- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಸಿಎಂ ಮನೆ ಮುಂದೆ ಧರಣಿಯಿಂದ ಪ್ರತಿಕೂಲ ಪರಿಣಾಮ. ಸಚಿವ ಸಿಸಿ. ಪಾಟೀಲ್

ಸಿಎಂ ಮನೆ ಮುಂದೆ ಧರಣಿಯಿಂದ ಪ್ರತಿಕೂಲ ಪರಿಣಾಮ. ಸಚಿವ ಸಿಸಿ. ಪಾಟೀಲ್

ವಿಜಯಪುರ: ಸದ್ಯ ರಾಜ್ಯದಲ್ಲಿರುವ ಮುಖ್ಯಮಂತ್ರಿಗಳು 2ಎ (2A reservation) ಮೀಸಲಾತಿ ಪರವಾಗಿದ್ದಾರೆ, ಈ ಹಂತದಲ್ಲಿ ಕೊಡಲಸಂಗಮ ಪಂಚಮಸಾಲಿ ಸ್ವಾಮೀಜಿಗಳು (basava jaya mruthyunjaya swamiji) ಸಿಎಂ ಅವರ ಮನೆಯ ಮುಂದೆ ಧರಣಿ ಮಾಡುವುದರಿಂದ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ, ಹಾಗಾಗಿ ಪ್ರತಿಭಟನೆ ಕೈಬಿಡಬೇಕು ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ (c c patil) ಮನವಿ ಮಾಡಿದ್ದಾರೆ.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ನಾನು ಹಾಗೂ ಯತ್ನಾಳ್ ಅವರು ಹಿಂದುಳಿದ ಆಯೋಗದ ಅಧ್ಯಕ್ಷರನ್ನು ಭೇಟಿಯಾಗಿ 2ಎ ಮೀಸಲಾತಿ  ವಿಚಾರ ಕುರಿತಂತೆ ಮನವಿ ಸಲ್ಲಿಸಿ ಚರ್ಚೆ ನಡೆಸಿದ್ದೇವೆ. ನಾನು ಪಂಚಮಸಾಲಿ ಸಮುದಾಯದವನಾಗಿ 2ಎ ಪರವಾಗಿದ್ದೇನೆ ಆದರೆ, ಮೀಸಲಾತಿ ನೀಡಿದ ಮೇಲೆ ಕೋರ್ಟ್ ನಲ್ಲಿ ಅದಕ್ಕೆ ಅಡತಡೆ ಉಂಟಾಗಬಾರದು, ಹೀಗಾಗಿ ಸರ್ಕಾರ ಮೀಸಲಾತಿಯನ್ನು ಪರಾಮರ್ಶಿಸಿ ನಿಗದಿ ಮಾಡುತ್ತದೆ ಎಂದು ಹೇಳಿದರು.

More Read: ಆತ್ಮಹತ್ಯೆ ಪ್ರಕರಣ. ವಿಜಯಪುರ ಪೊಲೀಸರಿಂದ ಮೂವರು ಆರೋಪಿಗಳ ಬಂಧನ

ಕಾಂಚಾಣ ಸದ್ದು ಮಾಡಿದೆ: ಇದೆ ವೇಳೆ ವಿಧಾನ ಪರಿಷತ್ ಚುನಾವಣೆಯಲ್ಲಿ ಅರುಣ್ ಶಹಾಪೂರ್ ಸೋಲಿಗೆ ಪಂಚಮಸಾಲಿ ಸಮುದಾಯ ಅಥವಾ 2ಎ ಮೀಸಲಾತಿ (2A reservation) ವಿಚಾರ ಕಾರಣವಲ್ಲ, ಅಲ್ಲಿ ಕಾಂಚಾಣ ಸದ್ದು ಮಾಡಿದೆ. ಇದು ಸಾರ್ವತ್ರಿಕ ಚುನಾವಣೆ ಅಲ್ಲ, ಮತದಾದಾರು ಶಿಕ್ಷಕರು ಆಗಿರೊದ್ರಿಂದ ಮೀಸಲಾತಿ ಪರಿಣಾಮ ಬೀರಿಲ್ಲ ಎಂದು ಸ್ಪಷ್ಟಪಡಿಸಿದರು. ಚುನಾವಣೆಗೂ ಮುಂಚೆ ಮೀಸಲಾತಿ ಸಿಗಬಹುದಾ ಎನ್ನುವ ಪ್ರಶ್ನೆಗೆ ಎಲ್ಲ ಸಮುದಾಯದವರನ್ನು ಗಮನದಲ್ಲಿಟ್ಟುಕೊಂಡು ನಿಗದಿ ಮಾಡುತ್ತದೆ, ನಾನು ಸರಕಾರದ ಭಾಗವಾಗಿ ಏನೂ ಹೇಳುವುದಿಲ್ಲ ಎಂದು ಜಾರಿಕೊಂಡರು.

ಇನ್ನು ಅಗ್ನಿಪಥ ಯೋಜನೆಗೆ ವಿರೋಧಿಸುತ್ತಿರುವವರು ಯಾರೂ ಸೇನೆಗೆ ಸೇರುವ ವಯಸ್ಸಿನವರಲ್ಲ, ಎಲ್ಲರೂ 40 ವಯಸ್ಸು ಮೀರಿದವರು, ಮೋದಿ ಹೆಸರು ಹಾಗೂ ಕೇಂದ್ರದ ಯೋಜನೆಯನ್ನು ಹಾಳುಗೆಡುವಲು ಈ ರೀತಿಯಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಅದೂ ಬಿಜೆಪಿಯೇತರ ಸರಕಾರ ಇರುವಲ್ಲಿ ಮಾತ್ರ ಹಿಂಸಾಚಾರ ನಡೆಯುತ್ತಿವೆ ಎಂದು ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದರು.

More Read: ಪ್ರಕಾಶ ಹುಕ್ಕೇರಿ ಗೆಲುವು. ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ ಗಳಿಸಿ

ಕಾನೂನನ್ನು ಗೌರವಿಸಬೇಕು: ರಾಹುಲ್ ಗಾಂಧಿಯವರನ್ನು ಇ.ಡಿ. ವಿಚಾರಣೆ ಮಾಡುತ್ತಿರುವ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಈ ನೆಲದ ಕಾನೂನಿಗಿಂತ ಯಾರೂ ದೊಡ್ಡವರಲ್ಲ, ಎಲ್ಲರೂ ಕಾನೂನನ್ನು ಗೌರವಿಸಬೇಕು, ವಿಚಾರಣೆ ನಡೆದ ನಂತರ ಇ.ಡಿ.ಯಿಂದ ಕ್ಲಿನ್ ಚಿಟ್ ಪಡೆದು ಬರಲಿ. ಆನಂತರ ಬಿಜೆಪಿ ವಿರುದ್ಧ ಮಾತನಾಡಲಿ, ಆಲುಗಡ್ಡೆಯಿಂದ ಬಂಗಾರ ತಗೆಯುವುದರ ಕುರಿತು ಇ.ಡಿ. ಪ್ರಶ್ನೆ ಕೇಳಿಲ್ಲವಾ ಎಂದು ತಾವು ಓದಿದ್ದ ಜೋಕ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಬಿಜೆಪಿ ಮುಖಂಡರಾದ ವಿಜುಗೌಡ ಪಾಟೀಲ್ ಸೇರಿದಂತೆ ಹಲವರು ಹಾಜರಿದ್ದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!