- Advertisement -Newspaper WordPress Theme
ಪ್ರಮುಖ ಸುದ್ದಿಗಳುಪ್ರಾದೇಶಿಕಹುತಾತ್ಮ ಯೋಧ ಕಾಶಿರಾಯ ಸ್ಮಾರಕ ನಿರ್ಮಾಣ. ಶಾಸಕ ಶಿವಾನಂದ ಪಾಟೀಲ ಭರವಸೆ

ಹುತಾತ್ಮ ಯೋಧ ಕಾಶಿರಾಯ ಸ್ಮಾರಕ ನಿರ್ಮಾಣ. ಶಾಸಕ ಶಿವಾನಂದ ಪಾಟೀಲ ಭರವಸೆ

ವಿಜಯಪುರ : ದೇಶಕ್ಕಾಗಿ ಮಡಿದ ಕಾಶಿರಾಯನಂತಹ ಯೋಧರನ್ನು ಹೊಂದಲು ನಾವು ಯುವಕರನ್ನು ಪ್ರೇರೇಪಿಸಬೇಕು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಶಾಸಕ ಶಿವಾನಂದ ಪಾಟೀಲ ಅವರು ಹೇಳಿದರು.

ಉಕ್ಕಲಿ ಗ್ರಾಮದ ಹುತಾತ್ಮರಾದ ಯೋಧ ಕಾಶಿರಾಯ ಬೊಮ್ಮನಹಳ್ಳಿ ಅವರ ಮನೆಗೆ ತೆರಳಿ  ಕುಟುಂಬಸ್ಥರಿಗೆ ಸಾಂತ್ವನ  ಹೇಳಿ, ಡಿಸಿಸಿ ಬ್ಯಾಂಕ್ ವತಿಯಿಂದ ೫ ಲಕ್ಷ ರೂ. ವಿತರಿಸಿ ಮಾತನಾಡಿದ ಅವರು, ಕಾಶಿರಾಯ ಬೊಮ್ಮನಹಳ್ಳಿಯವರು ಆಕಸ್ಮಿಕವಾಗಿ ವೀರ ಮರಣ ಹೊಂದಿದ್ದು, ದೇಶಕ್ಕಾಗಿ ಹುತಾತ್ಮರಾಗಿದ್ದಾರೆ. ಅವರಲ್ಲಿರುವ ದೇಶಪ್ರೇಮ ಇಡೀ ಭಾರತ ದೇಶ ಮೆಚ್ಚುವಂತಹದ್ದು. ಇಂದು ಉಕ್ಕಲಿ ಗ್ರಾಮ ಹಾಗೂ  ಇಡೀ ದೇಶವೇ ದುಃಖದಲ್ಲಿ ಮುಳುಗಿದೆ. ಅಂತಹ ವೀರಯೋಧರನ್ನು ಪಡೆದ ನಾವು ಪುಣ್ಯವಂತರು. ಅವರ ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿ ಆ ಭಗವಂತ ನೀಡಲಿ ಎಂದು ಅವರು ಹೇಳಿದರು.

ಕುಟುಂಬ ಸದಸ್ಯರ ಮನವಿಯನ್ನು ಸ್ವೀಕರಿಸಿದ ಅವರು ಮನವಿಯನ್ನು ಮುಖ್ಯಮಂತ್ರಿಗಳ ಗಮನಕ್ಕೆ  ತಂದು ,ಹೆಚ್ಚಿನ ಸಹಾಯಕ್ಕಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸುವೆ. ಗ್ರಾಮಸ್ಥರ ಬೇಡಿಕೆಯಂತೆ ಯೋಧರ ಸ್ಮಾರಕ ನಿರ್ಮಾಣಕ್ಕಾಗಿ ನಮ್ಮ ಶಾಸಕರ ಅನುದಾನದಿಂದ ಹಣ ಮಂಜೂರು ಮಾಡಿ ಸ್ಮಾರಕ ನಿರ್ಮಾಣಕ್ಕೆ ನಾವು ,ನೀವೆಲ್ಲರೂ ಸೇರಿ ಪ್ರಯತ್ನಿಸೋಣ ಎಂದು ಹೇಳಿದರು.

ಹಿಂದೆ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಕುಟುಂಬಗಳಿಗೂ ಕೂಡ ಡಿಸಿಸಿ ಬ್ಯಾಂಕ್ ಸಹಾಯ ಮಾಡುತ್ತಾ ಬಂದಿದೆ. ಮುಂದೆಯೂ ಕೂಡ ಮುಂದುವರಿಸಿಕೊಂಡು ಹೋಗಲಾಗುವುದು ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ರಾಜಶೇಖರ್ ಗುಡದಿನ್ನಿ, ನಿರ್ದೇಶಕರಾದ ಗುರುಶಾಂತ ನಿಡೋಣಿ. ಬ್ಯಾಂಕಿನ ಸಿಇಓ ಬಿರಾದಾರ, ಬ್ಯಾಂಕನ ಸಿಬ್ಬಂದಿಗಳು, ಊರಿನ ಹಿರಿಯರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಪ್ರಾಥಮಿಕ ಕೃಷಿ ಪತ್ತಿನ ಸಂಘದ ಸದಸ್ಯರು, ಗ್ರಾಮದ ಜನತೆ, ಯೋಧರಾದ ಕಿಶನ್ ಹಾಗೂ ಇತರರು ಉಪಸ್ಥಿತರಿದ್ದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!