- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಸಾಮಾಜಿಕ ಕಳಕಳಿ ಮೆರೆದ ಜೈನ್ ಸಮುದಾಯಕ್ಕೆ ಪ್ರಭುಗೌಡ ದೇಸಾಯಿ ಮೆಚ್ಚುಗೆ

ಸಾಮಾಜಿಕ ಕಳಕಳಿ ಮೆರೆದ ಜೈನ್ ಸಮುದಾಯಕ್ಕೆ ಪ್ರಭುಗೌಡ ದೇಸಾಯಿ ಮೆಚ್ಚುಗೆ

ಮುದ್ದೇಬಿಹಾಳ : ಜೈನ್ ಸಮುದಾಯವು ನಾಗರಿಕ ಸಮಾಜಕ್ಕೆ ತಮ್ಮದೆಯಾದ ಕೊಡುಗೆಯನ್ನು ನೀಡುತ್ತಾ ಹಿಂದಿನಿಂದಲೂ ಸಾಮಾಜಿಕ ಕಳಕಳಿ ಮೆರೆದಿದೆ ಎಂದು ಮಾಜಿ ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಹೇಳಿದರು.

ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಜೈನ್ ಸಮಾಜದಿಂದ ಕೋವಿಡ್ ಸೋಂಕಿತ ರೋಗಿಗಳಿಗೆ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿರುವವರ ಆರೋಗ್ಯಕ್ಕಾಗಿ ವ್ಯಾಯಾಮದ ಕಿಟ್ ಹಂಚಿಕೆಯನ್ನು ಮಾಡಿ ಮಾತನಾಡಿದ ಅವರು, ಶ್ವಾಸಕೋಶದ ವ್ಯಾಯಾಮ ಕ್ಕೆ ಬ್ರಿಥಿಂಗ್ ಕಿಟ್ ಅವಶ್ಯಕತೆ ಇರುವುದನ್ನು ಗಮನಿಸಿದ ಜೈನ್ ಸಮಾಜದ ಸ್ನೇಹಿತರು ಕಿಟ್ ನೀಡಿದ್ದು ಒಳ್ಳೆಯ ಕಾರ್ಯವಾಗಿದೆ. ಮುದ್ದೇಬಿಹಾಳ ನಗರದಲ್ಲಿ ಹಿಂದಿನಿಂದಲೂ ಸಮಾಜಮುಖಿ ಸಮಾಜಸೇವೆಯ ಕಾರ್ಯಗಳನ್ನು ಜೈನ್ ಸಮುದಾಯದವರು ಮಾಡುತ್ತ ಬಂದಿರುವುದು ಹೆಮ್ಮೆಯ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸರಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಮಾಸ್ಕ್ ಗಳ ಅವಶ್ಯಕತೆ ಇರುವುದು ನನ್ನ ಗಮನಕ್ಕೆ ಬಂದಿದ್ದು, ಈ ಕುರಿತು ಜಿಲ್ಲಾ ವೈದ್ಯಾಧಿಕಾರಿಗಳ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ ಅವರು, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಅನಿಲ್ ಕುಮಾರ್ ಶೇಗುಣಸಿ ಮತ್ತು ಎಲ್ಲಾ ವೈದ್ಯಕೀಯ ಸಿಬ್ಬಂದಿಗಳು ಹಗಲಿರುಳು ಕೋವಿಡ್ ಸೋಂಕಿತರ ಸೇವೆ ಚಿಕಿತ್ಸೆ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಜೈನ್ ಸಮಾಜದ ಮುಖಂಡ, ಸರಕಾರಿ ಆಸ್ಪತ್ರೆಯ ರಕ್ಷಣಾ ಸಲಹಾ ಸಮಿತಿಯ ಸದಸ್ಯ ವಿಕ್ರಮ್ ಓಸ್ವಾಲ್ ಮಾತನಾಡಿ, ನಮ್ಮ ಸಮಾಜದಿಂದ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗಳಿಗೆ ಮತ್ತು ಕೋವಿಡ್ ಸೋಂಕಿತರಿಗೆ ಸಮಾಜದಿಂದ ನಿತ್ಯ ಕಷಾಯ ಹಾಗೂ ಹಣ್ಣುಗಳನ್ನು ವಿತರಣೆ ಮಾಡುತ್ತಿದ್ದು, ಆಸ್ಪತ್ರೆಯ ವೈದ್ಯಾಧಿಕಾರಿ ಅವರು ಕೋವಿಡ್ ಸೋಂಕಿತರಿಗೆ ಉಸಿರಾಟದ ಸಮಸ್ಯೆ ಬಗೆಹರಿಸಲು ಬ್ರಿಥಿಂಗ್ ಕಿಟ್ ಅವಶ್ಯಕತೆ ಇರುವ ಕುರಿತು ಹೇಳಿದ್ದರು, ಇದನ್ನರಿತ ನಮ್ಮ ಸಮಾಜದ ಮುಖಂಡರುಗಳು ಬ್ರಿಥಿಂಗ್ ಕಿಟ್‌ಗಳನ್ನು ಇಂದು ಹಂಚಿಕೆ ಮಾಡಲಾಯಿತು ಎಂದರು.

ಈ ವೇಳೆ ಜಿಲ್ಲಾ ಆರೋಗ್ಯ ಪ್ರಧಾನ ಕಾರ್ಯದರ್ಶಿ ಆನಂದಗೌಡ ಬಿರಾದಾರ, ಜೈನ್ ಸಮಾಜದ ಮುಖಂಡರಾದ ಮಹೇಂದ್ರ ಓಸ್ವಾಲ್, ಪಾರಸ ಪೂರವಾಲ, ಮುಖೇಶ್ ಓಸ್ವಾಲ್, ಶ್ರೇನಿಕ್ ಪೂರವಾಲ, ಜಿತೇಂದ್ರ ಓಸ್ವಾಲ್, ಸಿದ್ದಾರ್ಥ ಓಸ್ವಾಲ್ ಆಸ್ಪತ್ರೆಯ ಸಿಬ್ಬಂದಿಗಳಾದ ರಾಜೇಶ್ವರಿ ಹೊಕ್ರಾಣಿ, ಬಸಯ್ಯ ಸಾರವಾಡ, ಶಿವಾನಂದ ಮಾಗಿ, ಬಸವರಾಜ ಇಲಕಲ್, ಶ್ರೀಶೈಲ್ ಹೂಗಾರ ಸ್ಭೆರಿದಂತೆ ಮುಂತಾದವರು ಉಪಸ್ಥಿತರಿದ್ದರು.

ವರದಿ : ಶ್ರೀಪಾದ ಜಂಬಗಿ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!