲಿ ಕಲ್ಲಿನಲ್ಲಿ ವಚನ ಕೆತ್ತನೆ ಇರಲಿಲ್ಲಾ ಎಂದು ಹೇಳಿದರು.

1962 ರಿಂದ ಇಲ್ಲಿವರೆಗೆ ಚನ್ನಬಸವ ಶ್ರೀಗಳು ಭಕ್ತರ ಮತ್ತು ಸನ್ನಿಧಿಯರವ ನಡುವಿನ ತಾರತಮ್ಯ ಇರಬಾರದು ಎನ್ನುವ ಉದ್ದೇಶದಿಂದ ಗೋಧಿಯಿಂದ ತಯಾರಿಸಿದ ಪ್ರಸಾದವನ್ನು ಸ್ವೀಕರಿಸುತ್ತಿರಲಿಲ್ಲಾ. ಒಂದು ಸಲ ಭಕ್ತರಿಗೆ ರೊಟ್ಟಿ ಅನ್ನಸಾರು ಪ್ರಸಾದ ನೀಡಿ ಶ್ರೀಗಳಿಗೆ ಗೋಧಿ ಪ್ರಸಾದವನ್ನು ನೀಡಿದ ಹಿನ್ನಲ್ಲೆಯಲ್ಲಿ ಇಲ್ಲಿಯವರೆಗೆ ಸುಮಾರು 60 ವರ್ಷಗಳಿಂದ ಗೋಧಿಯಿಂದ ತಯಾರಿಸಿದ ಪ್ರಸಾದವನ್ನು ಸ್ವೀಕಾರ ಮಾಡಿರಲಿಲ್ಲಾ ಎಂದು ಹೇಳಿದರು.

 ಸುದ್ದಿಗೋಷ್ಠಿಯಲ್ಲಿ ಅರವಿಂದ ಕುಲಕರ್ಣಿ, ಸಾಹಿತಿ ಈರಣ್ಣ ಬೆಕಿನಾಳ, ಬಿ.ಎಸ್. ಬಿರಾದಾರ ಇದ್ದರು.

ವರದಿ : ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!