- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ

ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ

ಬಸವನಬಾಗೇವಾಡಿ: ಪಟ್ಟಣದ ತೆಲಗಿ ರಸ್ತೆಯ ಗಣಪತಿ ವೃತ್ತದಲ್ಲಿನ ಶ್ರೀವೀರಭದ್ರೇಶ್ವರ ಜಾತ್ರಾ ಮಹೋತ್ಸವ ಸಂಭ್ರಮದಿಂದ ಜರುಗಿತು. ವೀರಭದ್ರೇಶ್ವರ ದೇವಸ್ಥಾನದಲ್ಲಿ ವೀರಭದ್ರೇಶ್ವರ ಮೂರ್ತಿಗೆ ರುದ್ರಾಭಿಷೇಕ ವಿಶೇಷ ಪೂಜೆ ಸಲ್ಲಿಸಲಾಯಿತು.

ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಪುರವಂತರನ್ನು ದೇವಸ್ಥಾನಕ್ಕೆ ಸಕಲ ವಾದ್ಯ ವೈಡರ‍್ಯದೊಂದಿಗೆ ಬರಮಾಡಿ ಕೊಳ್ಳುವುದು ನಂತರ ಕಳಸವನ್ನು ಬರಮಾಡಿಕೊಳ್ಳಲಾಯಿತು. ವೀರಭದ್ರೇಶ್ವರ ದೇವರ ಮೂರ್ತಿ ಹೊತ್ತ ಪಲ್ಲಕ್ಕಿ ವೀರಭದ್ರೇಶ್ವರ ದೇವಸ್ಥಾನದಿಂದ ಕಾಳಹಸ್ತೇಶ್ವರಮಠದ ಮುಂಭಾಗ ಗಣಪತಿ ವೃತ್ತ, ವಿರಕ್ತಮಠ, ಗೌರಿಶಂಕರ ದೇವಾಲಯ, ಮಹಾರಾಜರ ಮಠ, ದ್ಯಾಮವ್ವನ ದೇವಸ್ಥಾನ, ವಿವೇಕಾನಂದ ಗಲ್ಲಿ, ಅಗಸಿ ಮಾರ್ಗವಾಗಿ ಬಸವೇಶ್ವರ ವೃತ್ತದ ಮಾರ್ಗವಾಗಿ ದಿವಟಿ, ಸುಮಂಗಲೇಯರ ಅರತಿ, ಪುರವಂತರ ಹಾಡು, ಒಡಪುಗಳ ಸೇವೆಯೊಂದಿಗೆ ಬಸವತೀರ್ಥ ಬಾವಿಗೆ ಆಗಮಿಸಿ ದೇವರ ಮೂರ್ತಿಗೆ ಅಭಿಷೇಕ ವಿಶೇಷ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಪಂಚಾಕ್ಷರಿ ಕಾಳಹಸ್ತೇಶ್ವರಮಠ, ಬಸಯ್ಯ ಮಠಪತಿ, ಪುರಸಭೆ ಸದಸ್ಯ ಅಶೋಕ ಗುಳೇದ, ಶಿವಣ್ಣ ಬುರ್ಲಿ, ವೀರಭದ್ರಪ್ಪ ಬಡಿಗೇರ,ಸುಮಿತ್ರಾ ನಾಗೂರ, ಈರಮ್ಮ ಹಡಪದ, ಹೇಮಾ ಬಡಿಗೇರ, ಲಕ್ಷ್ಮೀಬಾಯಿ ಹಡಪದ, ಗಿರಿಜಾ ಜೈನಾಪುರ, ವನಿತಾ ಬಾಗೇವಾಡಿ, ವೀಣಾ ಹಡಪದ, ಅರುಣಾ ಬಡಿಗೇರ, ಜ್ಯೋತಿ ಬಡಿಗೇರ ಸೇರಿದಂತೆ ನೂರಾರು ಭಕ್ತರು ಜಾತ್ರಾ ಉತ್ಸವದಲ್ಲಿ ಪಾಲ್ಗೊಂಡಿದ್ದರು.

ವರದಿ : ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!