- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಸಮಾನತೆಯ ಪ್ರತಿಪಾದಕ ವಿಶ್ವಗುರು ಬಸವಣ್ಣ

ಸಮಾನತೆಯ ಪ್ರತಿಪಾದಕ ವಿಶ್ವಗುರು ಬಸವಣ್ಣ

ವಿಜಯಪುರ : ವಿಶ್ವಗುರು ಬಸವಣ್ಣನವರು ಸಮಾನತೆಯ ಪ್ರತಿಪಾದರಾಗಿದ್ದರು ಎಂದು ಶೂನ್ಯಪೀಠ ಪೀಠ ಪ್ರಶಸ್ತಿಯ ಪುರಸೃತ ಹಾಸಿಂಪೀರ ವಾಲೀಕಾರ ಅಭಿಪ್ರಾಯ ವ್ಯಕ್ತಪಡಿಸಿದರು.

ಇಂದು ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ವಿಶ್ವ ಗುರು ಬಸವಣ್ಣನವರ ಜಯಂತಿಯನ್ನು ಆಚರಿಸಿ ಮಾತನಾಡಿ ಹನ್ನೆರಡನೇ ಶತಶತಮಾನದಲ್ಲಿ ಭಕ್ತಿ ಭಂಡಾರಿ ಬಸವಣ್ಣನವರು ಮಾನವಕುಲ ಶ್ರೇಷ್ಠ. ಮೇಲು ಕೀಳು ಮಾಡದೆ ಸಮಾನತೆಯ ಸಮಾಜ ನಿರ್ಮಾಣ ಮಾಡುವ ಅವರ ಕನಸು ಅಚಲವಾಗಿತ್ತು. ವಚನಗಳ ಮೂಲಕ ಮೂಢನಂಬಿಕೆಗಳನ್ನು ಹೋಗಲಾಡಿಸಿ ಜನರಲ್ಲಿ ಜಾಗೃತಿ ಮೂಡಿಸಿದರು. ಕಾಯಕ, ದಾಸೋಹ ಸಿದ್ಧಾಂತಕ್ಕೆ ಮಹತ್ವ ನೀಡಿದರು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಾನವ ಹಕ್ಕುಗಳ ಕಲ್ಯಾಣ ಮಂಡಳಿಯ ಜಿಲ್ಲಾಧ್ಯಕ್ಷ ವಿಜಯಕುಮಾರ ಘಾಟಗೆ ಮಾತನಾಡಿ , ಬಸವಣ್ಣನವರು ಮಹಾನ್ ಸಮಾಜವಾದಿಯಾಗಿದ್ದರು. ಸಮಾಜದ ಸರ್ವಾಂಗಿಣ ಪ್ರಗತಿಗೆ ಕಾಯಕ ಸಂಸ್ಕೃತಿ ಅತ್ಯವಶ್ಯ. ದುಡಿಮೆ ಸತ್ಯ ಶುದ್ಧವಾಗಿರಬೇಕು. ಇತರರನ್ನು ನೋಯಿಸಿ, ವಂಚಿಸಿ. ಬಳಲಿಸಿ ತಂದ ಸಂಪತ್ತು ಅತ್ಯಂತ ಕಟುವಾಗಿ ಟೀಕಿಸಿ ಅದು ದೇವರಿಗೆ ಸಲ್ಲದು ಎಂದರು.

ಈ ಕಾರ್ಯಕ್ರಮದಲ್ಲಿ ಮುಖಂಡರಾದ ಆಕಾಶ ಹಿಪ್ಪರಗಿ, ಸಚೀನ ರಾಠೋಡ ಉಪಸ್ಥಿತರಿದ್ದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!