- Advertisement -Newspaper WordPress Theme
ಪ್ರಮುಖ ಸುದ್ದಿಗಳುರಾಜ್ಯಸುಖಾ ಸುಮ್ಮನೆ ಆರೋಪ ಮಾಡೋದು ಯತ್ನಾಳರ ಖಯಾಲಿ. ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಕಿಡಿ

ಸುಖಾ ಸುಮ್ಮನೆ ಆರೋಪ ಮಾಡೋದು ಯತ್ನಾಳರ ಖಯಾಲಿ. ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಕಿಡಿ

ವಿಜಯಪುರ : ಮಹಾನಗರ ಪಾಲಿಕೆ ಅವಧಿ ಮುಗಿದು 2019 ಏಳನೇ ತಿಂಗಳಲ್ಲೇ ಮುಗಿದಿದೆ, ಆದರೆ ಕೆಲ ಸದಸ್ಯರು ಈ ವಿಚಾರವಾಗಿ ಕೋರ್ಟ ಮೆಟ್ಟಿಲೇರಿದ್ದಾರೆ. ಪಾಲಿಕೆ ಚುನಾವಣೆ ನಡೆಯುವ ಹಾಗೆ ಮಾಡಬೇಕಿದೆ ಎಂದು ಮಾಜಿ ಸಚಿವ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ ಹೇಳಿದರು.

ವಿಜಯಪುರದಲ್ಲಿ ಶನಿವಾರ ನಡೆದ ಮಾದ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಲ್ ಶಾಸಕರು ಕೈಗೆ ಸಿಗುತ್ತಿಲ್ಲ, ಸ್ಟೇಟ್ ಲೆವಲ್, ಸೆಂಟ್ರಲ್ ಲೇವಲ್ ನಲ್ಲಿ ಬೆಳೆದಿದ್ದಾರೆ ಎಂಬುದು ಜನರು ಮಾತನಾಡ್ತಿದ್ದಾರೆ ಎಂದು ವ್ಯಂಗ್ಯವಾಡಿದ ಪಟ್ಟಣಶೆಟ್ಟಿ, ಬಡಾವಣೆಯ ಸಮಸ್ಯೆ ಹೇಳಬೇಕು ಎಂದರೂ ವಾರ್ಡ ಗಳಲ್ಲಿ ಮೆಂಬರ್ ಗಳಿಲ್ಲ, ಪಾಲಿಕೆ ಅಥವಾ ನಗರಸಭೆ ಚುನಾವಣೆ ನಡೆಯದೇ ಇರುವದು ಶಾಸಕರಿಗೆ ವರದಾನವಾಗಿದೆ. ಇಷ್ಟೋಂದು ಗ್ಯಾಪ್ ಹಿಂದೆ ಕೂಡಾ ಎಂದು ಆಗಿಲ್ಲ,  ಮಾಜಿ ಮೆಂಬರ್ ಗಳ ತಾವು ತಾವು ಮಾತಾಡಿಕೊಂಡು ಕೋರ್ಟ ಮ್ಯಾಟರ್ ಸರಿ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಲೋಕಲ್ ಶಾಸಕ ಯತ್ನಾಳ ಕೈಗೆ ಸಿಗುತ್ತಿಲ್ಲ. ಸ್ಟೇಟ್ ಲೆವಲ್ ಸೆಂಟ್ರಲ್ ಲೇವಲ್ ನಲ್ಲಿ ಬೆಳೆದಿದ್ದಾರೆಂದು ಸ್ಥಳೀಯರು ಆಡಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು. ಇನ್ನು ಹಿಂದಿನವರು ಯಾರೂ ರಸ್ತೆಗಳನ್ನು ಮಾಡಿಲ್ಲ ಎಂದು ಶಾಸಕ ಯತ್ನಾಳ ಹೇಳುವುದು ತಪ್ಪು. ನನ್ನ ಕಾಲದಲ್ಲಿ ಸಹಿತ ಸಾಕಷ್ಟು ರಸ್ತೆಗಳ ಅಭಿವೃದ್ಧಿ ಮಾಡಲಾಗಿದೆ. ಬೇರೆಯವರು ಮಾಡಿದ ಕೆಲಸಕ್ಕೆ ಸಹಿತ ಇಂದು ಪ್ರಚಾರ ಪಡೆಯುತ್ತಿದ್ದು, ವೈಯಕ್ತಿಕ‌ ದ್ವೇಷ ಇದ್ದರೂ ಸಹಿತ ಸಿಎಂ ಅವರ ಪೊಟೋ ಅಭಿವೃದ್ಧಿ ಕಾರ್ಯ ಕ್ರಮಗಳಿಗೆ ಹಾಕಿಕೊಳ್ಳಬೇಕು ಎಂದು ಯತ್ನಾಳಗೆ ಟಾಂಗ್ ನೀಡಿದರು.

ಇನ್ನೂ ಪ್ರತಿ ತಿಂಗಳು ಸುದ್ದಿಗೋಷ್ಠಿ ನಡೆಸಿ ಯತ್ನಾಳ ರ ಹಲವು ಆರೋಪಗಳಿಗೆ ಪ್ರತ್ಯುತ್ತರ ನೀಡುವುದಾಗಿ ತಿರುಗೇಟು ನೀಡಿದರು. ಇತ್ತಿಚೆಗೆ ಬಿಜೆಪಿ ಜಿಲ್ಲಾ ಕೋಶಾಧ್ಯಕ್ಷ ಹಾಗೂ ಮಾಜಿ ವಿಡಿಎ ಅಧ್ಯಕ್ಷ ಭೀಮಾಶಂಕರ ಹದನೂರರಿಗೆ ಯತ್ನಾಳ ಲಿಗಲ್ ನೋಟಿಸ್ ನೀಡಿದ್ದ ಕುರಿತು ವ್ಯಂಗವಾಡಿ ಹೀಗೆ ನೋಟಿಸ್ ಯತ್ನಾಳರಿಗೆ ನೀಡುತ್ತಾ ಹೋದರೆ ಕೊರ್ಟ್ ತುಂಬಾ ಯತ್ನಾಳ ರ ವಿರುದ್ಧ ನೊಟಿಸ್ ಗಳ ಸುರಿಮಳೆ ಆಗಲಿದೆ. ಅವರು ಎಲ್ಲಾರ ವಿರುದ್ದವೂ ಮಾತನಾಡಿದ್ದಾರೆ, ಸುಖಾ ಸುಮ್ಮನೆ ಆರೋಪ ಮಾಡೋದು ಯತ್ನಾಳರ ಖಯಾಲಿ, ಇನ್ನೂ ಯತ್ನಾಳ ರಿಗೆ ಅವರ ಮೆದುಳಿಗೂ ನಾಲಿಗೆಗೆ ಲಿಂಕ್ ತಪ್ಪಿದೆ ಎಂದು ವಾಗ್ದಾಳಿ ನಡೆಸಿದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!