- Advertisement -Newspaper WordPress Theme
ಪ್ರಮುಖ ಸುದ್ದಿಗಳುಪ್ರಾದೇಶಿಕಸಿಲಿಂಡರ್ ಬ್ಲಾಸ್ಟ್. ಸುಟ್ಟು ಭಸ್ಮವಾದ ಹೋಟೆಲ್

ಸಿಲಿಂಡರ್ ಬ್ಲಾಸ್ಟ್. ಸುಟ್ಟು ಭಸ್ಮವಾದ ಹೋಟೆಲ್

ಕಲಬುರಗಿ : ಹೋಟೆಲ್ ನಲ್ಲಿದ್ದ ಗ್ಯಾಸ್ ಸಿಲಿಂಡರ್ ವೊಂದು ಬ್ಲಾಸ್ಟ್ ಆದ ಪರೀಣಾಮ ಧಗಧಗನೆ ಬೆಂಕಿ ಹೊತ್ತಿಕೊಂಡು ಉರಿದಿರುವ ಘಟನೆ ಜಿಲ್ಲೆಯ ಕಾಳಗಿ ತಾಲ್ಲೂಕಿನ ರಟಕಲ್ ಗ್ರಾಮದಲ್ಲಿನಿನ್ನೆ ರಾತ್ರಿ ನಡೆದಿದೆ.

ಗ್ರಾಮದ ನಿವಾಸಿ ಸಂಗಣ್ಣಾ ಬಳವಡಗಿ ಅವರಿಗೆ ಸೇರಿದ ಹೋಟೆಲ್ ಆಗಿದ್ದು, ನಿನ್ನೆ ಗ್ಯಾಸ್ ಸಿಲಿಂಡರ್ ಬಳಸಿ ಅನ್ನ ತಯಾರಿಸುತ್ತಿದ್ದ ವೇಳೆ ಈ ಅವಘಟ ಸಂಭವಿಸಿದೆ ಎನ್ನಲಾಗಿದ್ದು, ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.

ಘಟನೆಯಲ್ಲಿ ಯಾವುದೇ ರೀತಿಯಲ್ಲಿ ಜೀವ ಹಾನಿ ಉಂಟಾಗಿಲ್ಲ. ನಗದು ಸೇರಿದಂತೆ ನಾಲ್ಕು ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತು ಬೆಂಕಿಗೆ ಆಹುತಿಯಾಗಿದೆ ಎಂದು ಅಂದಾಜಿಸಲಾಗಿದೆ.

ಸಂಗಣ್ಣಾ ಆರ್ಥಿಕವಾಗಿ ಹಿಂದುಳಿದಿದ್ದು, ಹೋಟೆಲ್ ನಲ್ಲಿ ಸಣ್ಣ ಪುಟ ವ್ಯವಹಾರ ನಡೆಸಿ ಬದುಕು ನಡೆಸುತ್ತಿದ್ದು, ಘಟನೆಯಿಂದ ಕುಟುಂಬ ಬೀದಿಗೆ ಬಂದಿದೆ. ಸರಕಾರ ಜಿಲ್ಲಾಡಳಿತ ನೆರವಿಗೆ ಧಾವಿಸಬೇಕೆಂದು ಸಿಪಿಐಎಂ ಮುಖಂಡ ಶರಣಬಸಪ್ಪ ಮಮಶೇಟ್ಟಿ ಆಗ್ರಹಿಸಿದ್ದಾರೆ.

ರಟಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!