- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಸಂಕಷ್ಟದ ಸಂದರ್ಭದಲ್ಲಿ ಕಾಯಕ ದ್ವಿಗುಣಗೊಳಿಸಿ : ಮಾಜಿ ಸಚಿವ ಎಂ.ಬಿ.ಪಾಟೀಲ್

ಸಂಕಷ್ಟದ ಸಂದರ್ಭದಲ್ಲಿ ಕಾಯಕ ದ್ವಿಗುಣಗೊಳಿಸಿ : ಮಾಜಿ ಸಚಿವ ಎಂ.ಬಿ.ಪಾಟೀಲ್

ವಿಜಯಪುರ : ಕೋವಿಡ್ ಸಂಕಷ್ಟದ ಈ ಸಂದರ್ಭದಲ್ಲಿ ನಾವು ನಮ್ಮ ಕಾಯಕವನ್ನು ದ್ವಿಗುಣಗೊಳಿಸಿ, ಹೆಚ್ಚು-ಹೆಚ್ಚು ರೋಗಿಗಳ ಸೇವೆ ಮಾಡಿ, ಅವರ ಕುಟುಂಬದವರ ಮುಖದಲ್ಲಿ ಮಂದಹಾಸ ಮೂಡಿಸಿದರೆ ಮಾತ್ರ ನಮ್ಮನ್ನಗಲಿದ ಡಾ.ಎಂ.ಎಸ್.ಬಿರಾದಾರ ಅವರಿಗೆ ನಿಜವಾದ ಶ್ರದ್ಧಾಂಜಲಿ ಸಲ್ಲಿಸಿದಂತಾಗುತ್ತದೆ ಎಂದು ಬಿ.ಎಲ್.ಡಿ.ಇ ಅಧ್ಯಕ್ಷ, ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿದರು.

ಬಿ.ಎಲ್.ಡಿ.ಇ ಡೀಮ್ಡ್ ವಿವಿಯಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಆಸ್ಪತ್ರೆಯ ವೈದ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ವಿಶ್ವವಿದ್ಯಾಲಯದ ಉಪಕುಲಪತಿ ಹಾಗೂ ಇದುವರೆಗೆ ಎಲ್ಲ ವೈದ್ಯರಿಗೆ ಮಾರ್ಗದರ್ಶಕರಾಗಿದ್ದ ಡಾ.ಎಂ.ಎಸ್.ಬಿರಾದಾರ ಅವರ ಆಕಸ್ಮಿಕ ಅಗಲಿಕೆಯ ನಂತರ ನಾವ್ಯಾರು ಧೃತಿಗೆಡುವುದು ಬೇಡ. ಇಂತಹ ಸಂಕಷ್ಟದ ಸಮಯದಲ್ಲಿ ನಾವು ಧೃತಿಗೆಟ್ಟು ಕೈಚೆಲ್ಲಿ ಕುಳಿತರೆ ರೋಗಿಗಳಿಗೆ ಸೇವೆ ಮಾಡುವವರು ಯಾರು? ಎಂದ ಅವರು ಈ ಕೊರೊನಾ ಹೋರಾಟದಲ್ಲಿ ನಿಮ್ಮೆಲ್ಲ ವೈದ್ಯರೊಂದಿಗೆ ನಾನೇ ಮುಂದೆ ನಿಂತು ನಿಮ್ಮ ಜೊತೆಯಾಗಿ, ಕೆಲಸ ಮಾಡುತ್ತೇನೆ. ನಾವೆಲ್ಲ ಒಂದು ತಂಡವಾಗಿ ಒಮ್ಮತದಿಂದ ಈ ಸಂಕಷ್ಟವನ್ನು ಸವಾಲಾಗಿ ಸ್ವೀಕರಿಸಿ ದುಡಿಯೋಣ. ಎಲ್ಲ ವೈದ್ಯರಿಂದ ನಾನು ಈ ಸೇವೆಯನ್ನು ಬಯಸುತ್ತೇನೆ ಎಂದರು.

ಸಮಉಪಕುಲಪತಿ ಡಾ.ಆರ್.ಎಸ್ ಮುಧೋಳ, ಡಾ.ಎಂ.ಎಸ್.ಬಿರಾದಾರ ಅವರ ಸೇವೆಯನ್ನು ಸ್ಮರಿಸಿ, ಕಣ್ಣಿಟ್ಟರು. ಹಿರಿಯ ವೈದ್ಯ ಡಾ.ಆರ್.ಸಿ.ಬಿದರಿ, ಡಾ.ರಾಜೇಶ ಹೊನ್ನುಟಗಿ ಮಾತನಾಡಿದರು.

ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ಆಸ್ಪತ್ರೆಯ ಎಲ್ಲ ವಿಭಾಗ ಮುಖ್ಯಸ್ಥರು, ಹಿರಿಯ ವೈದ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. ಆರಂಭದಲ್ಲಿ ಡಾ.ಎಂ.ಎಸ್.ಬಿರಾದಾರ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನ ಆಚರಿಸಲಾಯಿತು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!