- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಪಂಚಮಸಾಲಿ ನಡಿಗೆ ಶಿಗ್ಗಾಂವಿ ಕಡೆಗೆ

ಪಂಚಮಸಾಲಿ ನಡಿಗೆ ಶಿಗ್ಗಾಂವಿ ಕಡೆಗೆ

ವಿಜಯಪುರ: ಪಂಚಮಸಾಲಿ (Panchamassali) 2ಎ ಮೀಸಲಾತಿ ಹೋರಾಟಕ್ಕೆ (2A reservation fight) ಸರ್ಕಾರ ಸ್ಪಂದನೆ ನೀಡುತ್ತಿಲ್ಲ. ಅದಕ್ಕಾಗಿ ಪಂಚಮಸಾಲಿ ನಡಿಗೆ ಶಿಗ್ಗಾಂವಿ ಕಡೆಗೆ ಹಮ್ಮಿಕೊಳ್ಳಲಾಗಿದೆ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠಾಧ್ಯಕ್ಷ ಜಯಬಸವ ಮೃತ್ಯುಂಜಯ (basava jaya mruthyunjaya swamiji) ಸ್ವಾಮೀಜಿ ಹೇಳಿದರು.

ವಿಜಯಪುರ ನಗರದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಬಸವಜಯ ಮೃತ್ಯುಂಜಯ ಸ್ವಾಮಿಜಿ, ಪಂಚಮಸಾಲಿ ಮೀಸಲಾತಿ (2A reservation fight)) ಕುರಿತು ಸಾಕಷ್ಟು ಹೋರಾಟವನ್ನು ಮಾಡಿದ್ದೇವೆ, ಹಲವು ಬಾರಿ ಗಡುವನ್ನೂ ನಿಡಿದ್ದೇವೆ ಇದ್ಯಾವದಕ್ಕೂ ಸಿಎಂ ಲಕ್ಷವಹಿಸದ ಕಾರಣ ಜೂನ್ 27 ಕ್ಕೆ ಶಿಗ್ಗಾಂವಿಯಲ್ಲಿರುವ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಮನೆಯ ಎದುರು ಹೋರಾಟ ಆರಂಭ ಮಾಡುತ್ತೇವೆ. ಈ ಹಿನ್ನಲೆ ಪಂಚಮಸಾಲಿ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು. ನಮ್ಮ ಮೀಸಲಾತಿಗಾಗಿ ಹೋರಾಟ ಮಾಡುತ್ತೇವೆ. ಅಲ್ಲದೇ, ಮೀಸಲಾತಿ ಬಗ್ಗೆ ಜೂನ 27 ರ ವರೆಗೆ ಸಿಎಂ ಬೊಮ್ಮಾಯಿ ತಿಳಿಸಬೇಕು. ಇಲ್ಲದೇ ಹೋದ್ರೇ ಹೋರಾಟ ಖಚಿತ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಅಲ್ಲದೇ, ಮೀಸಲಾತಿ ದೊರಕಿದರೆ ಬೃಹತ್ ಜನಸಮೂಹದಲ್ಲಿ ಸರ್ಕಾರಕ್ಕೆ ಸನ್ಮಾನ ನೆರವೇರಿಸಲಾಗುವುದು. ಮುಖ್ಯಮಂತ್ರಿಗಳಿಗೆ ಶೇಂಗಾ ಹೋಳಿಗೆ ತಿನಿಸಿ, ಕಲ್ಲು ಸಕ್ಕರೆ ತುಲಾಭಾರ ನೆರವೇರಿಸಿ ಆಭಾರ ಮನ್ನಣೆ ಮಾಡಲಾಗುವುದು. ಇಲ್ಲವೇ ಹೋರಾಟ ಮುಂದುವರೆಸಿ ಬೆಂಗಳೂರಿನಲ್ಲಿ 25 ಲಕ್ಷ ಜನ ಸೇರಿಸಿ ಹೋರಾಟ ಮಾಡಲಾಗುವದು ಎಂದು ಎಚ್ಚರಿಕೆ ನೀಡಿದರು.‌

ಪಂಚಮಸಾಲಿ ಸಮುದಾಯದ ಶೇ 80 ರಷ್ಟು ಜನ ಬಿಜೆಪಿ ಪಕ್ಷಕ್ಕೆ ಬೆಂಬಲಿಸುತ್ತಾರೆ, ಪಂಚಮಸಾಲಿ ಸಮಾಜವನ್ನು ಕೇವಲ ಮತ ಬ್ಯಾಂಕಿಗೆ ಬಳಸುತ್ತಿದ್ದಾರೆ ಮೀಸಲಾತಿ ಸಿಗದೇ ಹೋದಲ್ಲಿ ಮುಂಬರುವ ಎಲ್ಲ ಚುನಾವಣೆಯಲ್ಲಿ ಬಿಜೆಪಿಗೆ ಜನ ತಕ್ಕ ಉತ್ತರ ನೀಡಲಿದ್ದಾರೆ ಎಂದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!