- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಹಂಡೆ ಹನುಮಪ್ಪನಾಯಕನನ್ನು ಮರೆತ ಕರುನಾಡು. ವಿಷಾಧ ವ್ಯಕ್ತಪಡಿಸಿದ ಇತಿಹಾಸಕಾರರು

ಹಂಡೆ ಹನುಮಪ್ಪನಾಯಕನನ್ನು ಮರೆತ ಕರುನಾಡು. ವಿಷಾಧ ವ್ಯಕ್ತಪಡಿಸಿದ ಇತಿಹಾಸಕಾರರು

ಬಸವನಬಾಗೇವಾಡಿ : ಬಸವನಾಡಿನ ವೀರ ಪರಾಕ್ರಮಿ ಹಂಡೆ ಹನುಮಪ್ಪನಾಯಕನ ಇತಿಹಾಸವನ್ನು ನಮ್ಮ ಕರುನಾಡು ಮರೆತಿರುವುದುದ ವಿಷಾಧದ ಸಂಗತಿ ಎಂದು ಬೆಂಗಳೂರು ವಿವಿ ಕುಲಪತಿಗಳಾದ  ಡಾ. ಎಂ ಕೊಟ್ರೇಶ್ ಹೇಳಿದರು.

ತಾಲೂಕಿನ ಮುತ್ತಗಿ ಗ್ರಾಮದ ಸಿದ್ರಾಮೇಶ್ವರ ಕಲ್ಯಾಣಮಂಟಪದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕ ಹಾಗೂ ವೀರಶೈವ ಲಿಂಗಾಯತ ಹಂಡೆವಜೀರ ಸಮಾಜ ತಾಲೂಕು ಘಟಕ ಇವರ ಸಹಯೋಗದಲ್ಲಿ ಜರುಗಿದ “ಹನುಮ ಕೋಟೆ” ಕವನ ಸಂಕಲನ ಬಿಡುಗಡೆ ಹಾಗೂ ರಾಜ್ಯ ಮಟ್ಟದ “ಹಂಡೆ ಹನುಮಪ್ಪನಾಯಕ” ರಾಜ್ಯ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಬಸವನಾಡಿನಿಂದ ಆಂಧ್ರದ ಹಂಡೆ ಅನಂತಪುರದವರೆಗೆ ಶೌರ್ಯ ಸಾಹಸದಿಂದ ಮೆರೆದು, ವಿಜಯನಗರ ಸಾಮ್ರಾಜ್ಯದ ರಕ್ಷಣೆ ಮಾಡಿ, ಸರದಾರ, ಪಾಳೆಗಾರ, ಅರಸನಾಗಿ ನಾಡಿನ ಸೇವೇಗೈದಂತಹ ಪರಾಕ್ರಮಿ ಹಂಡೆ ಹನುಮಪ್ಪನಾಯಕನ ಕೀರ್ತಿಯನ್ನು ಇಂದು ನಾವೆಲ್ಲರೂ ನಾಡಿನ ಜನತೆಗೆ ತಿಳಿಸುವ ಅನಿವಾರ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದರು.

ಬಗೆದಷ್ಟು ಆಳವೆಂಬ ಮಾತಿನಂತೆ ಹಂಡೆ ಹನುಮಪ್ಪನಾಯಕನ ಸಾಹಸಗಳು ಇನ್ನೂ ಹೆಚ್ಚುತ್ತಲೇ ಇವೆ. ಇಂತಹ ಪರಾಕ್ರಮಿಯ ಹುಟ್ಟೂರು ಬಸವನಾಡಿನ ಈ ಮುತ್ತಗಿ ಗ್ರಾಮವು ಪುಣ್ಯ ಭೂಮಿಯಾಗಿದೆ. ದುರಾದೃಷ್ಠವೆಂದರೆ, ಇಷ್ಟೇಲ್ಲಾ ಸಾಹಸ ಮೆರೆದ ಇವರ ಇತಿಹಾಸ ನಮ್ಮ ಕರುನಾಡಿನ ಬಹುಪಾಲು ಜನತೆಗೆ ತಿಳಿದೇ ಇಲ್ಲವೆಂಬುದು. ಈಗಾಗಲೇ ಹನುಮಪ್ಪನಾಯಕನ ಕುರಿತಾಗಿ ಹಲವು ರೀತಿಯಲ್ಲಿ ಸಂಶೋಧನೆಗಳು ಬೆಳಕಿಗೆ ಬಂದಿವೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಶೋಧನೆ ನಡೆಸುವ ಮೂಲಕ ಮತ್ತಷ್ಟು ರೋಚಕ ಮಾಹಿತಿಗಳ ಹೂರಣವನ್ನು ಹೊರತೆಗೆಯಲು ಪ್ರಯತ್ನಿಸುವುದಾಗಿ ಹೇಳಿದರು.

