- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಹೊಳಿ ದಂಡಿ ಹೊಲ, ಊರಾಗಿನ ವಾಡೆ. ಸ್ವಪಕ್ಷ ಶಾಸಕ ಎಂಬಿ ಪಾಟೀಲಗೆ ಮತ್ತೇ ಟಾಂಗ್ ...

ಹೊಳಿ ದಂಡಿ ಹೊಲ, ಊರಾಗಿನ ವಾಡೆ. ಸ್ವಪಕ್ಷ ಶಾಸಕ ಎಂಬಿ ಪಾಟೀಲಗೆ ಮತ್ತೇ ಟಾಂಗ್ ಕೊಟ್ಟ ಶಾಸಕ ಯಶವಂತರಾಗೌಡ

ವಿಜಯಪುರ : ಭೀಮೆಯ ದಡದಲ್ಲಿ ಹುಟ್ಟಿ ಬೆಳೆದವನು ನಾನು. ಭೀಮೆಯನ್ನು ಉಳಿಸಿ ಬೆಳೆಸುವದು ನನ್ನ ಕರ್ತವ್ಯವಾಗಿದೆ. ಅದರಲ್ಲಿ ಈವರೆಗೆ ಯಾವುದೇ ಮರಳು ಮಾಫಿಯಾ ಮಾಡಿಲ್ಲ ಎಂದು ಸ್ವಪಕ್ಷೀಯ ಶಾಸಕ ಎಂಬಿ‌ ಪಾಟೀಲ್ ಗೆ ಇಂದು ಮತ್ತೇ ಶಾಸಕ ಯಶವಂತರಾಯಗೌಡ ಪಾಟೀಲ ಟಾಂಗ್ ನೀಡಿದ್ದಾರೆ.

ನಗರದಲ್ಲಿ ಬುಧವಾರ ಮಾದ್ಯಮಘೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶಾಸಕ ಯಶವಂತರಾಗೌಡ ಪಾಟೀಲ,  ಭೀಮೆಯಲ್ಲಿ ನಾನು ಮರಳು ಮಾಫಿಯಾ ಮಾಡಿದ್ದೇನೆ  ಎಂದು ಎಂಬಿ ಪಾಟೀಲ ಸಾಬೀತುಪಡಿಸಲಿ ಎಂದು ಸವಾಲ್ ಹಾಕಿದರು. ಇನ್ನೂ ಮಹಾರಾಷ್ಟ್ರ ಹಡಪಸರ್ ನಲ್ಲಿರುವ ಭಂಥನಾಳ ಶ್ರೀಗಳ ಆಸ್ತಿ ನಾನು ಹಡಪ್ ಮಾಡಿದ್ದೇನೆ ಎಂದು ಎಂಬಿ ಪಾಟೀಲ ಹೇಳುತ್ತಿದ್ದಾರೆ. ಮಠ ಮಾನ್ಯದ ಆಸ್ತಿ ಕಬಳಿಸುವ ಕುಟುಂಬದವನು ನಾನಲ್ಲ, ನಮ್ಮ ಕುಟುಂಬ ಮೊದಲು ಮಠಗಳಿಗೆ ದಾನ ಕೊಟ್ಟು ಬಳಿಕ ಊಟ ಮಾಡಿದ್ದೇವೆ, ಹಾಗೇನಾದರೂ ಬಂಥನಾಳ ಮಠದ ಆಸ್ತಿ ನಾನು ಕಬಳಿಸಿದ್ದೇನೆ ಎಂದು ಸಾಬೀತು ಪಡಿಸಿದರೆ ಕೇವಲ ಶಾಸಕ ಸ್ಥಾನಕ್ಕೆ ಮಾತ್ರ ಅಲ್ಲ ರಾಜಕೀಯ ನಿವೃತ್ತಿಯನ್ನೇ ಪಡೆಯುತ್ತೇನೆ ಎಂದು ಮಾಜಿ ಸಚಿವ ಎಂಬಿ ಪಾಟೀಲಗೆ ಸವಾಲು ಹಾಕಿದ ಅವರು,  ಭೀಮಾಶಂಕರ ಸಕ್ಕರೆ ಕಾರ್ಖಾನೆಯಲ್ಲಿ ನಯ್ಯಾ ಪೈಸೆ ಬದಲಾಗಿಲ್ಲ. ಹಾಗೇನಾದರೂ ಆಗಿದ್ದರೆ ನಾನು ನನ್ನ ಸ್ಥಾನವನ್ನು ತೊರೆಯಲು ಸಿದ್ಧ ಎಂದು ಹೇಳಿದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!