- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಸಮಯಕ್ಕೆ ಸಿಗದ ಸೂಕ್ತ ಚಿಕಿತ್ಸೆ, ಗರ್ಭದಿಂದ ಹೊರ ಬಂದ ಮಗುವಿನ ಕಾಲು, ವಿಜಯಪುರ ಜಿಲ್ಲೆಯಲ್ಲೊಂದು ಧಾರುಣ...

ಸಮಯಕ್ಕೆ ಸಿಗದ ಸೂಕ್ತ ಚಿಕಿತ್ಸೆ, ಗರ್ಭದಿಂದ ಹೊರ ಬಂದ ಮಗುವಿನ ಕಾಲು, ವಿಜಯಪುರ ಜಿಲ್ಲೆಯಲ್ಲೊಂದು ಧಾರುಣ ಘಟನೆ

ವಿಜಯಪುರ : ಗರ್ಭೀಣಿ ಮಹಿಳೆಯೊಬ್ಬಳಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಹೆರಿಗೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದರೂ ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯದೆ ಹೆರಿಗೆಯ ಮುನ್ನವೇ ನವಜಾತ ಶಿಶುವಿನ ಕಾಲು ಹೊರೆಗೆ ಬಂದು, ಹೊಟ್ಟೆಯಲ್ಲಿಯೇ ಸಾವನ್ನಪ್ಪಿರುವ ಧಾರುಣ ಘಟನೆಯೊಂದು ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.

ವಿಜಯಪುರ ಜಿಲ್ಲೆ ಬಬಲೇಶ್ವರ ಪಟ್ಟಣದ ನಿವಾಸಿ ಗರ್ಭೀಣಿ ಹನುಮವ್ವ ಕೊರವರ ಎಂಬವರನ್ನು ಬೆಳಿಗ್ಗೆ ಬಬಲೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ. ಆದರೆ ಆಕೆಯ ತಾಯಿ ಕಾರ್ಡ್ ನಲ್ಲಿ ಹೈರಿಸ್ಕ್ ಪ್ರೆಗ್ನೆನ್ಸಿ ಎಂದು ಉಲ್ಲೇಖ ಮಾಡಿದ್ದ ಕಾರಣ ವಿಜಯಪುರಕ್ಕೆ ಕರೆದುಕೊಂಡು ಹೋಗು ಎಂದು ವೈದ್ಯರು ಸೂಚನೆ ನೀಡಿದ್ದಾರೆ. ಅದರಂತೆ ಆಂಬ್ಯೂಲೆನ್ಸ್ ಮೂಲಕ ವಿಜಯಪುರದ ವಿವಿಧ ಖಾಸಗಿ ಆಸ್ಪತ್ರೆಗಳು ಕರೆದುಕೊಂಡು ಹೋದರು ಯಾರೂ ರೋಗಿಯನ್ನು ದಾಖಲಿಸಿಕೊಂಡಿಲ್ಲ. ಕೊನೆಗೆ ಜಲನಗರದ ಸಂಜೀವ ಹೆರಿಗೆ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಅಷ್ಟರೊಳಗಾಗಿ ಮಗುವಿನ ಕಾಲು ಹೊರಗಡೆ ಬಂದಿದ್ದವು. ಇದರಿಂದ ಮಾನವೀಯ ದೃಷ್ಟಿಯಿಂದ ವೈದ್ಯ ಡಾ. ವಿಜಯಕುಮಾರ ಗರ್ಭೀಣಿಯನ್ನು ದಾಖಲಿಸಿಕೊಂಡು ಹೆರಿಗೆ ಮಾಡಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ಬಹಳ ತಡವಾಗಿದ್ದರಿಂದ ಹೊಟ್ಟೆಯೋಳಗೆ ಮಗುವಿನ ಕುತ್ತಿಗೆ ಮೂರು ಸುತ್ತು ಕರಳು ಸುತ್ತಿಕೊಂಡು ಸಾವನ್ನಪ್ಪಿದೆ. ವೈದ್ಯರು ಕನಿಷ್ಟ ತಾಯಿಯನ್ನಾದರೂ ಉಳಿಸಬೇಕೆಂದು ಶಸ್ತ್ರ ಚಿಕಿತ್ಸೆ ಮೂಲಕ ಮೃತ ಮಗುವನ್ನು ಹೊರಗೆ ತೆಗೆದು ತಾಯಿಯ ಜೀವ ರಕ್ಷಿಸಿದ್ದಾರೆ.

ಗರ್ಭೀಣಿ ಹನುಮವ್ವ ಪತಿ, ಸಹೋದರಿ, ಅತ್ತೆ ಹಾಗೂ ಅವರ ಸಂಬಂಧಿಕರು ಬಬಲೇಶ್ವರದಿಂದ ಕರೆದುಕೊಂಡು ಬಂದು ಆಸ್ಪತ್ರೆ ಆಸ್ಪತ್ರೆ ಅಲೆದಿದ್ದಾರೆ. ಮೊದಲು ಜಿಲ್ಲಾಸ್ಪತ್ರೆಗೆ ತೆರಳಿದ್ದರು, ಆದರೆ ಅಲ್ಲಿ ಪಾಳೆ ಇರುವುದರಿಂದ ಅಲ್ಲಿ ಬೇಡ ಎಂದು ಖಾಸಗಿ ಆಸ್ಪತ್ರೆ ಹುಡುಕಾಡಿದ್ದಾರೆ‌‌‌. ಜೊತೆಗೆ ಹನುವ್ವಗೆ  ಈ ಹಿಂದೆ ಎರಡು ಬಾರಿ ಗರ್ಭೀಣಿಯಾಗಿದ್ದಾಗ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಳು. ಆದರೆ ಹೈರಿಸ್ಕ್ ಪ್ರೆಗ್ನೆನ್ಸಿ ಕಾರಣ ಎರಡು ಮಗು ಸಾವನ್ನಪ್ಪಿದ್ದವು. ಇದಿಂದಾಗಿ ಈ ಬಾರಿ ಜಿಲ್ಲಾಸ್ಪತ್ರೆ ಬದಲಾಗಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಹೆರಿಗೆ ಮಾಡಿಸಿಕೊಳ್ಳಬೇಕೆಂದು ಖಾಸಗಿ ಆಸ್ಪತ್ರೆ ಹುಡುಕಾಟ ನಡೆಸಿದ್ದಾರೆ. ಇದು ಸಾಕಷ್ಟು ಸಮಯ ತೆಗೆದುಕೊಂಡಿದದೆ. ಇದರಿಂದಾಗಿ‌ ಮಗು ಸಾವನಪ್ಪಿದೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!