- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯ25 ಬಾಣಂತಿಯರ ನರಳಾಟ. ವಿಜಯಪುರ ಜಿಲ್ಲಾಸ್ಪತ್ರೆಯ ವೈದ್ಯರ ನಿರ್ಲಕ್ಷಕ್ಕೆ ಆಕ್ರೋಶ

25 ಬಾಣಂತಿಯರ ನರಳಾಟ. ವಿಜಯಪುರ ಜಿಲ್ಲಾಸ್ಪತ್ರೆಯ ವೈದ್ಯರ ನಿರ್ಲಕ್ಷಕ್ಕೆ ಆಕ್ರೋಶ

ವಿಜಯಪುರ: ಸಿಜೆರಿಯನ್ ಬಳಿಕ ಹಾಕಿದ್ದ ಹೊಲಗೆಯು ವೈದ್ಯರ ನಿರ್ಲಕ್ಷ್ಯದಿಂದಾಗಿ ಬಿಚ್ಚುತ್ತಿದ್ದರಿಂದ ಇದೀಗ ಸುಮಾರು 25 ಕ್ಕೂ ಹೆಚ್ಚು ಬಾಣಂತಿಯರಿಗೆ ಸಂಕಷ್ಟ ಎದುರಾಗಿದೆ.

ಹೌದು, ವಿಜಯಪುರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಘಟನೆ ನಡೆದಿದ್ದು, ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಗರ್ಭಿಣಿಯರಿಗೆ ಸಮಸ್ಯೆ ಕಾಣಿಸಿಕೊಂಡಿದೆ. ಹಾಕಿದ್ದ ಹೊಲಿಗೆ ಬಿಚ್ಚುತ್ತಿರುವುದರಿಂದ ಕುಟುಂಬಸ್ಥರಲ್ಲಿ ಆತಂಕ ಉಂಟಾಗಿದೆ ಈ ಘಟನೆಯಿಂದಾಗಿ ಗರ್ಭಿಣಿಯರಿಗೆ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ ಎಂದು ಸಂಬಂಧಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೆರಿಗೆಯಾದ 30 ಅಧಿಕ ಮಹಿಳೆಯರಿಗೆ ಸಿಜೇರಿಯನ್ ಮಾಡಲಾಗಿದ್ದು, ಹೊಲಿಗೆ ಹಾಕಿದ ಎರಡೆ ದಿನದಲ್ಲಿ ಹೊಲಗೆಗಳು ಕಿತ್ತು ಹೋಗಿವೆ. ಇನ್ನೂ ಕೆಲವರಿಗೆ ಹೊಟ್ಟೆಯಲ್ಲಿ ತುಂಬಿದ ಕೀವು ತುಉಂಬಿಕೊಂಡಿದೆ. ಮರುಹೊಲಿಗೆ ಹಾಕಿಸಿಕೊಳ್ಳಲು 25 ಕ್ಕೂ ಅಧಿಕ ಬಾಣಂತಿಯರು ಆಸ್ಪತ್ರೆಗೆ ಆಗಮಿಸಿ ನರಳಾಡಿದ್ದಾರೆ.

ತರಬೇತಿಗೆ ಬಂದವರಿಂದ ಸಿಜೇರಿಯನ್ ಹೊಲಿಗೆ ಹಾಕಿಸಿರುವುಉದೇ ಈ ಘಟನೆಗೆ ಕಾರಣ ಎಂಬ ಆರೋಪ ಕೇಳಿ ಬಂದಿದೆ.

ಈ ಘಟನೆ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ ಎಸ್ ಎಲ್ ಲಕ್ಕಣ್ಣವರ, ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ‌ ಒಂದೇ ‌ಆಪರೇಷನ್ ಥಿಯೇಟರ್ ಇದೆ. ಸಿಜೇರಿಯನ್ ಹೆರಿಗೆ ಆದವರಿಗೆ ಇನ್ಪೆಕ್ಷನ್ವ್ ಆಗಿದ್ದು‌ ನಿಜಾ. ದಿನಕ್ಕೆ ಸರಾಸರಿ‌ 40 ಕ್ಕೂ ಅಧಿಕ ಹೆರಿಗೆಗಳು ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಆಗುತ್ತವೆ. ಈ‌ ಪೈಕಿ ನಿತ್ಯ ಕನಿಷ್ಟ  15 ಗರ್ಭಿಣಿಯರಿಗೆ ಸಿಜೇರಿಯನ್ ಹೆರಿಗೆ ಆಗುತ್ತವೆ. ಒಂದೇ ಮಹಾಶಸ್ತ್ರಚಿಕಿತ್ಸಾ ಘಟಕ ಇರೋ ಕಾರಣ ಸಮಸ್ಯೆ ಆಗಿದೆ. ಹೆಚ್ಚು ಹೆರಿಗೆಗಳು ಆಗುತ್ತಿರೋ ಕಾರಣ ಓಟಿಯನ್ನು ಸರಿಯಾಗಿ ಕಾರ್ಬೋಲೈಜೇಷನ್ (ಶುಚೀಕರಣ)  ಮಾಡಲಾಗುತ್ತಿಲ್ಲ. ಇನ್ನೊಂದು ಓಟಿ ತೆರೆಯಲು ಕ್ರಮ ತೆಗೆದುಕೊಳ್ಳಲಾಗುತ್ತದೆ. ಆಸ್ಪತ್ರೆಗೆ ದಾಖಲಾಗಿರೋ ಬಾಣಂತಿಯರಿಗೆ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಲಾಗುತ್ತದೆ ಎಂದು‌ ತಿಳಿಸಿದ್ದಾರೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!