- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಸಿಎಂ ಪರ ಬ್ಯಾಟಿಂಗ್ ಮಾಡಿದ ಸಚಿವ ಮುರಗೇಶ ನಿರಾಣಿ

ಸಿಎಂ ಪರ ಬ್ಯಾಟಿಂಗ್ ಮಾಡಿದ ಸಚಿವ ಮುರಗೇಶ ನಿರಾಣಿ

ವಿಜಯಪುರ :  ನಾವ್ಯಾರು ಬೇರೆ ಬೇರೆ ಇಲ್ಲ, 120 ಜನರು ಒಗ್ಗಟ್ಟಾಗಿದ್ದೇವೆ ಎಂದು ಹೇಳುವ ಮೂಲಕ ಬಿಜೆಪಿಯ 12 ಶಾಸಕರು ನಡೆಸಿರುವ ಗುಪ್ತ ಸಭೆಯನ್ನು ಗಣಿ ಸಚಿವ ಮುರಗೇಶ ನಿರಾಣಿ ಸಮರ್ಥಿಸಿಕೊಂಡರು.

ವಿಜುಯಪುರಕ್ಕೆ ಶುಕ್ರವಾರ ಆಗಮಿಸಿದ್ದ ಸಚಿವರು ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿ, ಇನ್ನು ನಾನು 5 ವರ್ಷ ಕೈಗಾರಿಕಾ ಸಚಿವನಾಗಿ ಕೆಲಸ ಮಾಡಿದ್ಧೆನೆ. ಈಗ ಗಣಿ ಮತ್ತು ಭೂವಿಜ್ಞಾನ ಸಚಿವನಾಗಿ ಕೆಲಸ ಮಾಡುತ್ತಿದ್ಧೆನೆ. ಸಿಎಂ ಅಗಲಿ ಅವರ ಮಕ್ಕಳಾಗಲಿ ಯಾವುದರಲ್ಲೂ ಭಾಗಿ ಆಗಿಲ್ಲ. ನನ್ನ ಕಣ್ಣಿಗೆ ಅವರು ಭ್ರಷ್ಟಾಚಾರ ಮಾಡುವಂತಹದು ಕಂಡು ಬಂದಿಲ್ಲ ಎಂದು ಸಿಎಂ ಪರ ಬ್ಯಾಟಿಂಗ್ ಮಾಡಿದರು. ಯತ್ನಾಳ್ ಸಿಎಂ ಬದಲಾವಣೆ ಹೇಳಿಕೆ ವಿಚಾರಕ್ಕೆ ಮಾತನಾಡಲು ನಿರಾಕರಿಸಿ ಅವರು ದೊಡ್ಡವರು ಅವರ ಬಗ್ಗೆ ಮಾತನಾ ಡುವುದು ಸರಿ ಅನಿಸಲ್ಲ ಎಂದರು.

ಮಂಡ್ಯ ಬಗ್ಗೆ ನಿರಾಕರಿಸಿದ ಸಚಿವ : ಕೆ.ಆರ್.ಎಸ್ ಡ್ಯಾಂನಲ್ಲಿ ಯಾವುದೇ ಬಿರುಕು ಇಲ್ಲ. ಅಲ್ಲಿರುವ ಮುಖ್ಯ ಇಂಜಿನಿಯರ್ ಸ್ವತಃ ಸೈಟ್ ಗೆ ತೆರಳಿ, ಡ್ಯಾಂಗೆ ಯಾವುದೇ ಹಾನಿ ಇಲ್ಲ ಎಂದು ತಿಳಿಸಿದ್ದಾರೆ. ನಾನೇ ಸ್ವತಃ ಮಾಹಿತಿ ಪಡೆದುಕೊಂಡಿದ್ದೇನೆ, ಯಾವುದೇ ಬಿರುಕು ಇಲ್ಲ. ಅದು ಮಂಡ್ಯ ರಾಜಕಾರಣ, ಅದರ ಬಗ್ಗೆ ನಾನು ಮಾತನಾಡಲ್ಲ. ಅಲ್ಲಿ ಅನುಭವ ಇರುವ ಮಾಜಿ ಸಿಎಂ, ಸಂಸದರು, ಶಾಸಕರು ಇದ್ದಾರೆ. ನನಗಿಂತ ಅನುಭವ ಹೆಚ್ಚು ಇರೋರು ಇದ್ದಾರೆ. ನಾನು ಯಾವಾಗಲಾದರೂ ಒಮ್ಮೆ ಹೋಗಿ ಬರುವವನು. ಅವರಷ್ಟು ಅನುಭವ ನನಗಿಲ್ಲ, ನನಗೆ ನನ್ನ ಇಲಾಖೆ ಬಗ್ಗೆ ಅಷ್ಟೆ ಅನುಭವ ಇದೆ ಎಂದರು.

ಇನ್ನು 4 ತಿಂಗಳ ಹಿಂದೆ ಬೇಬಿ ಬೆಟ್ಟಕ್ಕೆ ಅಧಿಕಾರಗಳ ಜೊತೆಗೆ ತೆರಳಿ ನೋಡಿದ್ದೇನೆ. ಡ್ಯಾಂನಿಂದ 10 ಮೀ. ಅಂತರಲ್ಲಿ ಎಲ್ಲ ಗಣಿಗಾರಿಕೆ ಬಂದ್ ಮಾಡಿಸಿದ್ದೇನೆ. ಗಣಿಗಳಲ್ಲಿ ಬ್ಲಾಸ್ಟ್ ನಿಂದ ವೈಬ್ರೆಶನ್ ಉಂಟಾಗುತ್ತೆ. ಅದನ್ನ ತಪಾಸಣೆಗೂ ಒಂದು ಏಜೆನ್ಸಿಗೆ ಕೊಟ್ಟಿದ್ದೀವಿ. ಕೊರೊನಾ ಇರುವುದರಿಂದ ಬಂದಿಲ್ಲ. ವೈಬ್ರೆಷನ್ ಬಗ್ಗೆ ತಜ್ಞರು ಮಾಹಿತಿ ನೀಡಿದ ಮೇಲೆ ಕ್ರಮ ತೆಗೆದುಕೊಳ್ತೇನೆ ಎಂದು ಸ್ಪಷ್ಟಪಡಿಸಿದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!