ಹಂಡೆ ವಜೀರ ಸಮಾಜದ ಇತಿಹಾಸಕಾರರು ಹಾಗೂ ಹಂಪಿ ವಿ.ವಿ.ನಿ. ಪ್ರಾಧ್ಯಾಪಕರಾದ ಡಾ. ಎಸ್.ಸಿ. ಪಾಟೀಲ ಮಾತನಾಡಿ, ಈಗಾಗಲೇ ಹಂಡೆ ವಜೀರ ಸಮಾಜ ಮತ್ತು ಹಂಡೆ ಹನುಮಪ್ಪನಾಯಕ ಕುರಿತಾಗಿ ಸಾಕಷ್ಟು ಸಂಶೋಧನೆಗಳನ್ನು ನಡೆಸಿದ್ದೇವೆ. ಹಲವಾರು ಕೈಪಿಯತ್ತುಗಳು, ಧಾನದತ್ತಿಗಳು, ಶಾಸನಗಳನ್ನು ಸತತವಾಗಿ ಸಂಶೋಧಿಸಿ, ಹಂಡೆ ಕುಲತಿಲಕ ಹನುಮಪ್ಪನಾಯಕ ಸಮಾಜದ ಹೆಮ್ಮೆ ಎಂದು ಎದೆತಟ್ಟಿ ಹೇಳುವಂತೆ ಮಾಡಿದ್ದೇವೆ.  ಮುಂದಿನ ದಿನಗಳಲ್ಲಿ ಹನುಮಪ್ಪನಾಯಕನ ಕುರಿತಾಗಿ ಇನ್ನೂ ಹೆಚ್ಚಿನ ಬೆಳಕು ಚೆಲ್ಲಲು ನಿರಂತರವಾಗಿ ಪ್ರಯತ್ನಿಸುತ್ತೇನೆ ಎಂದರು.

ಸಮಾಜದ ಹಿರಿಯ ಇತಿಹಾಸಕಾರರಾದ ಎಮ್.ಎಸ್. ಚೌಧರಿ ಮಾತನಾಡಿ, ಹಂಡೆ ಅರಸರ ಕುರಿತಾಗಿ ದೊರೆತಿರುವಂತಹ ಶಾಸನಗಳ ಕುರಿತಾಗಿ, ಸಮಾಜ ಇತಿಹಾಸವನ್ನು ಪರಿಚಯಿಸಿದರು.

ಸಮಾಜದ ಹಿರಿಯ ಮುಖಂಡ ಹಾಗೂ ಕಲಬುರ್ಗಿ ಚಾಲುಕ್ಯ ಅಧ್ಯಯನ ಪೀಠದ ಅಧ್ಯಕ್ಷರಾದ ಜಿ.ಎನ್ ಪಾಟೀಲ ಮಾತನಾಡಿ,  ಹಲವು ದಶಕಗಳ ಕಾಲ ನಾವು ನಿರಂತರವಾಗಿ ಸಮಾಜ ಕಟ್ಟಲು ಶ್ರಮಿಸಿದ್ದೇವೆ. ಈ ಸಮಾಜದಲ್ಲಿ ಹಂಡೆ ವಜೀರ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಂತೆ ಇತಿಹಾಸವನ್ನು ಹೆಕ್ಕಿ ತೆಗೆದು ನಮ್ಮೆಲ್ಲ ಇತಿಹಾಸಕಾರರಿಗೂ ನಮ್ಮ ಸಮಾಜದ ಪರವಾಗಿ ಚಿರರುಣಿ ಎಂದು ಕೃತಜ್ಞತೆ ಸಲ್ಲಿಸಿದ ಅವರು, ಇತಿಹಾಸಗಳ ಹೂರಣ ಹೊರ ತೆಗೆಯಲು ನಮ್ಮ ಚಾಲುಕ್ಯ ಅಧ್ಯಯನ ಪೀಠ ನಿರಂತರವಾಗಿ ಚಟುವಟಿಕೆಯಲ್ಲಿ ಸಾಗುತ್ತಿದೆ. ಸಮಾಜದ ಕೀರ್ತಿಯನ್ನು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚುವಂತೆ ಮಾಡುತ್ತೇವೆ ಎಂದು ಹೇಳಿದರು.

