- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಹೆಬ್ಬಾಳ ಗ್ರಾಮ ಪಂಚಾಯತ ವತಿಯಿಂದ ದಿನಸಿ ಕಿಟ್ ವಿತರಣೆ

ಹೆಬ್ಬಾಳ ಗ್ರಾಮ ಪಂಚಾಯತ ವತಿಯಿಂದ ದಿನಸಿ ಕಿಟ್ ವಿತರಣೆ

ಬಸವನಬಾಗೇವಾಡಿ : ಕೋವಿಡ್ ಆತಂಕದ ಅಲೆ ತಡೆಗಟ್ಟಲು ಗ್ರಾಮ ಪಂಚಾಯತಿ ನೇತೃತ್ವದಲ್ಲಿ ಗ್ರಾಮದ ಬಡಾವಣೆಗಳಲ್ಲಿ ಜಾಗೃತಿ ಜಾಥಾ ನಡೆಸಿ ಕಡುಬಡವರಿಗೆ ಅವಶ್ಯಕ ಔಷಧ ಜತೆಗೆ ತಾಪಂನಿಂದ ಕೊಡಮಾಡಿದ ದಿನಸಿ ಕಿಟ್ ವಿತರಣೆ ಮಾಡಲಾಯಿತು.

ಅಖಂಡ ತಾಲೂಕಿನ ಹೆಬ್ಬಾಳ ಗ್ರಾಮ ಪಂಚಾಯತಿ ಆವರಣದಲ್ಲಿ ಹಮ್ಮಿಕೊಳ್ಳಲಾದ ಜಾಗೃತಿ ಅಭಿಯಾನ ದಿನಸಿ ಕಿಟ್ ಹಾಗೂ ಅವಶ್ಯಕ ಔಷದ ವಿತರಿಸಿ ಮಾತನಾಡಿದ ಸ್ಥಳಿಯ ಆಯುಷ್ಯ ಚಿಕಿತ್ಸಾಲಯದ ವೈದ್ಯ ಡಾ. ಜಗದೀಶ ನಿಡಗುಂದಿ, ಕೊರೋನಾ ಎರಡನೇ ಅಲೆ ತೀವ್ರ ಸ್ವರೂಪದಲ್ಲಿ ಜನರನ್ನು ಆವರಿಸುತ್ತಿದ್ದು ಪ್ರತಿಯೋಬ್ಬರು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವ ಮೂಲಕ ಎಚ್ಚರಿಕೆಯಿಂದ ನಡೆದುಕೊಳ್ಳಬೇಕಾದ ಅವಶ್ಯಕತೆ ಇದ್ದು ಅನಾವಶ್ಯಕವಾಗಿ ಯಾರೂ ಮನೆಯಿಂದ ಹೊರ ಬರಬಾರದು ಎಂದು ಜಾಗೃತಿ ಮೂಡಿಸಿದರು.

ಗ್ರಾಪಂ ಅಧ್ಯಕ್ಷ ಎಂ.ಐ.ಸುಣಗಾರ, ಉಪಾಧ್ಯಕ್ಷೆ ನೀಲಮ್ಮ ಚಲವಾದಿ, ಸದಸ್ಯರಾದ ಬಸವರಾಜ ಕಮತಗಿ, ಮಾರುತಿ ಭಜಂತ್ರಿ, ಪಿಡಿಒ ಬಸವರಾಜ ಕಾಳಗಿ, ಮುಖಂಡರಾದ ಐ.ಎಸ್.ಪಾಟೀಲ, ರಾಮಪ್ಪ ತಳವಾರ, ಶಿವಾನಂದ ದೇಸಾಯಿ ಸೇರಿದಂತೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಗ್ರಾಪಂ ಸಿಬ್ಬಂದಿ ಸೇರಿದಂತೆ ಇತರರು ಇದ್ದರು.

ವರದಿ : ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!