- Advertisement -Newspaper WordPress Theme
ಪ್ರಮುಖ ಸುದ್ದಿಗಳುಪ್ರಾದೇಶಿಕಸರ್ವೇ ಮಾಡಿ, ಚಿಕಿತ್ಸೆ ಪ್ರಾರಂಭಿಸಿ. ಅಗತ್ಯ ನೆರವಿಗೆ ಬಿ.ಎಲ್.ಡಿ.ಇ ಬದ್ಧ ಎಂದ ಶಾಸಕ ಎಂಬಿ ಪಾಟೀಲ

ಸರ್ವೇ ಮಾಡಿ, ಚಿಕಿತ್ಸೆ ಪ್ರಾರಂಭಿಸಿ. ಅಗತ್ಯ ನೆರವಿಗೆ ಬಿ.ಎಲ್.ಡಿ.ಇ ಬದ್ಧ ಎಂದ ಶಾಸಕ ಎಂಬಿ ಪಾಟೀಲ

ವಿಜಯಪುರ : ಗ್ರಾಮೀಣ ಜನರ ಮನೆ-ಮನೆ ಸರ್ವೇ ಮಾಡಿ ಅನಾರೋಗ್ಯಕ್ಕೀಡಾದವರಿಗೆ ರೋಗ ಲಕ್ಷಣಗಳನುಸಾರ ಚಿಕಿತ್ಸೆ ನೀಡಲು ಪ್ರಾರಂಭಿಸಿದರೆ, ಇಡೀ ರಾಜ್ಯದಲ್ಲಿಯೇ ನಮ್ಮ ಜಿಲ್ಲೆ ಮಾದರಿಯಾಗುತ್ತದೆ ಎಂದು ಮಾಜಿ ಸಚಿವ, ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ್ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ, ಮನವಿ ಪತ್ರ ನೀಡಿ, ಚರ್ಚೆ ನಡೆಸಿದ ಅವರು, ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಮೊದಲನೆ ಅಲೆಯಲ್ಲಿ ಅಷ್ಟಾಗಿ ಕಂಡು ಬರದ ಕೊರೊನಾ ಕಾಯಿಲೆ 2ನೇ ಅಲೆಯಲ್ಲಿ ಹೆಚ್ಚಾಗಿ ಬಾಧಿಸುತ್ತಿದೆ. ಇದರಿಂದ ಗ್ರಾಮಗಳಲ್ಲಿ ಸರಣಿ ಸಾವುಗಳು ಸಂಭವಿಸುತ್ತಿದ್ದು, ಕೊರೊನಾ ನಂತರದ ಕಾಯಿಲೆಗಳಿಗೆ ಇಲ್ಲಿನ ಜನರು ಬಳಲುತ್ತಿದ್ದಾರೆ ಎಂದು ತಿಳಿಸಿದರು.

ಕಾಯಿಲೆ ಹರಡುವಿಕೆ ತಪ್ಪಿಸಲು ಮನೆ-ಮನೆ ಆರೋಗ್ಯ ಸರ್ವೇ, ಅನಾರೋಗ್ಯ ವ್ಯಕ್ತಿಗಳ ಮಾಹಿತಿ, ಅಗತ್ಯವಿರುವವಿಗೆ ಚಿಕಿತ್ಸೆ ಈ ಮೂರು ಕ್ರಮಗಳನ್ನು ಜಿಲ್ಲಾಡಳಿತದಿಂದ ಕೈಗೊಂಡು ಇಡೀ ರಾಜ್ಯಕ್ಕೆ ಮಾದರಿ ಯಾಗುವದರೊಂದಿಗೆ, ನಮ್ಮ ಜಿಲ್ಲೆಯ ಜನತೆಯ ಆರೋಗ್ಯ ರಕ್ಷಣೆಗೆ ಜಿಲ್ಲಾಡಳಿತ ಮುಂದಾಗಬೇಕು. ಅದಕ್ಕೆ ಅಗತ್ಯ ನೆರವು ಬಿ.ಎಲ್.ಡಿ.ಇ ಸಂಸ್ಥೆಯಿಂದ, ಶಾಸಕರ ನಿಧಿಯಿಂದ ಕೂಡ ಒದಗಿಸುವುದಾಗಿ ಎಂ.ಬಿ.ಪಾಟೀಲ್ ಹೇಳಿದರು.

ಈ ಮನವಿಗೆ ಸಕಾರಾತ್ಮಕಾವಗಿ ಸ್ಪಂಧಿಸಿದ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ತಮ್ಮ ಸಲಹೆ ಯೋಗ್ಯವಾಗಿದ್ದು, ಸೋಮವಾರದಿಂದಲೇ ನಾವು ಈ ಕುರಿತು ಕಾರ್ಯಪ್ರವೃತ್ತರಾಗುತ್ತೇವೆ ಎಂದರು.

ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೋವಿಂದ ರೆಡ್ಡಿ ಅವರು ಗ್ರಾಮಾಂತರ ಪ್ರದೇಶದಲ್ಲಿ ಕೊರೊನಾ ವ್ಯಾಪಕವಾಗಿ ಹಬ್ಬುತ್ತಿರುವ ಕುರಿತು ಮಾಹಿತಿ ಇದೆ. ವಿಜಯಪುರ ತಾಲೂಕಿನ ಗುಣಕಿ ಹಾಗೂ ಮತ್ತಿತರ ಹಳ್ಳಿಗಳಲ್ಲಿ ಇಂತಹ ಪ್ರಕರಣಗಳು ನನ್ನ ಗಮನಕ್ಕೆ ಬಂದಿದೆ.  ಸ್ಥಳೀಯ ಗ್ರಾಮ ಪಂಚಾಯತ್ ಆಡಳಿತಗಳಿಂದ 15ನೇ ಹಣಕಾಸು ಅನುದಾನವನ್ನು ಕೊರೊನಾ ನಿಮಿತ್ತ ಬಳಸುವಂತೆ ಸೂಚನೆ ನೀಡಲಾಗಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಹೇಂದ್ರ ಕಾಪಸೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಚವ್ಹಾಣ, ಡಾ.ಮಹಾಂತೇಶ ಬಿರಾದಾರ ಉಪಸ್ಥಿತರಿದ್ದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!