- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಸ್ಥಾಯಿ ಸಮಿತಿ ನೂತನ ಅಧ್ಯಕ್ಷರಾಗಿ ಅಶೋಕ ಹಾರಿವಾಳ ಆಯ್ಕೆ. ಬೆಂಬಲಿಗರಿಂದ ಸಂಭ್ರಮ

ಸ್ಥಾಯಿ ಸಮಿತಿ ನೂತನ ಅಧ್ಯಕ್ಷರಾಗಿ ಅಶೋಕ ಹಾರಿವಾಳ ಆಯ್ಕೆ. ಬೆಂಬಲಿಗರಿಂದ ಸಂಭ್ರಮ

ಬಸವನಬಾಗೇವಾಡಿ : ಹೋರಾಟದ ಮೂಲಕ ಜನರ ಕಷ್ಟಗಳಿಗೆ ಸ್ಪಂಧಿಸುತ್ತಾ, ರಾಜಕೀಯದತ್ತ ಮುಖ ಮಾಡಿ, ಪುರಸಭೆ ಸದಸ್ಯರಾಗಿರುವ ಅಶೋಕ ಮಲ್ಲಿಕಾರ್ಜುನ ಹಾರಿವಾಳ ಅವರು ಈಗ ಸ್ಥಾಯಿಸಮಿತಿಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಪ್ರತಿಷ್ಠೆ ಮೆರೆದಿದ್ದಾರೆ.

ಶನಿವಾರ ಮದ್ಯಾಹ್ನ ಪಟ್ಟಣದ ಪುರಸಭೆ ಸಭಾಭವನದಲ್ಲಿ ಸರ್ವ ಸದಸ್ಯರ ಸರ್ವಾನುಮತದಿಂದ ಸ್ಥಾಯಿಸಮಿತಿಗೆ 9 ಜನರನ್ನು ಆಯ್ಕೆ ಮಾಡಲಾಗಿದ್ದು, ನಂತರ ಸರ್ವ ಸದಸ್ಯರ ಒಮ್ಮತದಿಂದ ಅಶೋಕ ಮಲ್ಲಿಕಾರ್ಜುನ ಹಾರಿವಾಳ ಅವರನ್ನು ನೂತನ ಸ್ಥಾಯಿಸಮಿತಿ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.

ಸಂಭ್ರಮಾಚರಣೆ : ಪುರಸಭೆಯ ನೂತನ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಅಶೋಕ ಹಾರಿವಾಳ ಅವರು ಆಯ್ಕೆಯಾಗುತ್ತಿದ್ದಂತೆ ಅವರ ಬೆಂಬಲಿಗರು ಅಭಿಮಾನಿಗಳು ಪುರಸಭೆಯ ಮುಂಭಾಗದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು, ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಪುರಸಭೆಗೆ ಆಗಮಿಸಿ ನೂತನವಾಗಿ ಆಯ್ಕೆಯಾದ ಸ್ಥಾಯಿಸಮಿತಿ ಅಧ್ಯಕ್ಷ ಅಶೋಕ ಹಾರಿವಾಳ ಅವರನ್ನು ಸನ್ಮಾನಿಸಿ ಗೌರವಿಸುತ್ತಿರುವುದು ಸಾಮಾನ್ಯವಾಗಿತ್ತು. ನಂತರ ನೂತನ ಸ್ಥಾಯಿಸಮಿತಿ ಅಧ್ಯಕ್ಷರು ತಮ್ಮ ಬೆಂಬಲಿಗರೊಂದಿಗೆ ಬಸವೇಶ್ವರ ದೇವಸ್ಥಾನಕ್ಕೆ ತೆರಳಿ ಮೂಲನಂದೀಶ್ವರನ (ಬಸವೇಶ್ವರ) ದರ್ಶನ ಪಡೆದು ಪೂಜೆ ಸಲ್ಲಿಸಿದರು.

NMMS ನಲ್ಲಿ ಬಸವನಾಡಿನ ವಿದ್ಯಾರ್ಥಿನಿ ಸಾಧನೆ

ಈ ಸಂಧರ್ಭದಲ್ಲಿ ಪುರಸಭೆಯ ಅಧ್ಯಕ್ಷೆ ಅನ್ನಪೂರ್ಣ ಕಲ್ಯಾಣಿ, ಉಪಾಧ್ಯಕ್ಷೆ ಲಕ್ಷ್ಮೀ ಬೆಲ್ಲದ, ಹಿರಿಯ ಸದಸ್ಯರಾದ ನೀಲಪ್ಪ ನಾಯಕ, ರವಿ ಪಟ್ಟಣಶೆಟ್ಟಿ, ಪ್ರವೀಣ ಪೂಜಾರಿ, ರವಿ ನಾಯ್ಕೋಡಿ, ನಜೀರ ಗಣಿ, ಅಶೋಕ ಸಂಪನ್ನವರ, ರಾಜು ಲಮಾಣಿ, ಜಗದೇವಿ ಗುಂಡಳ್ಳಿ, ಫರಜಾನ ಚೌದ್ರಿ, ರೇಖಾ ಬೆಕಿನಾಳ, ನಾಗಮ್ಮ ಗುಂಡಿ, ರೇಖಾ ಕಲ್ಲು ಸೊನ್ನದ, ಪುರಸಭೆ ಮುಖ್ಯಧಿಕಾರಿ ಬಿ,ಎ ಸೌದಾಗರ, ಕಲ್ಲು ಸೊನ್ನದ, ಸಂತೋಷ ಕೂಡಗಿ, ಸುರೇಶ ಹಾರಿವಾಳ, ಶ್ರೀಶೈಲ ಹೆಬ್ಬಾಳ, ಸುರೇಶ ಮಸಬಿನಾಳ, ಚಂದ್ರು ನಿಕ್ಕಂ, ಮಾಂತು ಹೂಗಾರ, ಪುಟ್ಟು ಮದರಿ, ಸಂಗು ಮ್ಯಾಗೇರಿ, ಬಸು ನಾಗಠಾಣ, ಸಂತೋಷ ಮಡಿಕೇಶ್ವರ ಇತರರು ಇದ್ದರು.

ವರದಿ : ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!