- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಸೇವೆಗಳನ್ನು ಸಮಾಜ ಸದಾ ಆದರಿಸುತ್ತದೆ

ಸೇವೆಗಳನ್ನು ಸಮಾಜ ಸದಾ ಆದರಿಸುತ್ತದೆ

ಮುದ್ದೇಬಿಹಾಳ : ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಅಭಿಮಾನಿ ಬಳಗದ ವತಿಯಿಂದ, ಸರ್ಕಾರಿ ಆಸ್ಪತ್ರೇ, ಗ್ರಾಪಂ ಕಾರ್ಯಾಲಯದ ಸಿಬ್ಬಂದಿಗಳಿಗೆ ಉಚಿತ ಆಹಾರ ವಿತರಣೆ, ಶುದ್ಧ ಕುಡಿಯುವ ನೀರು, ಸಾನಿಟೈಜರ್, ಮಾಸ್ಕ್, ವಿತರಣೆಯನ್ನು ಮಾಜಿ ಗ್ರಾ.ಪಂ.ಅದ್ಯಕ್ಷ ಚಿದುಗೌಡ ತುಂಬಗಿಯವರ ಮೂಲಕ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮುಖಂಡರಾದ ಪ್ರಭು ತಳಗೇರಿ ಮಾತನಾಡಿ, ವೈದ್ಯರ ಕರ್ತವ್ಯನಿಷ್ಠೆ, ಪರಿಶ್ರಮ ಮತ್ತು ಸೇವೆಗಳನ್ನು ಸಮಾಜ ಸದಾ ಆದರಿಸುತ್ತದೆ. ಈ ಕೋವಿಡ್ 19 ವಿರುದ್ಧ ದಣಿವರಿಯದೆ ಹೋರಾಡುತ್ತಿರುವ ಎಲ್ಲಾ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗಳ ಕಾರ್ಯ ಶ್ಲಾಘನೀಯ ಎಂದರು.

ಹಗಲಿರುಳು ಕೊರೊನಾ ವಾರಿಯರ್ಸ್ ಗಳಾಗಿ ಕೆಲಸ ಮಾಡುತ್ತಿರುವ ಆರೋಗ್ಯ ಸಿಬ್ಬಂದಿಗಳ ಕರ್ತವ್ಯ ತುಂಬಾ ದೊಡ್ಡದು. ಇಂತಹ ಸನ್ನಿವೇಶದಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗದವರಿಗೆ ಪ್ರಭುಗೌಡ ದೇಸಾಯಿ ಅಭಿಮಾನಿ ಬಳಗದಿಂದ ಆರ್ ಎಸ್ ಪಾಟೀಲ್ ಸೇವಾ ಸಮಿತಿ ವತಿಯಿಂದ ಉಚಿತ ಆಹಾರ ವಿತರಣೆ ಮಾಡಲಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ನ ನಿರ್ದೇಶಕರುಗಳಾದ ರಾಜುಗೌಡ ಪಾಟೀಲ್, ಮೌನೇಶ್ ಬಡಿಗೇರ್, ಗ್ರಾಮದ ಮುಖಂಡರುಗಳಾದ ರಾಮನಗೌಡ ಹುಬ್ಬಳ್ಳಿ, ಸಾಹೇಬಗೌಡ ತುಂಬಗಿ, ಗುರಣ್ಣಗೌಡ ತುಂಬಗಿ, ಮಾಜಿ ಗ್ರಾ.ಪಂ.ಅದ್ಯಕ್ಷರಾದ ಸಿದ್ದಪ್ಪ ತಳಗೇರಿ, ಬಿಜೆಪಿ ಎಸ್,ಸಿ.ಮೋರ್ಚ ಉಪಾಧ್ಯಕ್ಷರಾದ ಶಾಂತಪ್ಪ ಕಣಕಾಲ್ ರವರು ಬಾಗಿಯಾಗಿದ್ದರು.

ವರದಿ : ಶ್ರೀಪಾದ ಜಂಬಗಿ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!