- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಸೇವಾ ನಿವೃತ್ತಿ ಹೊಂದಿದ ಮುಜಾವರ ಶಿಕ್ಷಕಿಗೆ ಸನ್ಮಾನ

ಸೇವಾ ನಿವೃತ್ತಿ ಹೊಂದಿದ ಮುಜಾವರ ಶಿಕ್ಷಕಿಗೆ ಸನ್ಮಾನ

ನಾಲತವಾಡ : ಹಲವು ವರ್ಷಗಳ ಕಾಲ ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಶಿಕ್ಷಕಿ ಎಸ್.ಎಮ್.ಮುಜಾವಾರ ಅವರು ವಯೋ ನಿವೃತ್ತಿ ಹೊಂದಿರುವುದರಿಂದ ಅವಿಗೆ ಸ್ಥಳಿಯ ಉರ್ದು ಪ್ರಾಥಮಿಕ ಶಾಲೆಯಲ್ಲಿ ಸನ್ಮಾನಿಸುವ ಮೂಲಕ ಆತ್ಮೀಯವಾಗಿ ಬೀಳ್ಕೊಡಲಾಯಿತು.

ಈ ಕಾರ್ಯಕ್ರಮದಲ್ಲಿ ಮುಖ್ಯಗುರುಗಳಾದ ಎ.ಎಚ್.ಖಾಜಿ ಮಾತನಾಡಿ, ಶಾಲೆ ಮತ್ತು ಮಕ್ಕಳ ಏಳ್ಗೆಗಾಗಿ ಮಜಾವರ ಶಿಕ್ಷಕಿಯರು ಸಾಕಷ್ಟು ಶ್ರಮಿಸಿದ್ದಾರೆ. ಅವರು ಕಳೆದ 16 ವರ್ಷಗಳಿಂದ ನಮ್ಮ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರ ಸೇವಾ ವೃತ್ತಿಯಲ್ಲಿ ಅತ್ಯಂತ ಸೌಮ್ಯ ಸ್ವಭಾವದಿಂದ ನಡೆದುಕೊಂಡಿದ್ದಾರೆ. ಅವರ ಸೇವೆಯಿಂದ ನಿವೃತ್ತಿ ಹೊಂದುತ್ತಿರುವ ಕಾರಣ ಒಬ್ಬ ಅನುಭವಿ ಹಾಗೂ ಜ್ಞಾನ ಬಂಡಾರ ಇರುವ ಶಿಕ್ಷಕಿಯ ಸೇವೆ ಕಳೆದುಕೊಳ್ಳುತ್ತಿರುವ ದುಖ ನಮಗಿದೆ. ಅವರ ಮುಂದಿನ ಜೀವನವು ಕೂಡ ಭಗವಂತ ಸಂತೋಷ ನೀಡಲಿ ಎಂದು ಹಾರೈಸಿದರು.

ಇನ್ನೋರ್ವ ಅತಿಥಿಯಾಗಿದ್ದ ಸಿ.ಆರ.ಪಿ ಎ.ಆರ್. ಮುದ್ದೇಬಿಹಾಳ ಮಾತನಾಡಿ, ನಲಿ – ಕಲಿ ಮಕ್ಕಳಿಗೆ ಪಾಠ ಮಾಡುವಾಗ ನಾವು ಕೂಡ ಮಕ್ಕಳಾಗಿ ಇರಬೇಕಾಗುತ್ತದೆ, ಆ ಮಕ್ಕಳನ್ನು ಪಾಠ ಮಾಡಬೇಕಾದರೆ ಸಮಾಲಿನ ಸಂಗತಿಯಾಗಿದೆ ಆ ಕಾರ್ಯವನ್ನು ಮುಜಾವಾರ ಶಿಕ್ಷಕಿ ಸಮರ್ಥವಾಗಿ ನಿಭಾಯಿಸಿದ್ದಾರೆ. ಯಾವ ಶಿಕ್ಷಕರಿಂದ ಮಕ್ಕಳ ಮನಸ್ಸಿನ ಮೇಲೆ ಪ್ರಾಭಾವ ಬೀಳುತ್ತೇ, ಅವರು ಒಬ್ಬ ಶ್ರೇಷ್ಠ ಶಿಕ್ಷಕರಾಗಿರುತ್ತಾರೆ ಅಂತಹ ಶ್ರೇಷ್ಠತೆ ಮುಜಾವರ ಶಿಕ್ಷಕಿಯರ ಬಳಿ ಇತ್ತು ಎಂದರು.

ಶಿಕ್ಷಣ ಅಂದರೆ ಏನು? ಅದರ ಅಂತಿಮ ಗುರಿ ಹೇಗಿರಬೇಕು?

ಶಾಸಕರ ಮಾದರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಬಿ.ಜಿ.ಪಟ್ಟಣಶಟ್ಟಿ ಮಾತನಾಡಿ, ಮುಜಾವರ ಮೇಡಂ ಅವರು 2004ರಲ್ಲಿ ಉರ್ದು ಶಾಲೆಗೆ ಸಹ ಶಿಕ್ಷಕಿಯಾಗಿ ಬಂದ ನಂತರ ಮಕ್ಕಳ ಕಲಿಕೆ ಸುಧಾರಣೆ ಸಾಕಷ್ಟು ಶ್ರಮಿಸಿದ್ದಾರೆ ಎಂದರು. ನಂತರ ರಿಜವಾನಾ ಶಿಕ್ಷಕಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಅಂಜುಮ್ ಖಾಜಿ, ಆಸ್ಮಾ ಅವಟಿ, ಪ್ರಾರ್ಥಿಸಿದರು, ಹೆಚ್.ಡಿ.ಪೀರಜಾದೆ ಶಿಕ್ಷಕಿ ನಿರೂಪಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಎಸ್ಡಿ.ಎಮ್ಸಿ ಅಧ್ಯಕ್ಷ ಅಲ್ತಾಪ ಕೊಣ್ಣೂರ, ಸದಸ್ಯರಾದ ದಾವಲಸಾಬ ಮುರಾಳ, ಲಾಳೇಮಶಾಕ ಅವಟಿ, ಸಾಯೇರಾಬಾನು ಸುಳೇಭಾವಿ, ಶಬಾನಾ ಕಿತ್ತೂರ, ಕಾಶಿಂಬಿ ಮಾವಿನಭಾವಿ, ರುಬೀನಾಗೌಸರ ಚುಟ್ಟದ, ನುರಜಹಾಂ ಸುಗಂದಿ, ಕೆಜಿಎಮ್‌ಪಿಎಸ್ ಶಾಲೆಯ ಮಖ್ಯಗುರುಗಳಾದ ಎಸ್.ಎಸ್.ಕವಡಿಮಟ್ಟಿ, ಹರಿಜಕೇರಿ ಶಾಲೆಯ ಶಿಕ್ಷಕ ಎ.ಜಿ.ಗಂಗನಗೌಡರ ಹಾಗೂ ಇನ್ನಿತರರು ಇದ್ದರು.

ವರದಿ : YUNUS MULIMANI


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!