- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಸಾವಯುವ ಮರೆತ ಅನ್ನದಾತ. ಶಾಸಕ ನಡಹಳ್ಳಿ ಕಳವಳ

ಸಾವಯುವ ಮರೆತ ಅನ್ನದಾತ. ಶಾಸಕ ನಡಹಳ್ಳಿ ಕಳವಳ

ಮುದ್ದೇಬಿಹಾಳ: ರೈತರು ತಮ್ಮ ಕೃಷಿ ಚುವಟಿಕೆಗಳಲ್ಲಿ ಸಾವಯುವ ಕೃಷಿ ಪದ್ದತಿಯನ್ನು ರೂಢಿಸಿ ಕೊಂಡಾಗ ಮಾತ್ರ ಸದೃಡರಾಗಿ ಯಾರ ಸಹಾಯವಿಲ್ಲದೇ ಸುಂದರ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಅಧ್ಯಕ್ಷ ಹಾಗೂ ಶಾಸಕ ಎ ಎಸ್ ಪಾಟೀಲ (ನಡಹಳ್ಳಿ) ಹೇಳಿದರು.

ತಾಲೂಕಿನ ಯರಝರಿ ಗ್ರಾಮದ ಯಲ್ಲಾಲಿಂಗ ಮಠದ ಆವರಣದಲ್ಲಿ ಶ್ರೀ ಮಲ್ಲಾಲಿಂಗ ಪ್ರಭು ಮಹಾಸ್ವಾಮಿಗಳ ನೇತೃತ್ವದಲ್ಲಿ ಹಮ್ಮಿಕೊಂಡಿರುವ ನರಾತ್ರೋತ್ಸವ, ಉಚಿತ ಸಾಮೂಹಿಕ ವಿವಾಹ, ಸರ್ವಧರ್ಮ ಸಮ್ಮೇಳನ ಹಾಗೂ ರಾಜ್ಯ ಕೃಷಿ ಸಿದ್ಧ ಸಾಧಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರು ಹೆಚ್ಚು ಆದಾಯ ಪಡೆಯಬೇಕು ಎಂಬ ಆಸೆಯಿಂದ ಇಂದಿನ ಆಧುನಿಕ ಯುಗದಲ್ಲಿ ರಸಾಯನಿಕ ಗೊಬ್ಬರಕ್ಕೆ ಮಾರುಹೋಗಿ ಅನಾದಿ ಕಾಲದಿಂದಲೂ ನಮ್ಮ ಹಿರಿಯ ರೈತರು ರೂಡಿಸಿಕೊಂಡು ಬಂದಿರುವ ಸಾವಯುವ ಕೃಷಿಯನ್ನು ಮರೆತಿದ್ದಾರೆ ಇದರಿಂದಾಗಿ ಸಂಕಷ್ಟ ಎದುರಿಸುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಇಂದು ರೈತರು ಆಧುನಿಕ ಯುಗದ ಬದುಕಿಗೆ ಆಕರ್ಷಣೆಗೊಳಗಾಗಿ ಸರಕಾರ ಕೋಡುವ ಹೈಬ್ರೀಡ್ ಬೀಜ, ರಸಾಯನಿಕ ಗೊಬ್ಬರಗಳ ಮೇಲೆ ಅವಲಂಭಿತರಾಗಿ ಹೆಚ್ಚು ಆದಾಯದ ನಿರಿಕ್ಷೇಯಲ್ಲಿ ಕೃಷಿ ಚಟುವಟಿಕೆ ನಡೆಸುತ್ತಿರುವದರಿಂದ, ಆಹಾರದಲ್ಲಿ ಗಟ್ಟಿತನ ಶಕ್ತಿಯುತವಿಲ್ಲದೇ ಮನುಷ್ಯ ಹಲವು ರೀತಿಯ ರೋಗಗಳಿಗೆ ತುತ್ತಾಗುತ್ತಿರುವುದನ್ನು ನಾವೇಲ್ಲ ಗಮನಿಸಿದ್ದೇವೆ ಮಾತ್ರವಲ್ಲದೇ ಸದಾ ನಷ್ಟದಲ್ಲಿ ಕಾಲಕಳಿಯುವಂತಾಗಿದೆ ಎಂದರು.

ರೋಚಕ ಸ್ವಾನ (ನಾಯಿ) ರೇಸ್

ಈ ವೇಳೆ ಕೃಷಿಯಲ್ಲಿ ಸಾಧನೆಗೈದ ಅರವಿಂದ ಕೊಪ್ಪ, ಮಂಗಳಾ ನೀಲಗುಂದ ಅವರಿಗೆ ರಾಜ್ಯ ಮಟ್ಟದ ಕೃಷಿ ಸಿದ್ಧ ಸಾಧಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಜಾತ್ರಾಕಮೀಟಿಯ ಅಧ್ಯಕ್ಷ ಮಲಕೇಂದ್ರಾಯಗೌಡ ಪಾಟೀಲ ಪ್ರಾಸ್ಥಾವಿಕವಾಗಿ ಮಾತನಾಡಿದರು. ತಾಲೂಕಾ ಕುರುಬ ಸಂಘದ ಅಧ್ಯಕ್ಷ ಮಲ್ಲಿಕಾಜುನ ಮದರಿ, ಮಾತನಾಡಿದ ಮಹಿಳೆಯರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರಯುವ ಉತ್ತಮ ಗುಣಮಟ್ಟ ಶಿಕ್ಷಣ ಕೊಡಿಸುವ ಮೂಲಕ ಈ ದೇಶದ ಅತ್ಯುತ್ತಮ ನಾಗರಿಕರನ್ನಾಗಿ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಯಲ್ಲಾಲಿಂಗ ಮಠದ ಶ್ರೀ ಮಲ್ಲಾಲಿಂಗ ಪ್ರಭು ಮಹಾಸ್ವಾಮಿಗಳು, ಡಿಸಿಸಿ ಬ್ಯಾಂಕ ನಿರ್ದೇಶಕ ಸೋಮನಗೌಡ ಬಿರಾದಾರ, ಗಣ್ಯರಾದ ಭೀಮಣ್ಣ ದೊಡಮನಿ, ಸುಭಾಷ ಕಟ್ಟಿಮನಿ, ಗಣಪತಿ ಹೆಬ್ಬಾಳ, ಚಂದ್ರಕಾಂತ ವಾಲಿಕಾರ, ಭೀಮನಗೌಡ ಹಳೆಮನಿ, ಸೋಮಶೇಖರ ಹೊಸಮಠ, ಪಾಂಡುರಂಗ ಪೂಜಾರಿ, ಬಸವರಾಜ ಗುಳಬಾಳ ಸೇರಿದಂತೆ ಹಲವರು ಇದ್ದರು. ಮಹಾಂತೇಶ ಪಟ್ಟಣ ನೀರೂಪಿಸಿದರು.

ವರದಿ : ಶ್ರೀಪಾದ ಜಂಬಗಿ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!