- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಹಂಗಾಮಿ ಉಪಕುಲಪತಿಗಳಾಗಿ ಡಾ.ಆರ್.ಎಸ್.ಮುಧೋಳ ನೇಮಕ

ಹಂಗಾಮಿ ಉಪಕುಲಪತಿಗಳಾಗಿ ಡಾ.ಆರ್.ಎಸ್.ಮುಧೋಳ ನೇಮಕ

ವಿಜಯಪುರ : ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಹಂಗಾಮಿ ಉಪಕುಲಪತಿಗಳಾಗಿ ಡಾ.ಆರ್.ಎಸ್.ಮುಧೋಳ ನೇಮಕಗೊಂಡಿದ್ದಾರೆ.

ಡಾ.ಆರ್.ಎಸ್.ಮುಧೋಳ ಅವರು ಮೂಲತಃ ನೆರೆಯ ಅಥಣಿ ತಾಲೂಕಿನ ಕೋವಳ್ಳಿ ಗ್ರಾಮದವರಾಗಿದ್ದು, ವಿಜಯಪುರದ ಕೆ.ಸಿ.ಪಿ ಸೈನ್ಸ್ ಕಾಲೇಜಿನಲ್ಲಿ ಪಿ.ಯು ಮುಗಿಸಿ, ಹುಬ್ಬಳ್ಳಿಯ ಕೆ.ಎಂ.ಸಿ ಯಲ್ಲಿ ಎಂ.ಬಿ.ಬಿ.ಎಸ್ ಮತ್ತು ಎಂ.ಎಸ್ ಶಿಕ್ಷಣದ ನಂತರ  ಬೆಳಗಾವಿ ಕೆ.ಎಲ್.ಇ ಜವಹರಲಾಲ್ ನೆಹರು ವೈದ್ಯಕೀಯ ಕಾಲೇಜಿನಲ್ಲಿ ಹಾಗೂ ಕೆ.ಎಲ್.ಇ ಡಾ. ಪ್ರಭಾಕರ ಕೋರೆ ಅವರ ಆಸ್ಪತ್ರೆಯಲ್ಲಿ ಪ್ರಾಧ್ಯಾಪಕ, ವಿಭಾಗ ಮುಖ್ಯಸ್ಥ ಉಪಪ್ರಾಚಾರ್ಯ, ಆಸ್ಪತ್ರೆಯ ಸುಪರಿಟೆಡೆಂಟ್ ಹಾಗೂ ನಿರ್ದೇಶಕರಾಗಿ ಒಟ್ಟು 35 ವರ್ಷಗಳ ಅಪಾರ ಆಡಳಿತದ ಅನುಭವ ಹೊಂದಿದ್ದಾರೆ.

ಕಿವಿ, ಮೂಗು ಮತ್ತು ಗಂಟಲು ತಜ್ಞರು ಆಗಿರುವ ಡಾ.ಆರ್.ಎಸ್.ಮುಧೋಳ ಅವರು 4 ತಿಂಗಳ ಹಿಂದೆ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಸಮ ಉಪಕುಲಪತಿಯಾಗಿ ನೇಮಕಗೊಂಡಿದ್ದರು. ಉಪಕುಲಪತಿಯಾಗಿದ್ದ ಡಾ.ಎಂ.ಎಸ್.ಬಿರಾದಾರ ಅವರ ಅಕಾಲಿಕ ನಿಧನದಿಂದ ತೆರವಾದ ಸ್ಥಾನಕ್ಕೆ ಡಾ. ಆರ್.ಎಸ್.ಮುಧೋಳ ಅವರನ್ನು ಹಂಗಾಮಿ ಉಪಕುಲಪತಿಯಾಗಿ ನೇಮಕಗೊಳಿಸಲಾಗಿದೆ ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿ.ವಿ ಕುಲಪತಿ, ಮಾಜಿ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!