- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಸೂರಜ್ ಗ್ರುಪ್ ವತಿಯಿಂದ 500 ಕುಟುಂಬಗಳಿಗೆ ರಂಜಾನ್ ಕಿಟ್ ವಿತರಣೆ

ಸೂರಜ್ ಗ್ರುಪ್ ವತಿಯಿಂದ 500 ಕುಟುಂಬಗಳಿಗೆ ರಂಜಾನ್ ಕಿಟ್ ವಿತರಣೆ

ಮುದ್ದೇಬಿಹಾಳ : ಪಟ್ಟಣದ ಇಲ್ಲಿನ ಮುಸ್ಲಂ ಯುವ ಮುಖಂಡ ಮೈಬೂಬ ಶಬ್ಬರಹಮ್ಮಿದ ಹಡಲಗೇರಿ ನೇತ್ರತ್ವದ ಸೂರಜ್ ಗ್ರುಪ್ ವತಿಯಿಂದ ಪವಿತ್ರ ರಂಜಾನ್ ಹಬ್ಬದ 500 ಕುಟುಂಬಗಳಿಗೆ ರಂಜಾನ್ ಹಬ್ಬದ ಸಾಮಗ್ರಿಗಳ ಕಿಟ್ ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೋರೊನಾ ಮಹಾಮರಿಯಿಂದ ಈ ದೇಶವೇ ತತ್ತರಿಸದಿ ಹೋಗಿದೆ ಈ ಹಿನ್ನೇಲೆ ಸರಕಾರ ಲಾಕ್ ಡೌನ್ ಹೇರಿಕೆ ಮಾಡಿದ್ದರಿಂದ ಬಡ ಮುಸ್ಲಿಂ ಕೂಲಿ ಕಾರ್ಮಿಕರು ಉದ್ಯೋಗ ಕಳೇದುಕೊಂಡು ತೀವೃ ಸಂಕಷ್ಟದಲ್ಲಿದ್ದಾರೆ ಎಂಬುದನ್ನು ಮನಗಂಡು ಪ್ರತಿ ಬಾರಿ ರಂಜಾನ ಹಬ್ಬವನ್ನು ಅತ್ಯಂತ ಅದ್ದೂರಿ ಯಾಗಿ ಸಂಭ್ರದಿದ ಆಚರಿಸಲಾಗುತ್ತಿತ್ತು. ಆದರೇ ಈ ಬಾರಿ ಕೋರೋನಾ ಹೊಡೆತಕ್ಕೆ ರಂಜಾನ ಹಬ್ಬವವನ್ನು ಎಲ್ಲರೂ ಆಚರಿಸುವಂತಾಗಬೇಕು ಎನ್ನುವ ಉದ್ದೇಶದಿಂದ ಸುಮಾರು 500 ಬಡ ಹಾಗೂ ಕೂಲಿ ಕಾರ್ಮಿಕರಿಗೆ ಅಕ್ಕಿ, ಸಕ್ಕರೆ, ಶಾವಿಗೆ ಪಾಕೇಟ್, ಗರಂ ಮಸಾಲೇ, ಸುರಕುಂಬಾ ಮಸಾಲೇ, ಒಂದು ಸಿರೇ, ಜತೆಗೆ 100 ನಗದು ಹಣ ಸೇರಿದಂತೆ ರಂಜಾನ ಹಬ್ಬದ ಕಿಟ್ ನೀಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಪ್ರಶಾಂತ ಹೂಗಾರ, ಸಮೀರ ದ್ರಾಕ್ಷೀ, ಪ್ರಶಾಂತ ಕಾಳೆ, ಕಾಶಿಮ್ ಕುಂಟೋಜಿ, ಲಾಲಾಸಾಬ ಜತ್ತಿ, ರೇವಸಿದ್ದಪ್ಪ ನಾಯಕ ಸೇರಿದಂತೆ ಹಲವರು ಇದ್ದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!