- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯ“ಸಸಿ ನೆಡಿ, ಒಳ್ಳೆಯ ನಾಗರಿಕರಾಗಿ”. ಡಿ.ಎಸ್.ಪಿ ಅರುಣಕುಮಾರ

“ಸಸಿ ನೆಡಿ, ಒಳ್ಳೆಯ ನಾಗರಿಕರಾಗಿ”. ಡಿ.ಎಸ್.ಪಿ ಅರುಣಕುಮಾರ

ಬಸವನಬಾಗೇವಾಡಿ : ನಮ್ಮ ಸುತ್ತಮುತ್ತಲಿನ ಪರಿಸರವನ್ನು ಕಾಪಾಡುವುದು ಆದ್ಯ ಕರ್ತವ್ಯ ವಾಗಿದೆ, ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಉಳಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಡಿ.ಎಸ್.ಪಿ ಅರುಣ್ ಕುಮಾರ್ ಕೋಳೂರ ಹೇಳಿದರು.

ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ವಿಶ್ವಗುರು ಪ್ರೈಡ್ ಸಿಟಿ ಲೇಔಟ್ನ ಉದ್ಯಾನವನದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ, ಸಸಿ ನೆಟ್ಟು ಮಾತನಾಡಿದ ಅವರು, ಕೊವಿಡ್ ಸಂದರ್ಭದಲ್ಲಿ ನಾವು ಅನೇಕ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ ಮುಖ್ಯವಾಗಿ ಆಮ್ಲಜನಕದ ಕೊರತೆ ಬಹಳ  ಕಾಡ್ತಾ ಇದೆ, ಪ್ರತಿಯೊಬ್ಬರು ಸಸಿಗಳನ್ನು ನೆಟ್ಟು ಪೋಷಣೆ ಮಾಡುವುದರ ಮೂಲಕ ಸಮಾಜದಲ್ಲಿ ಒಳ್ಳೆಯ ನಾಗರಿಕರಾಗಿ ಬಾಳಬೇಕು ಎಂದರು.

ಇಲ್ಲ ಎನ್ನಬೇಡಿ. ಲಸಿಕೆ ನೀಡಿ ಜನರ ಪ್ರಾಣ ರಕ್ಷಿಸಿ

ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷರಾದ ಶಂಕರಗೌಡ ಬಿರಾದಾರ ಮಾತನಾಡಿ, ಕಳೆದ ಇಪ್ಪತ್ತು ವರ್ಷಗಳಿಂದ ಪಟ್ಟಣದ ವಿವಿಧ ಬಡಾವಣೆಯ ಉದ್ಯಾನವನಗಳಲ್ಲಿ ರಸ್ತೆಯ ಪಕ್ಕದಲ್ಲಿ ಶಾಲಾ ಕಾಲೇಜು ಆವರಣಗಳಲ್ಲಿ ರಾಷ್ಟ್ರೀಯ ಬಸವ ಸೈನ್ಯ ಸಂಘಟನೆ ಕಾರ್ಯಕರ್ತರು ಪ್ರತಿ ವರ್ಷ ಮಳೆಗಾಲ ಪ್ರಾರಂಭವಾಗುವ ಮುಂಚೆ ಸಾವಿರಾರು ಸಸಿಗಳನ್ನು ನೆಟ್ಟು ಹಸಿರು ಬಸವನಬಾಗೇವಾಡಿಗೆ ನಾಂದಿ ಹಾಡಿದ್ದೇವೆ. ಮುಂಬರುವ ದಿನಗಳಲ್ಲಿ ಕೂಡ ತಾಲ್ಲೂಕಿನಾದ್ಯಂತ ಸಸಿಗಳನ್ನು ನೆಟ್ಟು ಹಸಿರು ಕ್ರಾಂತಿ ಮಾಡಲು ಸಂಕಲ್ಪ ಮಾಡಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಖಂಡರಾದ ಸಂಗಮೇಶ ಓಲೇಕಾರ ರಾಷ್ಟ್ರೀಯ ಬಸವಸೈನ್ಯದ ತಾಲ್ಲೂಕಾಧ್ಯಕ್ಷರಾದ ಸಂಜು ಬಿರಾದಾರ, ಶ್ರೀಕಾಂತ್  ಕೊಟ್ರಶೆಟ್ಟಿ,  ಮನ್ನಾನ ಶಾಬಾದಿ, ಸುನೀಲ ಚಿಕ್ಕೊಂಡ, ಪ್ರಶಾಂತ್ ಮುಂಜಾನೆ, ಗುರುರಾಜ್ ವಂದಾಲ, ವೀರೇಶ್ ಗಬ್ಬೂರ್, ಅರವಿಂದ ಗೊಳಸಂಗಿ,  ಶ್ರೀಧರ್ ಗಾಯಕ್ವಾಡ್, ವಿಶ್ವನಾಥ್ ಹಿಟ್ನಳ್ಳಿ ಸೇರಿದಂತೆ ಇನ್ನೀತರರು ಉಪಸ್ಥಿತರಿದ್ದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!