- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯ3 ನೇ ಅಲೆ ಆತಂಕ : ದೇವರಿಗೆ ವಿಶೇಷ ಪೂಜೆ, ಭಜನೆ ಆರಂಭಿಸಿದ ಮಹಿಳೆಯರು

3 ನೇ ಅಲೆ ಆತಂಕ : ದೇವರಿಗೆ ವಿಶೇಷ ಪೂಜೆ, ಭಜನೆ ಆರಂಭಿಸಿದ ಮಹಿಳೆಯರು

ವಿಜಯಪುರ : ಇನ್ನೇನು ಕೊರೊನಾ 3ನೇ ಅಲೆ ಮಕ್ಕಳನ್ನು ಕಾಡಲಿದೆ ಎಂಬ ಮಾತುಗಳು ಕೇಳಿ ಬರುತ್ತಿರುವುದರಿಂದ ತಾಯಂದಿರು ಮತ್ತು ಮಹಿಳೆಯರನ್ನು ಹೆಚ್ಚು ಚಿಂತಾಕ್ರಾಂತರನ್ನಾಗಿ ಮಾಡಿದ್ದು, ಇದು ನಮ್ಮ ಮಕ್ಕಳ ಮೇಲೆ ಪ್ರಭಾವ ಬೀರಬಾರದು ಎಂಬ ಸದುದ್ದೇಶದಿಂದ ಗ್ರಾಮಸ್ಥರು ಪಿಕೇಲಮ್ಮ ದೇವಿಯ ಮೊರೆ ಹೋಗಿದ್ದಾರೆ. 

ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದ ಮಹಿಳೆಯರು ಇಲ್ಲಿಯ ವೀರೇಶ್ವರ ಸರ್ಕಲ್ ಬಳಿ ಇರುವ ಪಿಕೇಲಮ್ಮ ದೇವಸ್ಥಾನಕ್ಕೆ ಕಳೆದ ಕೆಲ ದಿನಗಳಿಂದ ಪೂಜೆ ಸಲ್ಲಿಸುತ್ತಿದ್ದಾರೆ.  ಪ್ರತಿದಿನ ದೇವಿಗೆ ನೈವೇದ್ಯ ಅರ್ಪಿಸುವುದರೊಂದಿಗೆ ಹಾಡು ಹೇಳುತ್ತ ಭಜನೆ ಕೂಡ ಮಾಡುತ್ತಿದ್ದಾರೆ. 

ಪ್ರತಿದಿನ ಸಂಜೆಯಿಂದ ರಾತ್ರಿಯವರೆಗೆ ಸುಮಾರು ನಾಲ್ಕು ಗಂಟೆಗಳ ಕಾಲ ಪಿಕೇಲಮ್ಮ ದೇವಸ್ಥಾನದಲ್ಲಿ ಭಜನೆ ನಡೆಯುತ್ತಿದ್ದು, ಐದು ದಿನಗಳ ಕಾಲ ಈ ಕಾರ್ಯಕ್ರಮ ಆಯೋಜಿಸಿದ್ದಾರೆ. ತಮ್ಮ ಮಕ್ಕಳನ್ನು ಕಾಪಾಡು,  ತಮ್ಮ ಕುಟುಂಬವನ್ನು ಕೊರೊನಾ ಮೂರನೇ ಅಲೆಯಿಂದ ರಕ್ಷಿಸು ವಿನಾಯಕ ನಗರದ ಮಹಿಳೆಯರು ತಾಯಿ ಪಿಕೇಲಮ್ಮ ದೇವಿಯಲ್ಲಿ ಭಕ್ತಿಯಿಂದ ಬೇಡಿಕೊಳ್ಳುತ್ತಿದ್ದಾರೆ.

ಶಿವಲಿಂಗಮ್ಮ ಬಿರಾದಾರ, ಅಕ್ಕಮ ಗಂಗನಗೌಡರ, ರೇಣುಕಾ ಹಳಮನಿ, ಗುರಬಾಯಿ ಹುನಗುಂದ, ಸುಜಾತ ಹಳಮನಿ, ಮಲಮ್ಮ ಗಂಗನಗೌಡರ, ಶಿವಲೀಲಾ ಗಂಗನಗೌಡರ, ಶಿವಲಿಲ್ಲಾ ಹಳಮನಿ, ನಿಲ್ಲಮ್ಮ ಗಂಗನಗೌಡರ, ಸವಿತಾ ಗಂಗನಗೌಡರ, ಮಹಾನಂದ ಕಸಬೆಗೌಡರ, ಶೈಲಾ ಶಮಕುರತಿ ಮತ್ತು ಇತರ ಮಹಿಳೆಯರು ಕಳೆದ ನಾಲ್ಕು ದಿನಗಳಿಂದ ಪೀಕೆಲಮ್ಮ ಮೊರೆ ಹೋಗಿ, ನೈವೇದ್ಯ ಅರ್ಪಿಸಿ ಭಜನೆ ಮಾಡುತ್ತಿದ್ದು, ಈ ವೃತ ಐದನೇ ದಿನವಾದ ಶುಕ್ರವಾರ ಮುಕ್ತಾಯವಾಗಲಿದೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!