- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಸಾಲವನ್ನು ಸದ್ಭಳಕೆ ಮಾಡಿಕೊಳ್ಳಿ: ಡಾ. ಪಾಟೀಲ

ಸಾಲವನ್ನು ಸದ್ಭಳಕೆ ಮಾಡಿಕೊಳ್ಳಿ: ಡಾ. ಪಾಟೀಲ

ಬಸವನಬಾಗೇವಾಡಿ: ಸ್ಥಳೀಯ ತೆಲಗಿ ರಸ್ತೆ ಗೋಡಾವನ ಹತ್ತಿರವಿರುವ ಸಿದ್ರಾಮೇಶ್ವರ ಪತ್ತಿನ ಸಹಕಾರಿ ಸಂಘದ 19ನೇ ವಾರ್ಷಿಕ ಸರ್ವ ಸಾಧಾರಣ ಸಭೆ ಇತ್ತೀಚೆಗೆ ನಡೆಯಿತು.

 ಈ ಸಂದರ್ಭದಲ್ಲಿ ವಿಜಯಪುರ ಸಂಗಮೇಶ್ವರ ಆಸ್ಪತ್ರೆಯ ವೈದ್ಯ ಡಾ. ಎಸ್.ಎಸ್.ಪಾಟೀಲ ಮಾತನಾಡಿ ಪ್ರಸಕ್ತ ವರ್ಷ ಸಂಘವು ವಾರ್ಷಿಕ 10,ಕೋಟಿ ವ್ಯವಹಾರ ಮಾಡಿ 8.5ಲಕ್ಷ ನಿವ್ವಳ ಲಾಭದೊಂದಿಗೆ ಪ್ರಗತಿಯತ್ತ ಸಾಗುತ್ತಿರುವುದು ಹೆಮ್ಮೆಯ ಸಂಗತಿ, ಮುಂಬರುವ ದಿನಗಳಲ್ಲಿ ಸಂಘವು ಹೆಮ್ಮರವಾಗಿ ಬೆಳೆಯಲಿ ಎಂದು ಹೇಳಿದರು.

 ಸಂಘದ ವತಿಯಿಂದ ಸಭಾಭವನ ಕಟ್ಟಡ ನಿರ್ಮಾಣ ಮಾಡುವುದು, ಪ್ರತಿಭಾವಂತ ಮಕ್ಕಳ ಓದಿಗಾಗಿ ಪ್ರೋತ್ಸಾಹಿಸಿವುದರ ಕುರಿತು ನಡೆಸಬೇಕಿದೆ. ಸಂಘವು ಸದಸ್ಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದಾಗಿದೆ. ಸಂಘದಿAದ ಪಡೆದ ಸಾಲವನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

 ಈ ಸಂದರ್ಭದಲ್ಲಿ ಚಿಕ್ಕೋಡಿ ಹೆಸ್ಕಾಂ ಅಧಿಕಾರಿ ಬಿ.ಬಿ.ಪಾಟೀಲ (ಸಿಂಧಗೇರಿ) ಎಸ್.ಜಿ.ಪಾಟೀಲ ಸಿ.ಆರ್.ಬಿರಾದಾರ ಮಾತನಾಡಿದರು, ಶೇಖರಗೌಡ ಬಿರಾದಾರ, ಎಚ್.ಬಿ.ಮೇಲ್ದಾಪೂರ, ಗಿರಿಧರಗೌಡ ಗೋನಾಳ, ಚಂದಮ್ಮಗೌಡತಿ ಪಾಟೀಲ, ಹಣಮಂತ್ರಾಯಗೌಡ ಪಾಟೀಲ, ಶಾಂತಗೌಡ ಪಾಟೀಲ ಇದ್ದರು. ಪ್ರಭಾಕರ ಖೇಡದ ಪ್ರಾರ್ಥಿಸಿದರು, ಸಂಘದ ವ್ಯವಸ್ಥಾಪಕ ದೇವೇಂದ್ರ ಗೋನಾಳ ವಾರ್ಷಿಕ ವರದಿ ವಾಚಿಸಿದರು, ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!