- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಸರ್ಕಾರದ ಸೌಲಭ್ಯ ಸದುಪಯೋಗಕ್ಕೆ ಕಾರ್ಮಿಕರಿಗೆ ಕರೆ ನೀಡಿದ ಶಾಸಕ ಸೋಮನಗೌಡ ಪಾಟೀಲ

ಸರ್ಕಾರದ ಸೌಲಭ್ಯ ಸದುಪಯೋಗಕ್ಕೆ ಕಾರ್ಮಿಕರಿಗೆ ಕರೆ ನೀಡಿದ ಶಾಸಕ ಸೋಮನಗೌಡ ಪಾಟೀಲ

ದೇವರಹಿಪ್ಪರಗಿ : ಕಾರ್ಮಿಕ ಇಲಾಖೆಯಡಿ ಕಟ್ಟಡ ಕಾರ್ಮಿಕರು ನೋಂದಣಿ ಮಾಡಿಕೊಳ್ಳುವುದರ ಮೂಲಕ ಸರ್ಕಾರದ ಸೌಲಭ್ಯಗಳ ಸದುಪಯೋಗ ಪಡೆಯಲು ಮುಂದಾಗಬೇಕು ಎಂದು ಶಾಸಕ ಸೋಮನಗೌಡ ಪಾಟೀಲ ಸಾಸನೂರ ಕರೆ ನೀಡಿದರು.

ನಿಂಬೆನಾಡಿನಲ್ಲಿ ತಲೆ ಎತ್ತಲಿರುವ ಶಾಸಕ ಯಶವಂತರಾಯಗೌಡರ ಕನಸಿನ ಮೆಗಾ ಮಾರ್ಕೆಟ್

ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯದಲ್ಲಿ ಕಾರ್ಮಿಕ ಇಲಾಖೆ, ತಾಲ್ಲೂಕು ಆಡಳಿತ, ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ಕಾರ್ಮಿಕ ಇಲಾಖೆ ದೇವರಹಿಪ್ಪರಗಿ ಇವರ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಕೋವಿಡ್-19 ಸಂಕಷ್ಟದಲ್ಲಿರುವ ವಿಜಯಪುರ ಜಿಲ್ಲೆಯ ಕಟ್ಟಡ ಮತ್ತು ಇತರೆ ನಿರ್ಮಾಣ ಹಾಗೂ ವಲಸೆ ಕಾರ್ಮಿಕರಿಗೆ ಸುರಕ್ಷಾ ಮತ್ತು ನೈರ್ಮಲೀಕರಣ ಹಾಗೂ ಆಹಾರ ಧಾನ್ಯಗಳ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಕಿಟ್ ವಿತರಿಸಿ ಮಾತನಾಡಿದ ಅವರು, ಕ್ಷೇತ್ರದ ಕಾರ್ಮಿಕರಿಗೆ ಒಟ್ಟು ಮೂರು ಸಾವಿರ ಕಿಟ್ ವಿತರಣೆ ಮಾಡಲಾಗುತ್ತಿದ್ದು, ನೋಂದಣಿ ಮಾಡದ ಕಾರ್ಮಿಕರು ಸಹ ಈ ಸೌಲಭ್ಯ ಪಡೆಯಲ್ಲಿದ್ದಾರೆ ಎಂದರು.

ಜಿಲ್ಲಾ ಕಾರ್ಮಿಕ ಅಧಿಕಾರಿ ಎಸ್.ಜಿ. ಖೈನೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ಶಾಸಕರಿಂದ ಕಿಟ್ ವಿತರಣೆ ಜರುಗಿತು.

ಬಬಲಾದಿ ಮಠಕ್ಕೆ ಹರಿದು ಬಂದ ಭಕ್ತಸಾಗರ

ತಹಶೀಲ್ದಾರ ಸಿ.ಎ.ಗುಡದಿನ್ನಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ, ಪಿಎಸೈ ರವಿ ಯಡವಣ್ಣವರ, ಎಎಸೈ ಎನ್.ಬಿ.ಕುಂಬಾರ, ಕಾರ್ಮಿಕ ನಿರೀಕ್ಷಕರಾದ ಜಗದೇವಿ ಸಜ್ಜನ, ಉಮಾಶ್ರೀ ಕೋಳಿ, ಶರಣು, ಬಿಜೆಪಿ ಮಂಡಲ ಅಧ್ಯಕ್ಷ ಭೀಮನಗೌಡ ಸಿದರಡ್ಡಿ, ಗಾಯತ್ರಿ ದೇವೂರ, ಶ್ರೀಶೈಲ ಕಬ್ಬಿನ, ರಮೇಶ ಮಸಬಿನಾಳ, ಸಂಗಮೇಶ ಹಳಿಮನಿ, ಮುತ್ತು ತೋಟದ, ದಿನೇಶ ಪಾಟೀಲ ರಾಘವೇಂದ್ರ ಗುಡಿಮನಿ, ಸೇರಿದಂತೆ ಕಟ್ಟಡ ಕಾರ್ಮಿಕರು ಹಾಗೂ ಬಿಜೆಪಿ ಕಾರ್ಯಕರ್ತರು ಇದ್ದರು.

ವರದಿ : ಪ್ರದೀಪ ಕುಲಕರ್ಣಿ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!