- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಹೆಗಡೆಯವರ ಸೇವೆ ನಿರಂತರ. ಈರಣ್ಣ ಪಟ್ಟಣಶೆಟ್ಟಿ

ಹೆಗಡೆಯವರ ಸೇವೆ ನಿರಂತರ. ಈರಣ್ಣ ಪಟ್ಟಣಶೆಟ್ಟಿ

ಬಸವನಬಾಗೇವಾಡಿ : ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ದಂಪತಿಗಳಿಗೆ ಬಡಜನರ ಸೇವೆ ನಿರಂತರವಾಗಿ ಮಾಡುವ ಶಕ್ತಿ ಆ ಮಂಜುನಾಥ ಸ್ವಾಮಿ ದಯಪಾಲಿಸಿದ್ದಾನೆ ಎಂದು ಮುಖಂಡ ಸಹಕಾರಿ ಮಹಾಮಂಡಳದ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಹೇಳಿದರು.

ಪಟ್ಟಣದ ರಾಧಾಕೃಷ್ಣ ನಗರದಲ್ಲಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಚೇರಿಯಲ್ಲಿ ಬುಧವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅವರು ಹಮ್ಮೀಕೊಂಡ ಕೊರೋನಾದಿಂದ ಸಂಕಷ್ಟಕ್ಕೆಗೀಡಾದ 80 ಬಡ ಕುಟುಂಬಗಳಿಗೆ ಆಹಾರದ ಪೊಟ್ಟಣವನ್ನು ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೊರೋನಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೋ ಜನರ ನೆರವಿಗೆ ನಿಂತು, ಸೋಂಕಿತರಿಗೆ ಆಮ್ಲಜನಕ, ಆಂಬುಲ್ಯನ್ಸ್, ಔಷಧಿ, ನಿರ್ಗತಿಕರಿಗೆ ಉದ್ಯೋಗ ಮಾಸಾಶನ, ಆಹಾರ ಪೊಟ್ಟಣದಂತಹ ಸಾಮಗ್ರಿಗಳನ್ನು ಅವರಿಗೆ ಧೈರ್ಯ ತುಂಬುತ್ತಿರುವ ಕಾರ್ಯ ಶ್ಲಾಘನೀಯ ಇವರಿಗೆ ನಮ್ಮೆಲ್ಲರ ಸಹಕಾರ ಅಗತ್ಯವಾಗಿದೆ ಹಾಗೂ ಪಟ್ಟಣದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕೆಂದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಮಂಜುನಾಥ ಎಚ್.ಕೆ. ಮಾತನಾಡಿ ಕೋವಿಡ್-19 ನಿಂದ ಸಂಕಷ್ಟಕ್ಕೀಡಾದ ಜನರ ಕಷ್ಟ ನೀಗಿಸುವುದರಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ನಿರತರಾಗಿದ್ದಾರೆ. ಆದ್ದರಿಂದ ಜನರು ಯಾವುದೇ ಕಾರಣಕ್ಕೂ ಜನರು ಭಯಭೀತರಾಗಬಾರದು ಎಂದು ಹೇಳಿದರು.

ಈಗಾಗಲೇ ಕಲಬುರಗಿ ಪ್ರಾದೇಶಿಕ ವ್ಯಾಪ್ತಿಯಲ್ಲಿ ಬರುವ ಕಲಬುರಗಿ, ಅಫ್ಜಲಪುರಗಳಲ್ಲಿ ಹಸುವಿನಿಂದ ಯಾರು ಇರಬಾರದು ಎಂದು ಯೋಜನೆಯ ಸೇವಾ ಪ್ರತಿನಿಧಿಗಳು ಅವರಿಗೆ ನಿತ್ಯ ಆಹಾರದ ವ್ಯವಸ್ಥೆಯನ್ನು ಕಲ್ಪಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ತಾಲೂಕಿನ ವ್ಯಾಪ್ತಿಯಲ್ಲಿನ 80 ಬಡ ಕುಟುಂಬಗಳಿಗೆ ಆಹಾರ ಪೊಟ್ಟಣ ನೀಡಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಿ.ಎನ್. ಹೀರೆಮಠ (ಬ್ಯಾಕೋಡ) ಮಾತನಾಡಿದರು. ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಸಂಜೀವ ಕಲ್ಯಾಣಿ, ಕೃಷಿ ಮೇಲ್ವಿಚಾರಕ ರವಿಕುಮಾರ, ಸಿದ್ಧರಾಯ ಕುಂಬಾರ, ಜ್ಞಾನವಿಕಾಸ ಸಮನ್ವಯಾಧಿಕಾರಿ ಶೋಭಾ ನಾಗರಾಳ, ಸೇವಾ ಪ್ರತಿನಿಧಿಗಳಾದ ಮಹಾದೇವಿ ಬಿರಾದಾರ, ಅನ್ನಪೂರ್ಣ ಬಂಡಿವಡ್ಡರ, ನೀಲಮ್ಮ ಬಳವಾಟ, ಉಮಾ ಜಗತಾಪ, ಭಾರತಿ ನಿಕ್ಕಂ, ಸುಜಾತಾ ಭಂಡಾರಿ, ದಾನಮ್ಮ ಇದ್ದರು.

ವರದಿ : ನಾಗೇಶ ನಾಗೂರ

LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!