- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಸತತ ಏಳ ಭಾರಿ ಭೂಕಂಪನ. ಪರಿಣಿತ ತಜ್ಞರ ಭೇಟಿ

ಸತತ ಏಳ ಭಾರಿ ಭೂಕಂಪನ. ಪರಿಣಿತ ತಜ್ಞರ ಭೇಟಿ

ವಿಜಯಪುರ : ಜಿಲ್ಲೆಯ ಕೊಲ್ಹಾರ ತಾಲ್ಲೂಕಿನ ಮಲಘಾಣ ಭಾಗದಲ್ಲಿ ಗುರುವಾರ ಬೆಳಿಗ್ಗೆಯಿಂದ ಏಳು ಬಾರಿ ಭೂಕಂಪನದ ಅನುಭವವಾಗಿದ್ದು, ಸತತ ಘಟನೆಯಿಂದ ಜನತೆಯಲ್ಲಿ ಆತಂಕ ಹೆಚ್ಚುವಂತಾಗಿದೆ.

ಬೆಳಿಗ್ಗೆಯಿಂದ ಸಂಜೆವರೆಗೆ ಐದು ಬಾರಿ ಹಾಗೂ ತಡರಾತ್ರಿ 1:30 ರ ಹೊತ್ತಿಗೆ ಮತ್ತು ಶುಕ್ರವಾರ ಬೆಳಿಗ್ಗೆ 6:45 ರ ಸುಮಾರಿಗೆ ಬಾರಿ ಶಬ್ದದೊಂದಿಗೆ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಮಲಘಾಣದ ಹಿರಿಯರಾದ ಅಪ್ಪಣ್ಣ ನಿಂಗನೂರು ತಿಳಿಸಿದ್ದಾರೆ.

ಈ ಭಾಗದಲ್ಲಾಗುತ್ತಿರುವ ಸರಣಿ ಭೂಕಂಪನಗಳ ಕುರಿತು ಅಧ್ಯಯನ ನಡೆಸಲು ಹೈದ್ರಾಬಾದಿನ ರಾಷ್ಟ್ರೀಯ ಭೌಗೋಳಿಕ ಸಂಶೋಧನಾ ಸಂಸ್ಥೆ (ಎನ್.ಜಿ.ಆರ್.ಐ) ಯ ಪರಿಣಿತ ಭೂವಿಜ್ಞಾನಿಗಳ‌ ತಂಡ ಅಕ್ಟೋಬರ್ 20 ರಂದು ಮಸೂತಿ‌ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದೆ.

ಸದ್ಯ ಮಸೂತಿಯಲ್ಲಿ ತಾತ್ಕಾಲಿಕ ಸಿಸ್ಮೋಮೀಟರ್ ಅಳವಡಿಸಿದ್ದು, ಈ ಭಾಗದ ಸುಮಾರು ಹತ್ತು ಕಿ.ಮೀ ವ್ಯಾಪ್ತಿಯ ಭೂಭಾಗದಲ್ಲಾಗುವ ಚಲನವಲನಗಳು ಹಾಗೂ ಪ್ರತಿ ಕಂಪನಗಳ ಮಾಹಿತಿ ಸಂಗ್ರಹಿಸಿ ನೇರವಾಗಿ ಹೈದ್ರಾಬಾದಿನ ಭೌಗೋಳಿಕ ಸಂಶೋಧನ ಕೇಂದ್ರಕ್ಕೆ ಮಾಹಿತಿ ರವಾನೆಯಾಗುತ್ತದೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!