- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಸಿಂದಗಿ ವಿಧಾನಸಭಾ ಉಪ ಚುನಾವಣೆಗೆ ಸಕಲ ಸಿದ್ಧತೆ

ಸಿಂದಗಿ ವಿಧಾನಸಭಾ ಉಪ ಚುನಾವಣೆಗೆ ಸಕಲ ಸಿದ್ಧತೆ

ವಿಜಯಪುರ : ಸಿಂದಗಿ ವಿಧಾನಸಭಾ ಉಪಚುನಾವಣೆಗೆ ಸಂಬಂಧಿಸಿದಂತೆ ಮುಕ್ತ ನ್ಯಾಯಸಮ್ಮತ ಚುನಾವಣೆ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಚುನಾವಣೆಯಲ್ಲಿ ಒಟ್ಟು 234584 ಮತದಾರರು ಮತ ಚಲಾಯಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್ ಅವರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಿಂದಗಿ ವಿಧಾನಸಭಾ ಉಪಚುನಾವಣೆಗೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿ ನಡೆಸಿದ ಅವರು, ಅಂತಿಮವಾಗಿ ಚುನಾವಣಾ ಕಣದಲ್ಲಿ ಒಟ್ಟು ಆರು ಅಭ್ಯರ್ಥಿಗಳು ಉಳಿದಿದ್ದಾರೆ. ಚುನಾವಣೆ ಅಕ್ಟೋಬರ್ 30 ರಂದು ನಡೆಯಲಿದೆ. ಈ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 234584 ಮತದಾರರು ಮತ ಚಲಾಯಿಸಲಿದ್ದು ಈ ಪೈಕಿ 120844 ಪುರುಷ ಮತದಾರರು, 113561 ಮಹಿಳಾ ಮತದಾರರು, 32 ಇತರೆ, 147 ಸರ್ವಿಸ್ ವೋಟರಗಳು ಮತ ಚಲಾಯಿಸಲಿದ್ದಾರೆ ಎಂದು ಅವರು ಹೇಳಿದರು.

ಈ ಚುನಾವಣೆಯ ಅಂಗವಾಗಿ 271 ಮತದಾನ ಕೇಂದ್ರಗಳನ್ನು ಹಾಗೂ 26 ಆಕ್ಸಿಲರಿ ಮತದಾನ ಕೇಂದ್ರಗಳು ಸೇರಿದಂತೆ ಒಟ್ಟು 297 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. 7 ಚೆಕ್ ಪೋಸ್ಟ್ ಗಳು ಕಾರ್ಯನಿರ್ವಹಿಸುತ್ತಿದ್ದು, 22 ಸೆಕ್ಟರ್ ಆಫೀಸರ್ ಗಳು, 18 ಫ್ಲೈಯಿಂಗ್ ಸ್ಕ್ವೇಡ ತಂಡಗಳು, 21 ಸ್ಟ್ಯಾಟಿಕ್ ಸರ್ವೆಲೆನ್ಸ್ ತಂಡಗಳು ಕಾರ್ಯನಿರ್ವಹಿಸುತ್ತಿವೆ.

ಅದರಂತೆ ಓರ್ವ ಸಹಾಯಕ ಎಕ್ಸ್ಪೆಂಡಿಚರ್ ಅಬ್ಸರ್ವರ್, 1 ಅಕೌಂಟಿAಗ್ ತಂಡ, 6 ವಿಡಿಯೋ ಸರ್ವೆಲೆನ್ಸ್ ತಂಡಗಳು, 2 ವಿವಿಂಗ್ ತಂಡಗಳು, 2 ಜಿಲ್ಲಾಮಟ್ಟದ ಮಾಸ್ಟರ್ ಟ್ರೈನರ್ ಗಳು ಹಾಗೂ ವಿಧಾನ ಸಭಾ ಕ್ಷೇತ್ರ ಮಟ್ಟದಲ್ಲಿ 23 ಮಾಸ್ಟರ್ ಟ್ರೈನರ್ ಗಳು ಕಾರ್ಯನಿರ್ವಹಿಸುತ್ತಿದ್ದು ಮತದಾನ ಸಂದರ್ಭದಲ್ಲಿ 1308 ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಇದರಲ್ಲಿ 327 ಪಿಆರ್ಓ, 327 ಎಪಿಆರ್ ಓ ಹಾಗೂ 654 ಪಿ ಓ ಗಳನ್ನು ನಿಯೋಜಿಸಲಾಗಿದೆ.

ಈಗಾಗಲೇ ಪಿಆರ್ಓ, ಎಪಿಆರ್ಓ ಗಳಿಗೆ ತರಬೇತಿಗಳನ್ನು ವಿಜಯಪುರ ಮತ್ತು ಸಿಂದಗಿಯಲ್ಲಿ ನೀಡಲಾಗಿದೆ. ಸಿಂದಗಿ ಆರ್ .ಡಿ ಪಾಟೀಲ್ ಕಾಲೇಜಿನಲ್ಲಿ ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಕೇಂದ್ರ ಸ್ಥಾಪಿಸಿದೆ. ವಿಶೇಷ ಮತದಾರರ ಪೋಸ್ಟಲ್ ಬ್ಯಾಲೆಟ್ ಗಳನ್ನು ಈಗಾಗಲೇ ಚುನಾವಣಾ ಅಧಿಕಾರಿಗಳು ಸ್ವೀಕರಿಸಿದ್ದು, 892 ಜನ ಹಿರಿಯ 80 ವರ್ಷ ಮೇಲ್ಪಟ್ಟ, 402 ಪಿಡಬ್ಲ್ಯೂಡಿ ವೋಟರ್ ಇದ್ದು, 35 ಮೈಕ್ರೋ ಅಬ್ಸರ್ವರ್ ಗಳನ್ನು ನೇಮಿಸಲಾಗಿದೆ ಎಂದು ಅವರು ಹೇಳಿದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!