- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಸೂಕ್ತ ನ್ಯಾಯಕ್ಕೆ ಭೀಮವಾದ ಆಗ್ರಹ

ಸೂಕ್ತ ನ್ಯಾಯಕ್ಕೆ ಭೀಮವಾದ ಆಗ್ರಹ

ಬಸವನಬಾಗೇವಾಡಿ : ತಾಲೂಕಿನ ಕುದರಿಸಾಲವಾಡಗಿ ಗ್ರಾಮದ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಎಸುಗಿ ಕೊಲೆಗೈದಿರುವ ಘಟನೆಯನ್ನು ಖಂಡಿಸಿ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಉಪತಹಶೀಲ್ದಾರ ಜಿ.ಟಿ.ನಾಯಕ ಅವರ ಮುಖಾಂತರ ರಾಜ್ಯಪಾಲರಿಗೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಭೀಮವಾದ) ಕಾರ್ಯಕರ್ತರ ನೇತೃತ್ವದಲ್ಲಿ ಮನವಿ ಸಲ್ಲಸಿದರು.

ಡಿಎಸ್‌ಎಸ್ (ಭೀಮವಾದ) ಜಿಲ್ಲಾ ಸಂಘಟನಾ ಸಂಚಾಲಕ ಅರವಿಂದ ಸಾಲವಾಡಗಿ ಮಾತನಾಡಿ, ಕುದರಿಸಾಲವಾಡಗಿ ಗ್ರಾಮದ ಇಬ್ಬರು ಅಪ್ರಾಪ್ತ ಬಾಲಕಿಯರನ್ನು ಅತ್ಯಾಚಾರ ಮಾಡಿ ಕೊಲೆಗೈದು ಕೈಕಾಲು ಕಟ್ಟಿ ಯಾಳವಾರ ಗ್ರಾಮದ ಹೊಲವೊಂದರಲ್ಲಿನ ಭಾವಿಗೆ ಎಸೆದಿರುವುದು ಹೀನಾ ಕೃತ್ಯವಾಗಿದ್ದು ನಾಗರಿಕ ಸಮಾಜ ತಲೆ ತಗ್ಗಿಸುವಚಿತಾಗಿದೆ, ಈ ಪ್ರಕರಣವನ್ನು ವಿಶೇಷ ಪ್ರಕರಣವೇಂದು ಪರಿಗಣಿಸಿ ಸೂಕ್ತ ನ್ಯಾಯ ಒದಗಿಸಬೇಕು, ನೂಂದ ಕುಟುಂಬದ ಮಕ್ಕಳ ಶಿಕ್ಷಣ ಮತ್ತು ಸರಕಾರಿ ಎಲ್ಲ ಸೌಲಭ್ಯ ರೀತಿಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಮಹಾಂತೇಶ ಸಾಸಾಬಾಳ, ಅಪ್ಪು ಬಂಗಾರಿ, ಪರಶುರಾಮ ಬೆಕಿನಾಳ, ಬಾಲು ಬೆಕಿನಾಳ, ಪ್ರಶಾಂತ ಚಲವಾದಿ ಸೇರಿದಂತೆ ಇತರರು ಇದ್ದರು.

ವರದಿ : ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!