- Advertisement -Newspaper WordPress Theme
ಪ್ರಮುಖ ಸುದ್ದಿಗಳುಪ್ರಾದೇಶಿಕಹಳ್ಳದಲ್ಲಿ ಆಸ್ಪತ್ರೆಯ ತ್ಯಾಜ್ಯ. ಪರಿಸರ ಪ್ರೇಮಿಗಳಿಂದ ಆತಂಕ ವ್ಯಕ್ತ..!

ಹಳ್ಳದಲ್ಲಿ ಆಸ್ಪತ್ರೆಯ ತ್ಯಾಜ್ಯ. ಪರಿಸರ ಪ್ರೇಮಿಗಳಿಂದ ಆತಂಕ ವ್ಯಕ್ತ..!

ಗದಗ : ಆಸ್ಪತ್ರೆಯಲ್ಲಿ ವೈದ್ಯರು ಉಪಯೋಗಿಸಿದಂತಹ ಸಾಮಗ್ರಿಗಳಾದ ಸಿರೀಂಜ್, ಸಲಾಯಿನ್ ಬಾಟಲ್ ಸೇರಿದಂತೆ ಇತರೆ ಬಳಕೆಯಾದ ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡುವಂತಿಲ್ಲ. ಆದರೆ ಗದಗ ಜಿಲ್ಲೆ ಡಂಬಳದ ಹಳ್ಳದಲ್ಲಿ ಈ ವೈದ್ಯಕೀಯ ತ್ಯಾಜ್ಯ ಪತ್ತೆಯಾಗಿದ್ದು ಪರಿಸರ ಪ್ರೇಮಿಗಳ ಆತಂಕ ಹೆಚ್ಚಿಸಿದೆ.

ಇಂತಹ ತ್ಯಾಜ್ಯ ವಿಲೇವಾರಿಗಾಗಿ ಸರ್ಕಾರ ಕಟ್ಟುನಿಟ್ಟಿನ ನಿಯಮ ರೂಪಿಸಿದೆ. ಆ ನಿಯಮದಂತೆಯೇ ತ್ಯಾಜ್ಯ ವಿಲೇವಾರಿ ಮಾಡಬೇಕು. ಆದರೆ ಡಂಬಳ ಗ್ರಾಮದ ಬಾಲಕರ ವಸತಿ ನಿಲಯದ ಹತ್ತಿರ ಇರುವ ಒಂದನೇಯ ಹಳ್ಳದಲ್ಲಿ ರೋಗಿಗಳಿಗೆ ಉಪಯೋಗಿಸಿದ ಸಿರಿಂಜ್, ಸಲಾಯಿನ್ ಬಾಟಲ್‌ಗಳು ಹಾಗೂ ಮಾತ್ರೆಯ ಬಾಕ್ಸ್ ಗಳು ಸೇರಿ ತ್ಯಾಜ್ಯ ವಸ್ತುಗಳನ್ನು ಎಸದಿರುವುದು ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತದೆ ಎನ್ನುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ಹುತಾತ್ಮ ಯೋಧನಿಗೆ ಅಂತಿಮ ನಮನ. ಸಂಪೂರ್ಣ ವಿಡಿಯೊ…

ಈ ಪ್ರದೇಶದಲ್ಲಿ ತ್ಯಾಜ್ಯವನ್ನು ಯಾರು ಬೀಸಾಕಿದ್ದಾರೆ ಎಂಬುದು ಈವರೆಗೂ ತಿಳಿದು ಬಂದಿಲ್ಲ. ಈ ಬಗ್ಗೆ ಗ್ರಾಮ ಪಂಚಾಯತಿ ಸ್ಥಳೀಯ ವೈದ್ಯರಿಗೆ ಈ ಬಗ್ಗೆ ಸೂಚನೆ ನೀಡಿ ಕ್ರಮಕ್ಕೆ ಮುಂದಾಗಬೇಕು ಎನ್ನುವುದು ಪರಿಸರ ಪ್ರೇಮಿಗಳ ಆಗ್ರಹವಾಗಿದೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!