- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಸ್ವಾತಂತ್ರ್ಯೋತ್ಸವದಲ್ಲಿ ರಕ್ತಧಾನ ಪ್ರೇರಣೆ. ವಿಶೇಷ ಆಚರಣೆಗೆ ಸ್ಪೂರ್ತಿಯಾದ ಯಶೋಧಾ ಟ್ರಸ್ಟ್

ಸ್ವಾತಂತ್ರ್ಯೋತ್ಸವದಲ್ಲಿ ರಕ್ತಧಾನ ಪ್ರೇರಣೆ. ವಿಶೇಷ ಆಚರಣೆಗೆ ಸ್ಪೂರ್ತಿಯಾದ ಯಶೋಧಾ ಟ್ರಸ್ಟ್

ವಿಜಯಪುರ :  ಯಶೋಧಾ ಟ್ರಸ್ಟ, ಯಶೋದಾ ವೖದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಸಂಶೋಧನಾ ಕೇಂದ್ರ ವಿಜಯಪೂರ ಮತ್ತು ಶ್ರೀ ಸಿದ್ದೇಶ್ವರ ರಕ್ತ ಭಂಡಾರ ವಿಜಯಪೂರ ಇವರ ಸಹಯೋಗದಲ್ಲಿ ೭೫ನೇ ಸ್ವಾತಂತ್ರೋತ್ಸವದಪ್ರಯುಕ್ತ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೋಳ್ಳಲಾಯಿತು.

ಭಾರತ ಸಾಧನೆಗೆ ಸ್ಪೂರ್ತಿ. ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಶಾಸಕ ಶಿವಾನಂದ ಮೆಚ್ಚುಗೆ

ಕಾಯ೯ಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಯಶೋಧಾ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಹಾಗೂ ವೈಧ್ಯಾಧಿಕಾರಿಯಾದ ಡಾ. ರವೀಂದ್ರ ಮದ್ರಕಿಯವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯಕ್ಕಾಗಿ ಹೋರಾಡಿ ತಮ್ಮ ಜೀವವನ್ನೆ ದೇಶಕ್ಕಾಗಿ ಮುಡುಪಾಗಿಟ್ಟ ಹೋರಾಟಗಾರರನ್ನು ನೆನೆಯುತ್ತಾ ಸ್ವಪ್ರೇರಣೆಯಿಂದ ರಕ್ತದಾನಮಾಡಲು ಆಗಮಿಸಿರುವಂತಹ ಎಲ್ಲರಿಗು ಶುಭಕೋರಿದರು. ಇದೆ ವೇಳೆ  ವೈಧ್ಯಾಧಿಕಾರಿಗಳಾದ ಡಾ. ಕಮಲಾ ಮದ್ರಕಿಯವರು ಪ್ರಥಮವಾಗಿ ರಕ್ತದಾನ ಮಾಡುವ ಮೂಲಕ ರಕ್ತದಾನಿಗಳಿಗೆ ಪ್ರೇರಣೆಯಾದರು.

ಈ ಶಿಬಿರದಲ್ಲಿ ಆಸ್ಪತ್ರೆಯ ವೖಧ್ಯಾಧಿಕಾರಿಗಳಾದ ಡಾ.Y.D ಬಡಿಗೇರ. ಡಾ. ಮುದಾಸಿರ ಇಂಡಿಕರ. ಡಾ. ಪರಮೇಶ್ವರ, ಡಾ.ಚನ್ನಬಸವ ಬಂಕೂರ (RMO), ಡಾ. ಬಸವಂತ ವೋಹಿತೆ (CEO). ಶ್ರೀ ಸಿದ್ಧೆಶ್ವರ ರಕ್ತ ಭಂಡಾರ ಅಧ್ಯಕ್ಷರಾದ ಗುರುರಾಜ ಶಿರಮಗೂಂಡ ಸೇರಿದಂತೆ ಇನ್ನೀತರ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

ಶಿಬಿರದಲ್ಲಿ ಒಟ್ಟು 50 ಜನ ಸ್ವಪ್ರೇರಣೆಯಿಂದ ರಕ್ತದಾನಮಾಡುವ ಮೂಲಕ ಸ್ವಾತಂತ್ರೋತ್ಸವ ಹಬ್ಬಕ್ಕೆ ವಿಶೇಷ ಕೋಡುಗೆ ನೀಡಿದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!