- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಹಿಂದೂ ಹಬ್ಬಕ್ಕೆ ಮಾತ್ರ ನಿರ್ಬಂಧವಾದ್ರೆ ಉಲ್ಲಂಘಿಸಲು ತಯಾರಿದ್ದೇವೆ. ಸರ್ಕಾರಕ್ಕೆ ಶಾಸಕ ಯತ್ನಾಳ ಖಡಕ್ ಎಚ್ಚರಿಕೆ.

ಹಿಂದೂ ಹಬ್ಬಕ್ಕೆ ಮಾತ್ರ ನಿರ್ಬಂಧವಾದ್ರೆ ಉಲ್ಲಂಘಿಸಲು ತಯಾರಿದ್ದೇವೆ. ಸರ್ಕಾರಕ್ಕೆ ಶಾಸಕ ಯತ್ನಾಳ ಖಡಕ್ ಎಚ್ಚರಿಕೆ.

ವಿಜಯಪುರ : ಕೋವಿಡ್ ಮೂರನೇಯ ಅಲೆ ಭಯಾನಕವಾಗಿದೆ ಎಂಬ ಆತಂಕದಿಂದ ಮುನ್ನೆಚ್ಚರಿಕಾ ಕ್ರಮವಾಗಿ ಸರ್ಕಾರ ರಾಜ್ಯದಲ್ಲಿ ಗಣೇಶ ಹಬ್ಬಕ್ಕೆ ಹಲವು ನಿರ್ಬಂಧಗಳನ್ನು ಹೇರಿರುವ ವಿಚಾರವಾಗಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಮ್ಮದೇ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಈ ವಿಡಿಯೊ ನೋಡಿ…

ಈ ಕುರಿತಾಗಿ ವಿಜಯಪುರದಲ್ಲಿ ಶುಕ್ರವಾರ ಮಾತನಾಡಿದ ಯತ್ನಾಳ, ಜನರ ರಕ್ಷಣೆಗಾಗಿ ನಿರ್ಭಂಧ ವಿಧಿಸಿದ್ದರ ಬಗ್ಗೆ ನಮಗೆ ಆಕ್ಷೇಪವಿಲ್ಲ. ಅದನ್ನ ಎಲ್ಲರೂ ಪಾಲಿಸುತ್ತೇವೆ. ಆದರೆ ಕೋವಿಡ್ ನೆಪದಲ್ಲಿ ಕೇವಲ ಹಿಂದೂಗಳ ಹಬ್ಬಕ್ಕೆ ನಿರ್ಬಂಧ ವಿಧಿಸಿದರೆ ನಡೆಯಲ್ಲ. ನಿರ್ಬಂಧಗಳು ಮೋಹರಂ‌‌‌ ಸೇರಿದಂತೆ ಮುಂಬರುವ ಎಲ್ಲ ಹಬ್ಬಗಳಿಗೂ ನಿರ್ಭಂದಗಳು ಅನ್ವಯವಾಗಬೇಕು ಎಂದು ಸೂಚಿಸಿದರು.

ಲವ್ ಜೀಹಾದ್…! ಗೋ ಹತ್ಯೆ…! ಖಡಕ್ ಎಚ್ಚರಿಕೆ ಕೊಟ್ಟ ಯತ್ನಾಳ

ಬಿಜೆಪಿ ಸರ್ಕಾರ, ಬೊಮ್ಮಾಯಿ ಸರ್ಕಾರದಲ್ಲಿ‌ ಇದೆಲ್ಲ‌ ನಡೆಯಲ್ಲ ಅಂದುಕೊಂಡಿದ್ದೇನೆ. ಅವರಿಗೊಂದು ಕಾನೂನು, ನಮಗೊಂದು ಕಾನೂನು ನಡಿಯಲ್ಲ, ಕೇವಲ ಹಿಂದೂಗಳಿಗೆ ಮಾತ್ರ ನಿರ್ಭಂದ ಹಾಕಿದರೆ ಅದನ್ನು ಉಲ್ಲಂಘನೆ ಮಾಡುತ್ತೇವೆ ಎಂದು ರಾಜ್ಯ ಸರ್ಕಾರಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಎಚ್ಚರಿಕೆ ‌ನೀಡಿದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!