ಕರಿಬಂಟನಾಳ ಹಿರೇಮಠದ ಶಿವಕುಮಾರ ಸ್ವಾಮಿಜಿ ಹಾಗೂ ಮುತ್ತಗಿಯ ಸಂಸ್ಥಾನ ಹಿರೇಮಠದ ವೀರ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ “ಹನುಮ ಕೋಟೆ” ಕವನ ಸಂಕಲನ ಬಿಡುಗಡೆ ಮಾಡಲಾಯಿತು. ಸಾಹಿತಿಗಳಾದ ಅಶೋಕ ಹಂಚಲಿಯವರು ಕೃತಿ ಪರಿಚಯ ಮಾಡಿದರು. ನಂತರ ಬೆಂಗಳೂರು ವಿವಿ ಕುಲಪತಿಗಳಾದ ಡಾ.ಎಂ. ಕೊಟ್ರೇಶ್ ಇವರಿಗೆ ರಾಜ್ಯ ಮಟ್ಟದ “ಹಂಡೆ ಹನುಮಪ್ಪನಾಯಕ” ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಮಹಾಸಭಾದ ಅಧ್ಯಕ್ಷ, ಕೃತಿ ಸಂಪಾದಕರಾದ ಮಹಾಂತೇಶ ಭೀ.ಸಂಗಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾಜದ ಮುಖಂಡರುಗಳಾದ ಡಾ. ಎಸ್.ಎಸ್. ಪಾಟೀಲ ಕಡೂರ ಸೇರಿದಂತೆ ಹಲವು ಮುಖಂಡರುಗಳು ಸಮಾರಂಭದಲ್ಲಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಮಾಜ ಮುಖಂಡ ಹಾಗೂ ಕ.ಜಾ.ಸಾ.ಪ. ತಾಲೂಕಾ ಅಧ್ಯಕ್ಷರಾದ ದೇವೇಂದ್ರ ಗೋನಾಳ, ಬಿ.ಎಸ್. ಪಾಟೀಲ (ಹಾಲಿಹಾಳ), ನೀವೃತ್ತ ಪಾಂಶುಪಾಲರಾದ ಎಸ್.ಎಸ್. ಬಿರಾದಾರ, ಸಮಾಜದ ತಾಲೂಕಾ ಅಧ್ಯಕ್ಷರಾದ ಶೇಖರಗೌಡ ಬಿರಾದಾರ, ಪ್ರೇಮಕುಮಾರ ಮ್ಯಾಗೇರಿ ಸೇರಿದಂತೆ ಹಲವಾರು ಮುಖಂಡರುಗಳು ಬಾಗಿಯಾಗಿದ್ದರು.

ಕಾರ್ಯಕ್ರಮವನ್ನು ಕ.ಚು.ಸಾ.ಪ.ಬ.ಬಾಗೇವಾಡಿ ಅಧ್ಯಕ್ಷರಾದ ಪ್ರಭಾಕರ ಖೇಡದ ಸ್ವಾಗತಿಸಿದರು. ಕೇ.ಕ.ಸಾ.ವೇ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷರಾದ ಮುರುಗೇಶ ಭೀ.ಸಂಗಮ ನಿರೂಪಿಸಿದರು. ಚಿತ್ರಕಲಾ ಶಿಕ್ಷಕರಾದ ಭೀಮಣ್ಣ ನಾಯ್ಕರ ವಂದಿಸಿದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!